ETV Bharat / sports

ಪ್ಯಾಲಿಸ್ತೇನ್ ಜನತೆ ಬೆಂಬಲಕ್ಕೆ ಮುಂದಾದ ಕ್ರಿಕೆಟರ್​ ಖವಾಜಾಗೆ ಐಸಿಸಿ ಅನುಮತಿ ನಿರಾಕರಣೆ

author img

By ANI

Published : Dec 25, 2023, 7:47 AM IST

ಗಾಜಾದಲ್ಲಿನ ಪ್ಯಾಲಿಸ್ತೇನ್​ ಜನರನ್ನು ಬೆಂಬಲಿಸಲು ಯತ್ನಿಸಿದ ಆಸ್ಟ್ರೇಲಿಯಾದ ಬ್ಯಾಟರ್ ಉಸ್ಮಾನ್ ಖವಾಜಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕಡೆಯಿಂದ ಹಿನ್ನಡೆ ಉಂಟಾಗಿದೆ.

ICC denies Usman Khawaja's application as he attempts to spread awareness about Gaza crisis
ಗಾಜಾ ಜನತೆ ಬೆಂಬಲಕ್ಕೆ ಮುಂದಾದ ಕ್ರಿಕೆಟರ್​ ಖವಾಜಾಗೆ ಐಸಿಸಿ ಅನುಮತಿ ನಿರಾಕರಣೆ

ಇಸ್ರೇಲ್​ ಹಾಗೂ ಹಮಾಸ್​ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಗಾಜಾದಲ್ಲಿನ ಪ್ಯಾಲಿಸ್ತೇನ್ ಸಂತ್ರಸ್ತರ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಆಸ್ಟ್ರೇಲಿಯಾದ ಬ್ಯಾಟರ್ ಉಸ್ಮಾನ್ ಖವಾಜಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅನುಮತಿ ನಿರಾಕರಿಸಿದೆ. ಖವಾಜಾ ತಮ್ಮ ಬ್ಯಾಟ್​ ಮತ್ತು ಶೂ ಮೇಲೆ ಪಾರಿವಾಳ ಹಾಗೂ ಆಲಿವ್​ ಕೊಂಬೆಯ ಸ್ಟಿಕ್ಕರ್​ ಹಾಕಿಕೊಳ್ಳಲು ಐಸಿಸಿ ವಿರೋಧಿಸಿದೆ.

ಐಸಿಸಿ ನಿಯಮಗಳ ಪ್ರಕಾರ ಆಟಗಾರರು ಮತ್ತು ತಂಡದ ಅಧಿಕಾರಿಗಳು ತಮ್ಮ ಉಡುಪು ಅಥವಾ ಸಲಕರಣೆಗಳ ಮೇಲೆ ವೈಯಕ್ತಿಕ ಸಂದೇಶ ಪ್ರದರ್ಶಿಸಲು ನಿಷೇಧವಿದೆ. ವರದಿಗಳ ಪ್ರಕಾರ, ಎಡಗೈ ಬ್ಯಾಟರ್ ಖವಾಜಾ ಪಾಕ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ಹಿನ್ನೆಲೆಯಲ್ಲಿ ಭಾನುವಾರ ಅಭ್ಯಾಸದ ವೇಳೆ ತಮ್ಮ ಶೂ ಹಾಗೂ ಬ್ಯಾಟ್‌ನ ಹಿಂಭಾಗದಲ್ಲಿ ಅಂತಹ ಲೋಗೋ ಹೊಂದಿರುವುದು ಕಂಡುಬಂದಿತ್ತು. ಈ ಲೋಗೋ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯೊಂದರಲ್ಲಿನ ಉಲ್ಲೇಖವನ್ನು ಸಾರುವಂತಿತ್ತು. 'ಎಲ್ಲಾ ಮಾನವರು ಸ್ವತಂತ್ರ, ಘನತೆ ಮತ್ತು ಹಕ್ಕುಗಳೊಂದಿಗೆ ಸಮಾನವಾಗಿ ಜನಿಸಿದ್ದಾರೆ. ಎಲ್ಲರೂ ಆತ್ಮಸಾಕ್ಷಿ ಹೊಂದಿದ್ದು, ಒಬ್ಬರಿಗೊಬ್ಬರು ಸಹೋದರತ್ವ ಮನೋಭಾವದಿಂದ ವರ್ತಿಸಬೇಕು' ಎಂಬುದಾಗಿದೆ.

ಪಾಕ್​ ವಿರುದ್ಧದ 3 ಪಂದ್ಯಗಳ ಸರಣಿಯ ಉಳಿದೆರಡು ಮ್ಯಾಚ್​ಗಳಿಗೆ ತಮ್ಮ ಬ್ಯಾಟ್‌ ಮೇಲೆ ವೈಯಕ್ತಿಕ ಸಂದೇಶದ ಲೋಗೋ ಹಾಕಿಕೊಳ್ಳಲು ಖವಾಜಾ ಮಾಡಿದ್ದ ಮನವಿಗೆ ಐಸಿಸಿ ಅನುಮೋದನೆ ನೀಡಿಲ್ಲ. ಇಂತಹ ವೈಯಕ್ತಿಕ ಸಂದೇಶ ಸಾರಲು ಉಡುಪು ಮತ್ತು ಸಲಕರಣೆಗಳ ನಿಯಮಾವಳಿಗಳ ಷರತ್ತು- ಎಫ್ ಪ್ರಕಾರ ಅನುಮತಿ ಇಲ್ಲ. ಈ ಕುರಿತಂತೆ ಐಸಿಸಿ ಪ್ಲೇಯಿಂಗ್​ ಷರತ್ತುಗಳ ಅಡಿ ಉಲ್ಲೇಖಿಸಲಾಗಿದೆ. ಆಟದ ಹೊರತಾಗಿ ಇತರ ವೇದಿಕೆಗಳನ್ನು ಆಟಗಾರರು ಇಂತಹ ಶಾಂತಿ, ಸಮಾನತೆ, ಹಕ್ಕುಗಳು, ಮತ್ತು ಇತರ ವಿಚಾರಗಳ ಬಗ್ಗೆ ಜಾಗೃತಿಗೆ ಮುಂದಾದರೆ ಐಸಿಸಿ ಕೂಡ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಕ್ತಾರರು ತಿಳಿಸಿದ್ದಾರೆ.

ಖವಾಜಾ ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲೂ ಕೂಡ ಗಾಜಾ ಬಿಕ್ಕಟ್ಟಿನ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಸುದ್ದಿಯಾಗಿದ್ದರು. ಎಲ್ಲ ಜೀವಗಳು ಸಮಾನ ಮತ್ತು ಸ್ವಾತಂತ್ರ್ಯವು ಮಾನವ ಹಕ್ಕು ಎಂಬ ಸಂದೇಶ ಹೊಂದಿರುವ ಲೋಗೋ ಹಾಕಿಕೊಳ್ಳುವ ಬದಲಿಗೆ, ಪಟ್ಟಿ ಧರಿಸಿರುವುದು ಕಂಡು ಬಂದಿತ್ತು. ಕ್ರೀಡೆಯಲ್ಲಿ ಮಾಜಿ ಆಟಗಾರರು, ಕುಟುಂಬ ಸದಸ್ಯರು ಅಥವಾ ಗಣ್ಯ ವ್ಯಕ್ತಿಗಳು ನಿಧನರಾದರೆ, ಸಂತಾಪ ಸೂಚಿಸುವ ಭಾಗವಾಗಿ ಈ ರೀತಿಯ ಕಪ್ಪು ಪಟ್ಟಿಗಳನ್ನು ತೋಳಿನ ಮೇಲೆ ಧರಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಕಪ್ಪು ಪಟ್ಟಿ ಧರಿಸುವ ಮುನ್ನ ರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಮತ್ತು ಐಸಿಸಿ ಕಡೆಯಿಂದ ಅನುಮತಿ ಪಡೆದಿರಬೇಕು.

ಸದ್ಯ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ಬೆನೌಡ್ - ಖಾದಿರ್ ಟೆಸ್ಟ್​ ಸರಣಿ ನಡೆಯುತ್ತಿದ್ದು, ಎರಡನೇ ಪಂದ್ಯವು ಬಾಕ್ಸಿಂಗ್​ ಡೇ ಅಂದರೆ ಡಿ.26ರಂದು ಆರಂಭವಾಗಲಿದೆ. ಈ ಪಂದ್ಯದ ತಯಾರಿಯಲ್ಲಿ ಆಸೀಸ್​ ಆರಂಭಿಕ ಆಟಗಾರ ಉಸ್ಮಾನ್​ ಖವಾಜಾ ನಿರತರಾಗಿದ್ದಾರೆ. ಈಗಾಗಲೇ ಮೊದಲ ಟೆಸ್ಟ್​ ಗೆದ್ದ ಕಾಂಗರೂಪಡೆ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಸರಣಿ ಜೀವಂತವಾಗಿರಿಸಿಕೊಳ್ಳಲು ಪಾಕ್​ ತಂಡದಿಂದ ಕಮ್​ಬ್ಯಾಕ್​ ಅತ್ಯಗತ್ಯವಾಗಿದೆ.

ಇದನ್ನೂ ಓದಿ: ಟೆಸ್ಟ್‌ ಗೆಲುವು: ಭಾರತ ಆಟಗಾರ್ತಿಯರ ಸಂಭ್ರಮವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಆಸ್ಟ್ರೇಲಿಯಾ​ ನಾಯಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.