ETV Bharat / sports

ಡ್ಯಾಶಿಂಗ್​ ಓಪನರ್​ ವಿರೇಂದ್ರ ಸೆಹ್ವಾಗ್​​ ಸೇರಿ ಮೂವರಿಗೆ ಐಸಿಸಿ ಹಾಲ್​ ಆಫ್​ ಫೇಮ್​ ಗೌರವ - ETV Bharath Karnataka

ಐಸಿಸಿ ಹಾಲ್​ ಆಫ್​ ಫೇಮ್​ ಗೌರವಕ್ಕೆ ಭಾರತದ ಲೆಜೆಂಡರಿ ಓಪನರ್ ವೀರೇಂದ್ರ ಸೆಹ್ವಾಗ್, ಮಾಜಿ ಭಾರತೀಯ ಮಹಿಳಾ ಟೆಸ್ಟ್ ನಾಯಕಿ ಡಯಾನಾ ಎಡುಲ್ಜಿ ಮತ್ತು ಶ್ರೀಲಂಕಾದ ಐಕಾನಿಕ್ ಸ್ಟಾರ್ ಅರವಿಂದ ಡಿ ಸಿಲ್ವಾ ಆಯ್ಕೆ ಆಗಿದ್ದಾರೆ.

ICC Hall of Fame
ICC Hall of Fame
author img

By ETV Bharat Karnataka Team

Published : Nov 13, 2023, 4:09 PM IST

ಹೈದರಾಬಾದ್​​: ಐಸಿಸಿಯಿಂದ ಪ್ರತಿ ವರ್ಷ ಕೊಡಲಾಗುವ ಹಾಲ್​ ಆಫ್​ ಫೇಮ್​ ಗೌರವಕ್ಕೆ ಈ ವರ್ಷ ಭಾರತದ ಇಬ್ಬರು ಲೆಜೆಂಡರಿ ಆಟಗಾರರು ಮತ್ತು ಓರ್ವ ಶ್ರೀಲಂಕಾ ಆಟಗಾರನ ಹೆಸರನ್ನು ತೆಗೆದುಕೊಳ್ಳಲಾಗಿದೆ. ಭಾರತದ ಲೆಜೆಂಡರಿ ಓಪನರ್ ವೀರೇಂದ್ರ ಸೆಹ್ವಾಗ್, ಮಾಜಿ ಭಾರತೀಯ ಮಹಿಳಾ ಟೆಸ್ಟ್ ನಾಯಕಿ ಡಯಾನಾ ಎಡುಲ್ಜಿ ಮತ್ತು ಶ್ರೀಲಂಕಾದ ಐಕಾನಿಕ್ ಸ್ಟಾರ್ ಅರವಿಂದ ಡಿ ಸಿಲ್ವಾ ಐಸಿಸಿ ಹಾಲ್​ ಆಫ್​ ಫೇಮ್​ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ 3 ಸೇರ್ಪಡೆಗಳೊಂದಿಗೆ, ಈಗ ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ 112 ಕ್ರಿಕೆಟಿಗರು ಇರಲಿದ್ದಾರೆ. ಈ ಪಟ್ಟಿಯಲ್ಲಿರುವ ಭಾರತದ 8 ಆಟಗಾರರಿದ್ದಾರೆ. ಅವರೆಂದರೆ ಸುನಿಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿನೂ ಮಂಕಡ್, ಡಯಾನಾ ಎಡುಲ್ಜಿ, ವೀರೇಂದ್ರ ಸೆಹ್ವಾಗ್.

ವೀರೇಂದ್ರ ಸೆಹ್ವಾಗ್: 1999 ರಿಂದ 2015 ರಲ್ಲಿ ಟೀಮ್​ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದ ಆಟಗಾರ ವಿರೇಂದ್ರ ಸೆಹ್ವಾಗ್​. ವಿರು ಹೆಸರು ಕೇಳಿದರೆ ಎಲ್ಲರೂ ಹೇಳುವ ಒಂದು ಮಾತು ಬೌಲರ್​ ಯಾರೆಂದು ನೋಡದೇ ಮೊದಲ ಬಾಲ್​ನ್ನೇ ಸಿಕ್ಸ್​ಗೆ ಕಳಿಸುವ ಬ್ಯಾಟರ್​. ಯಾವಾಗಲೂ ಕ್ರೀಸ್​ನಲ್ಲಿ ಹಾಡು ಗುನುಗುತ್ತಾ, ಬೌಂಡರಿ ಸಿಕ್ಸರ್​ಗಳ ಮಳೆಯನ್ನೇ ಸುರಿಸುತ್ತಿದ್ದ ಆಟಗಾರ. ಭಾರತ ಹಿಂದೆಂದೂ ಹಾಗೇ ಮುಂದೆಯೂ ಇಂತಹ ಡೇರಿಂಗ್​ ಓಪನಿಂಗ್​ ಬ್ಯಾಟರ್ ನ​​​ನ್ನು ಹೊಂದುವುದು ಅನುಮಾನ.

ವೀರೇಂದ್ರ ಸೆಹ್ವಾಗ್ 104 ಟೆಸ್ಟ್‌ಗಳನ್ನು ಆಡಿದ್ದು, 49.34ರ ಸರಾಸರಿಯಲ್ಲಿ 8,586 ರನ್‌ ಕಲೆ ಹಾಕಿದ್ದಲ್ಲದೇ ಬೌಲಿಂಗ್​ನಲ್ಲಿ 40 ವಿಕೆಟ್‌ ಪಡೆದಿದ್ದಾರೆ. 251 ಏಕದಿನ ಪಂದ್ಯಗಳಿಂದ 35.05ರ ಸರಾಸರಿಯಲ್ಲಿ 8,273 ರನ್‌ ಗಳಿಸಿ, 96 ವಿಕೆಟ್‌ ಪಡೆದಿದ್ದಾರೆ. 19 ಟಿ-20 ಆಡಿರುವ ವೀರು 21.88 ಸರಾಸರಿಯಲ್ಲಿ 394 ರನ್‌ ಗಳಿಸಿದ್ದಾರೆ. ಟೆಸ್ಟ್​​ನಲ್ಲಿ ತ್ರಿಶತಕ ಗಳಿಸಿದ ನಾಲ್ಕನೇ ಆಟಗಾರ ಸೆಹ್ವಾಗ್​. ಡಾನ್ ಬ್ರಾಡ್ಮನ್, ಬ್ರಿಯಾನ್ ಲಾರಾ ಮತ್ತು ಕ್ರಿಸ್ ಗೇಲ್ ಹೆಸರಿನಲ್ಲಿ ಉಳಿದ ಮೂರು ತ್ರಿಶತಕಗಳಿವೆ. ಸೆಹ್ವಾಗ್ ಎರಡು ತ್ರಿಶತಕ ಗಳಿಸಿದ್ದಾರೆ.

ಐಸಿಸಿ ಹಾಲ್ ಆಫ್ ಫೇಮ್‌ ಗೌರವದ ಬಗ್ಗೆ ಮಾತನಾಡಿದ ಸೆಹ್ವಾಗ್​,"ನನ್ನನ್ನು ಈ ಗೌರವದೊಂದಿಗೆ ಸೇರಿಸಿದ್ದಕ್ಕಾಗಿ ನಾನು ಐಸಿಸಿ ಮತ್ತು ತೀರ್ಪುಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಜೀವನದ ಬಹುಪಾಲು ಭಾಗವನ್ನು ನಾನು ಹೆಚ್ಚು ಇಷ್ಟಪಟ್ಟ 'ಕ್ರಿಕೆಟ್ ಚೆಂಡನ್ನು ಹೊಡೆಯಲು' ಕಳೆದಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಕುಟುಂಬ, ಸ್ನೇಹಿತರು ಮತ್ತು ನನಗಾಗಿ ನಿಸ್ವಾರ್ಥವಾಗಿ ಪ್ರಾರ್ಥಿಸಿದ ಅಸಂಖ್ಯಾತ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದಿದ್ದಾರೆ.

ಡಯಾನಾ ಎಡುಲ್ಜಿ: 1976 ರಿಂದ 1993 ರಲ್ಲಿ ಟೀಮ್​ ಇಂಡಿಯಾ ಪ್ರತಿನಿಧಿಸಿದ್ದರು. ಐಸಿಸಿ ಹಾಲ್​ ಆಫ್​ ಫೇಮ್​ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತದ ಮಹಿಳಾ ಕ್ರಿಕೆಟ್​ ಆಟಗಾರ್ತಿ ಆಗಿದ್ದಾರೆ. 20 ಟೆಸ್ಟ್‌ ಪಂದ್ಯಗಳಿಂದ 404 ರನ್​​ಗಳನ್ನು ಕಲೆಹಾಕಿರುವ ಅವರು 25.77 ಸರಾಸರಿಯಲ್ಲಿ 63 ವಿಕೆಟ್‌ ಪಡೆದುಕೊಂಡಿದ್ದಾರೆ. 34 ಏಕದಿನ ಕ್ರಿಕೆಟ್​ ಪಂದ್ಯಗಳಲ್ಲಿ 211 ರನ್‌ ಗಳಿಸಿದ್ದು, 16.84ರ ಸರಾಸರಿಯಲ್ಲಿ 46 ವಿಕೆಟ್‌ ಪಡೆದುಕೊಂಡಿದ್ದಾರೆ.

ಅರವಿಂದ ಡಿ ಸಿಲ್ವಾ: ಸಿಂಹಳೀಯರ ತಂಡವನ್ನು 1984 ರಿಂದ 2003ರ ವರೆಗೆ ಡಿ ಸಿಲ್ವಾ ಪ್ರತಿನಿಧಿಸಿದ್ದಾರೆ. ಎರಡು ದಶಕಗಳ ಕಾಲ ಶ್ರೀಲಂಕಾ ತಂಡಕ್ಕಾಗಿ ಆಲ್​ರೌಂಡರ್ ಸ್ಥಾನವನ್ನು ತುಂಬಿದರು. ಅಲ್ಲದೇ ಕೆಲ ಸಮಯ ಎರಡೂ ಮಾದರಿಯ ಕ್ರಿಕೆಟ್​ ನಾಯಕತ್ವ ವಹಿಸಿಕೊಂಡಿದ್ದಾರೆ. 93 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 42.97ರ ಸರಾಸರಿಯಲ್ಲಿ 6,361 ರನ್‌ ಕಲೆಹಾಕಿ 29 ವಿಕೆಟ್‌ ಪಡೆದುಕೊಂಡಿದ್ದಾರೆ. 308 ಏಕದಿನ ಪಂದ್ಯಗಳನ್ನು ಆಡಿರುವ ಡಿ ಸಿಲ್ವಾ 9,284 ರನ್‌ ಗಳಿಸಿ 106 ವಿಕೆಟ್‌ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​: ಪಂದ್ಯಶ್ರೇಷ್ಠ ಫೀಲ್ಡರ್ ಪ್ರಶಸ್ತಿ ಪಡೆದ ಸೂರ್ಯ ಕುಮಾರ್ ಯಾದವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.