ETV Bharat / sports

ಟಿ-20 ವಿಶ್ವಕಪ್ ENG vs WI : ವಿಂಡೀಸ್ ವಿರುದ್ಧ ಟಿ-20 ವಿಶ್ವಕಪ್​​ ಇತಿಹಾಸದಲ್ಲಿ ಮೊದಲ ಜಯ ಸಾಧಿಸಿದ ಇಂಗ್ಲೆಂಡ್​​

55 ರನ್​ಗಳ ಸುಲಭ ಟಾರ್ಗೆಟ್​ ಬೆನ್ನಟ್ಟಿದ ಮೊರ್ಗನ್​ ಪಡೆ ಕೇವಲ 8.2 ಓವರ್​​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿದೆ. ಬಟ್ಲರ್​ ಅಜೆಯ 24 ರನ್​ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಟಿ-20 ವಿಶ್ವಕಪ್ ENG v WI
ಟಿ-20 ವಿಶ್ವಕಪ್ ENG v WI
author img

By

Published : Oct 23, 2021, 10:13 PM IST

ದುಬೈ : ಟಿ 20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ​ವೆಸ್ಟ್​ ಇಂಡಿಸ್ ವಿರುದ್ಧ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್​ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಇಂಗ್ಲೆಂಡ್​ ತಂಡ ಟಿ-20 ವಿಶ್ವಕಪ್​​ನಲ್ಲಿ ವಿಂಡೀಸ್​​ ವಿರುದ್ಧ ಮೊದಲ ಜಯ ಸಾಧಿಸಿದೆ.

55 ರನ್​ಗಳ ಸುಲಭ ಟಾರ್ಗೆಟ್​ ಬೆನ್ನತ್ತಿದ್ದ ಮೊರ್ಗನ್​ ಪಡೆ ಕೇವಲ 8.2 ಓವರ್​​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿದೆ. ಬಟ್ಲರ್​ ಅಜೇಯ 24 ರನ್​ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಇನ್ನುಳಿದಂತೆ ರಾಯ್​ (11), ಬೈರ್ಸ್ಟೋವ್ (9), ಅಲಿ (3), ಲಿವಿಂಗ್‌ಸ್ಟೋನ್(1) ಹಾಗೂ ನಾಯಕ ಮೋರ್ಗನ್​​​ ಅಜೇಯ 7 ರನ್​ಗಳಿಸಿದರು. ಇನ್ನು ವಿಂಡೀಸ್​ ಪರ ಅಕಿಲ್ ಹೊಸೈನ್ 2ವಿಕೆಟ್​ ಪಡೆದು ಮಿಂಚಿದರು.

ಇದಕ್ಕೂ ಮೊದಲು ಟಾಸ್​ ಸೋತು ಬ್ಯಾಟಿಂಗ್‌ಗೆ ಇಳಿದ ವಿಂಡೀಸ್​​ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್​ ಆಗಿ ಕಣಕ್ಕಿಳಿದ ​​ಎವಿನ್ ಲೂಯಿಸ್ ಮತ್ತು ಸಿಮನ್ಸ್ ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ಎಡವಿತು.

ಎವಿನ್ ಲೂಯಿಸ್ ಕೇವಲ 6 ರನ್​ಗಳಿಸಿ ವೋಕ್ಸ್‌ಗೆ ವಿಕೆಟ್​​ ಒಪ್ಪಿಸಿದರೆ, ಇತ್ತ ಸಿಮನ್ಸ್​​ ಕೇವಲ 3 ರನ್​ಗೆ ಮೋಯಿನ್​ ಅಲಿಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಬ್ಯಾಟಿಂಗ್​ ದೈತ್ಯ ಕ್ರಿಸ್​ ಗೇಲ್​ (13), ಶಿಮ್ರಾನ್ ಹೆಟ್ಮಾಯರ್ (9), ಬ್ರಾವೋ (5), ಪೂರನ್​​ (1), ನಾಯಕ ಪೋಲಾರ್ಡ್​ (6), ರಸೇಲ್​​ (0), ಮೆಕಾಯ್(0), ರವಿ ರಾಂಪಾಲ್ (3) ರನ್‌ ಗಳಿಸಿ ಔಟಾದರು.

ಕ್ರಿಸ್​ ಗೇಲ್ ಗಳಿಸಿದ 13 ರನ್​​ ವಿಂಡೀಸ್​ ಆಟಗಾರರು ಗಳಿಸಿದ ಅತ್ಯಧಿಕ ರನ್​ ಆಗಿದೆ. ಗೇಲ್​ ಬಿಟ್ಟರೆ ಬೇರೆ ಯಾವುದೇ ಆಟಗಾರರು ಎರಡಂಕಿ ಮೊತ್ತ ದಾಟಲಿಲ್ಲ. ಇಂಗ್ಲೆಂಡ್​ ಉತ್ತಮ ಬೌಲಿಂಗ್​ ದಾಳಿ ನಡೆಸಿದೆ. ಆದಿಲ್ ರಶೀದ್ 4 ವಿಕೆಟ್​ ಪಡೆದು ಮಿಂಚಿದರೆ, ಇವರಿಗೆ ಉತ್ತಮ ಸಾಥ್​ ನೀಡಿದ ಮೋಯಿನ್​ ಅಲಿ 2, ಮಿಲ್ಸ್​ 2 ವಿಕೆಟ್​ ಪಡೆದು ವಿಂಡೀಸ್​ ಪಡೆಯನ್ನ ಕಟ್ಟಿ ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.