ಚೆನ್ನೈ (ತಮಿಳುನಾಡು): ಐಸಿಸಿ ಕ್ರಿಕೆಟ್ ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಆರು ವಿಕೆಟ್‌ಗಳ ಸೋಲಿನ ನಂತರ, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ''ತಮ್ಮ ತಂಡವು ಸ್ಪರ್ಧಾತ್ಮಕ ಮೊತ್ತಕ್ಕಿಂತ ಕನಿಷ್ಠ 50 ರನ್‌ಗಳ ಕೊರತೆ ಹೊಂದಿತ್ತು. ಜೊತೆಗೆ ವಿರಾಟ್ ಕೊಹ್ಲಿಯ ಕ್ಯಾಚ್ ಕೈಚಲ್ಲಿದ್ದು ನಮಗೆ ದುಬಾರಿ ಆಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿರಾಟ್ ಕೊಹ್ಲಿ- ಕೆಎಲ್ ರಾಹುಲ್ ಉತ್ತಮ ಜೊತೆಯಾಟ: ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಣ ಜವಾಬ್ದಾರಿಯುತ ಹಾಗೂ ಸಂಯಮದ ಜೊತೆಯಾಟವು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಲು ಭಾರತಕ್ಕೆ ಸಹಾಯ ಮಾಡಿತು. ಐಸಿಸಿ ಕ್ರಿಕೆಟ್ ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿತು. ಇನ್ನು ಮುಖ್ಯ ಕಾರಣ ಎಂದರೆ, ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ ಕೈಬಿಟ್ಟ ಕೊಹ್ಲಿ ಕ್ಯಾಚ್ ದುಬಾರಿಯಾಗಿ ಪರಿಣಮಿಸಿತು. ಆ ವೇಳೆ, ವಿರಾಟ್ ಕೊಹ್ಲಿ 12 ರನ್ ಗಳಿಸಿದ್ದರು. ನಂತರ ವಿರಾಟ್ ಅವರು ಮ್ಯಾಚ್ ವಿನ್ನಿಂಗ್ಗೆ ಪೂರಕವಾಗಿ ಆಡಿದ್ದರಿಂದ ಆಸೀಸ್ ಪಂದ್ಯವನ್ನು ಅಂತಿಮವಾಗಿ ಕಳೆದುಕೊಂಡಿತು. ಜೊತೆಗೆ ಕೆ.ಎಲ್. ರಾಹುಲ್ ದೊಡ್ಡ ಪಾಲುದಾರಿಕೆಯನ್ನೇ ನೀಡಿದರು. ವಿರಾಟ್ ಕೊಹ್ಲಿ 85 ರನ್ ಗಳಿಸಿ ಔಟಾದರು. ಆದರೆ ತಳವೂರಿ ನಿಂತ ರಾಹುಲ್ 97 ರನ್‌ಗಳ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ ಇವರಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.
ಜೋಶ್ ಹ್ಯಾಜಲ್‌ವುಡ್ ಶಾರ್ಟ್ ಬಾಲ್ ಬೌಲಿಂಗ್ ಮಾಡುವುದರೊಂದಿಗೆ, ಕೊಹ್ಲಿ ತಮ್ಮ ಟೈಮಿಂಗ್ ಅನ್ನು ತಪ್ಪಾಗಿ ಗ್ರಹಿಸಿದರು ಮತ್ತು ಎಸೆತವನ್ನು ಸ್ಕಿಡ್ ಮಾಡಿದರು. ಮಾರ್ಷ್ ಮತ್ತು ಅಲೆಕ್ಸ್ ಕ್ಯಾರಿ ಇಬ್ಬರೂ ಚೆಂಡಿನ ಕಡೆಗೆ ಓಡಿದರು. ಮಾರ್ಚ್ ಕ್ಯಾಚ್ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು ಆದರೆ ಅದು ಅವರ ಕೈಗಳಿಂದ ತಪ್ಪಿಸಿಕೊಂಡು ಅಂಗಳಕ್ಕೆ ಬಿತ್ತು. ಈ ಮೂಲಕ ಮಾರ್ಷ್ ಕೊಹ್ಲಿಗೆ ಜೀವದಾನ ನೀಡಿದರು. ಈ ಜೀವದಾನ ಭಾರತದ ಗೆಲುವಿಗೆ ಕಾರಣವಾಯ್ತು.
ಈ ಬಗ್ಗೆ ಮಾತನಾಡಿದ ಕಮ್ಮಿನ್ಸ್, " ನಾವು ಸ್ಪರ್ಧಾತ್ಮಕ ಸ್ಕೂರ್ ಗಿಂತ 50 ರನ್‌ಗಳ ಕೊರತೆ ಎದುರಿಸಿದ್ದೆವು. 200 ರನ್ ಸೇರಿಸಲು ಉತ್ತಮ ಹೋರಾಟವನ್ನೇ ಮಾಡಿದೆವು. ಭಾರತ ಉತ್ತಮ ಬೌಲಿಂಗ್ ದಾಳಿ ನಡೆಸಿತ್ತು‘‘ ಎಂದಿದ್ದಾರೆ.
ಪ್ರಯಾಸಪಟ್ಟ ಆಸ್ಟ್ರೇಲಿಯಾ ಪಡೆ: ಆಸ್ಟ್ರೇಲಿಯಾ, ಮಿಚೆಲ್ ಮಾರ್ಷ್‌ರನ್ನು ಡಕ್‌ಗೆ ಕಳೆದುಕೊಂಡಿತು. ಆದರೆ ಆರಂಭಿಕ ಡೇವಿಡ್ ವಾರ್ನರ್ (52 ಎಸೆತಗಳಲ್ಲಿ ಆರು ಬೌಂಡರಿ ಸಹಿತ 41) ಮತ್ತು ಸ್ಟೀವ್ ಸ್ಮಿತ್ (71 ಎಸೆತಗಳಲ್ಲಿ ಐದು ಬೌಂಡರಿ ಸಹಿತ 46) ಆಸೀಸ್ ತಮ್ಮ 69 ರನ್‌ಗಳೊಂದಿಗೆ ಚೇತರಿಸಿಕೊಳ್ಳಲು ನೆರವಾದರು. ನಂತರ ಮಾರ್ನಸ್ ಲ್ಯಾಬುಸ್ಚಾಗ್ನೆ (27) ಸ್ಮಿತ್ ಅವರೊಂದಿಗೆ ಆಸೀಸ್ ಇನ್ನಿಂಗ್ಸ್ ಅನ್ನು ಮುನ್ನಡೆಸಲು ಪ್ರಯತ್ನಿಸಿದರು. ಆದರೆ, ಸ್ಮಿತ್ ಔಟಾದ ನಂತರ ಆಸ್ಟ್ರೇಲಿಯಾ ಕುಸಿತ ಕಂಡಿತು.
ಮೂವರು ಸ್ಪಿನ್ನರ್ ಆದ ರವೀಂದ್ರ ಜಡೇಜಾ (3/28), ಕುಲದೀಪ್ ಯಾದವ್ (2/42) ಮತ್ತು ರವಿಚಂದ್ರನ್ ಅಶ್ವಿನ್ (1/34) ಅವರು ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳ ಲೈನ್‌ಅಪ್‌ನಲ್ಲಿ ನಾಶಗೊಳಿಸಿದರು. ವೇಗದ ಮೂವರು ಬೌಲರ್ ಆದ ಜಸ್ಪ್ರೀತ್ ಬುಮ್ರಾ (2/35), ಮೊಹಮ್ಮದ್ ಸಿರಾಜ್ (1/26) ಮತ್ತು ಹಾರ್ದಿಕ್ ಪಾಂಡ್ಯ (1/28) ಎದುರಾಳಿ ತಂಡವನ್ನು ಮತ್ತಷ್ಟು ಕೆಳಕ್ಕೆ ತೆಗೆದುಕೊಂಡು ಹೋದರು. ಆಸ್ಟ್ರೇಲಿಯಾವನ್ನು 49.3 ಓವರ್‌ಗಳಲ್ಲಿ 199ಕ್ಕೆ ಆಲೌಟ್ ಮಾಡಿದರು. ಮಿಚೆಲ್ ಸ್ಟಾರ್ಕ್ (28) ಆಸೀಸ್‌ಗೆ 50 ಓವರ್‌ಗಳ ಸಂಪೂರ್ಣ ಕೋಟಾ ಆಡಲು ಸಹಾಯ ಮಾಡಲು ಪ್ರಯತ್ನಿಸಿದರು, ಆದರೆ ಅವರು ವಿಫಲರಾದರು.
ಭಾರತಕ್ಕೆ ಆರು ವಿಕೆಟ್‌ಗಳ ಗೆಲುವು: 200 ರನ್‌ಗಳ ಬೆನ್ನಟ್ಟಿದ ಭಾರತವು, ಆರಂಭಿಕ ಆಟಗಾರರಾದ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಡಕ್ ಔಟ್ ಆದರು. ನಂತರ ವಿರಾಟ್ (116 ಎಸೆತಗಳಲ್ಲಿ 6 ಬೌಂಡರಿ ಸಹಿತ 85) ಮತ್ತು ಕೆಎಲ್ ರಾಹುಲ್ (115 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 97*) ನಡುವಿನ 165 ರನ್‌ಗಳ ಜೊತೆಯಾಟವು ಭಾರತವನ್ನು ಆರು ವಿಕೆಟ್‌ಗಳ ಗೆಲುವಿಗೆ ಸಹಾಯ ಮಾಡಿತು. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್‌ವುಡ್ (3/38) ಉತ್ತಮ ಬೌಲರ್ ಎನಿಸಿದರು.
ಇದನ್ನೂ ಓದಿ: ಮಧ್ಯಮ ಕ್ರಮಾಂಕದಲ್ಲಿ ಗೋಲ್ಡನ್ ಆಟ.. ಬ್ಯಾಟ್ನಿಂದಲೇ ಟೀಕಾಕಾರರ ಬಾಯಿ ಮುಚ್ಚಿಸಿದ ಕೆಎಲ್ ರಾಹುಲ್