ETV Bharat / sports

Cricket World Cup 2023 Trophy: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಪ್ರದರ್ಶನ.. - ಈನಾಡು ಎಂಡಿ ಸಿಎಚ್​ ಕಿರಣ್

18 ದೇಶಗಳಿಗೆ ಪ್ರವಾಸ ಮಾಡಿದ ವಿಶ್ವಕಪ್​ ಪ್ರಚಾರದ ಅಂಗವಾಗಿ ವಿಶ್ವದ ಅತಿದೊಡ್ಡ ಫಿಲ್ಮ್ ಸ್ಟುಡಿಯೋ ಸಂಕೀರ್ಣವಾಗಿರುವ ರಾಮೋಜಿ ಫಿಲ್ಮ್ ಸಿಟಿ ಅಂಗಳಕ್ಕೆ ಬಂದಿದೆ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ರಿಕೆಟ್ ವಿಶ್ವಕಪ್ ಟ್ರೋಫಿ

author img

By ETV Bharat Karnataka Team

Published : Sep 20, 2023, 7:47 PM IST

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ರಿಕೆಟ್ ವಿಶ್ವಕಪ್ ಟ್ರೋಫಿ

ಹೈದರಾಬಾದ್​: ಮುಂದಿನ ತಿಂಗಳು 5 ರಿಂದ ಭಾರತದಲ್ಲಿ ಏಕದಿನ ಕ್ರಿಕೆಟ್ ಮೇನಿಯಾ ಪ್ರಾರಂಭವಾಗಲಿದೆ. ಈ ಸಂಭ್ರಮಾಚರಣೆಗಳನ್ನು ಮತ್ತಷ್ಟು ದ್ವಿಗುಣಗೊಳಿಸಲು ಕ್ರಿಕೆಟ್ ವಿಶ್ವಕಪ್ ಟ್ರೋಫಿ ಪ್ರವಾಸದ ಭಾಗವಾಗಿ ಬುಧವಾರ ರಾಮೋಜಿ ಫಿಲ್ಮ್ ಸಿಟಿ ತಲುಪಿದೆ. ರಾಮೋಜಿ ಫಿಲ್ಮ್ ಸಿಟಿ ಎಂಡಿ ವಿಜಯೇಶ್ವರಿ ಮತ್ತು ಪ್ರಿಯಾ ಫುಡ್ಸ್ ನಿರ್ದೇಶಕಿ ಸಹಾರಿ ಟ್ರೋಫಿಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಈನಾಡು ಎಂಡಿ ಸಿಎಚ್​ ಕಿರಣ್, ಈನಾಡು ಎಪಿ, ತೆಲಂಗಾಣ ಸಂಪಾದಕರಾದ ನಾಗೇಶ್ವರರಾವ್, ಡಿಎನ್ ಪ್ರಸಾದ್, ಈಟಿವಿ ಸಿಇಒ ಬಾಪಿನೀಡು, ರಾಮೋಜಿ ಗ್ರೂಪ್ ಅಧ್ಯಕ್ಷ ಎಚ್.ಆರ್. ಗೋಪಾಲ್ ರಾವ್ ಸೇರಿದಂತೆ ಸಂಸ್ಥೆಗಳ ಹಲವು ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

2023ರ ವಿಶ್ವಕಪ್​ನ ಆತಿಥ್ಯ ಭಾರತ ವಹಿಸಿಕೊಂಡಿದ್ದು, ಟೂರ್ನಿ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿರುವ ಈ ವಿಶ್ವಕಪ್‌ನಲ್ಲಿ ಒಟ್ಟು 10 ದೇಶಗಳು ಭಾಗವಹಿಸಲಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಷ್ಟ್ರಗಳು ವಿಶ್ವಕಪ್​ಗೆ ತಯಾರಿ ನಡೆಸುತ್ತಿವೆ. ಏಷ್ಯನ್ ರಾಷ್ಟ್ರಗಳು ಏಕದಿನ ಏಷ್ಯಾಕಪ್​ ಮೂಲಕ ತಯಾರಿ ಮಾಡಿಕೊಂಡಿವೆ. ಅಲ್ಲದೇ ಭಾರತ ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾದ ಜೊತೆಗೆ ಮೂರು ಏಕದಿನ ಸರಣಿಯನ್ನು ಆಡಲಿದೆ.

ಭಾರತದಲ್ಲಿ ಐಸಿಸಿ ವಿಶ್ವಕಪ್ 2023: ಭಾರತ ಆಯೋಜಿಸಿರುವ ಈ ಪಂದ್ಯಾವಳಿಯು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಈ ಹತ್ತು ತಂಡಗಳಲ್ಲಿ, ಆತಿಥೇಯ ತಂಡವು ಖಂಡಿತವಾಗಿಯೂ ಭಾಗವಹಿಸಲು ಅರ್ಹವಾಗಿರುತ್ತದೆ. ಸುಮಾರು ಒಂದುವರೆ ತಿಂಗಳ ಕಾಲ ಆತಿಥೇಯ ದೇಶಗಳ ವಿವಿಧ ಸ್ಥಳಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ.

ಅಕ್ಟೋಬರ್​ 5 ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ನಡುವೆ ಪಂದ್ಯಗಳು ನಡೆಯಲಿವೆ. ಅಕ್ಟೋಬರ್​ 8 ರಂದು ಭಾರತ ವಿಶ್ವಕಪ್​ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾದ ವಿರುದ್ಧ ಆಡಲಿದೆ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ವಿಶ್ವಕಪ್​ನ ಸೆಮಿಫೈನಲ್ಸ್​ ಪಂದ್ಯಗಳು ನಡೆದರೆ, ನವೆಂಬರ್ 19 ರಂದು​​ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್​ ಪಂದ್ಯ ನಡೆಯಲಿದೆ. ಮುಂದಿನ ವಿಶ್ವಕಪ್​ 2027ರಲ್ಲಿ ನಡೆಯಲಿದ್ದು, ಇದರಲ್ಲಿ 14 ತಂಡಗಳು ಭಾಗವಹಿಸಲು ಅವಕಾಶ ಕಲ್ಪಿಸುವ ನೀತಿಗಳನ್ನು ರೂಪಿಸಲಾಗುತ್ತಿದೆ. ವಿಶ್ವಕಪ್ ಯಾವಾಗ ಆರಂಭವಾಗುತ್ತದೆ ಎಂದು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇಲ್ಲಿಯವರೆಗಿನ ಟ್ರೋಫಿ ಪ್ರವಾಸ: "ಔಟ್ ಆಫ್ ದಿಸ್ ವರ್ಲ್ಡ್" ಬಿಡುಗಡೆಯೊಂದಿಗೆ ಟ್ರೋಫಿ ಪ್ರವಾಸವನ್ನು ಗುರುತಿಸಿದ ನಂತರ, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿಯು ಕುವೈತ್, ಬಹ್ರೇನ್, ಮಲೇಷ್ಯಾ, ಯುಎಸ್​ಎ, ನೈಜೀರಿಯಾ, ಉಗಾಂಡಾ, ಫ್ರಾನ್ಸ್, ಇಟಲಿ ಮತ್ತು ಸೇರಿದಂತೆ 18 ದೇಶಗಳಿಗೆ ಪ್ರಯಾಣಿಸಿತು. ಆತಿಥೇಯ ಭಾರತಕ್ಕೆ ಮರಳುವ ಮೊದಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಕ್ಕೆ ಅಂತಿಮ ಭೇಟಿ ಕೊಡಲಾಗಿತ್ತು. ಜೂನ್ 27 ರಂದು ಭಾರತದಿಂದ ವಿದೇಶಕ್ಕೆ ಆರಂಭವಾದ ಟ್ರೋಫಿ ಪ್ರವಾಸವು ಸೆಪ್ಟೆಂಬರ್ 4 ರಂದು ಆತಿಥೇಯ ದೇಶಕ್ಕೆ ಮರಳಿದೆ.

ಇದನ್ನೂ ಓದಿ: ICC trophy: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023.. ರಾಮೋಜಿ ಫಿಲ್ಮ್ ಸಿಟಿ ಅಂಗಳದಲ್ಲಿ ವಿಶ್ವಕಪ್ ಟ್ರೋಫಿ​​ ಪ್ರದರ್ಶನಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.