ETV Bharat / sports

Cricket World Cup 2023: ಪಾಕಿಸ್ತಾನ ವಿರುದ್ಧ ರೋಹಿತ್​​ ಭರ್ಜರಿ ಪ್ರದರ್ಶನ.. ಹಿಟ್​ಮ್ಯಾನ್​ ಪುಡಿಗಟ್ಟಿದ ದಾಖಲೆಗಳಿವು..

author img

By ETV Bharat Karnataka Team

Published : Oct 14, 2023, 9:28 PM IST

ಅಹಮದಾಬಾದ್​ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಶರ್ಮಾ ಅವರ ಅಬ್ಬರದ ಇನ್ನಿಂಗ್ಸ್​ನಿಂದ ಹಲವಾರು ರೆಕಾರ್ಡ್​ಗಳು ಬ್ರೇಕ್​ ಆಗಿದೆ.

Rohit Sharma
Rohit Sharma

ಅಹಮದಾಬಾದ್ (ಗುಜರಾತ್): ಟೀಮ್​ ಇಂಡಿಯಾದ ನಾಯಕ ಹಿಮ್​ಮ್ಯಾನ್​ ಎಂದೇ ಕರೆಸಿಕೊಳ್ಳುವ ರೋಹಿತ್​ ಶರ್ಮಾ ಪಾಕಿಸ್ತಾನದ ವಿರುದ್ಧ ತಮ್ಮ ಇನ್ನಿಂಗ್ಸ್ ಸ್ಥಿರತೆಯನ್ನು ಮುಂದುವರೆಸಿದ್ದಾರೆ. ಸಾಮಾನ್ಯವಾಗಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿಯ ದಾಖಲೆಗಳನ್ನು ನಾವು ಲೆಕ್ಕ ಹಾಕುತ್ತೇವೆ. ಆದರೆ ರೋಹಿತ್​ ಪಾಕ್​ ವಿರುದ್ಧ ಕಳೆದ ಎಂಟು ಇನ್ನಿಂಗ್ಸ್​​ನಲ್ಲಿ ಆರರಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ.

ರೋಹಿತ್​ ಶರ್ಮಾ ಪಾಕಿಸ್ತಾನದ ವಿರುದ್ಧದ ಕಳೆದ ಎಂಟು ಇನ್ನಿಂಗ್ಸ್​ನಲ್ಲಿ 91, 0, 52, 111*, 140, 11, 56, ಮತ್ತು ಇಂದು 86 ರನ್​ನ ಇನ್ನಿಂಗ್ಸ್​ ಆಡಿದರು. ಇದರಲ್ಲಿ ಕೇವಲ ಎರಡು ಇನ್ನಿಗ್ಸ್​ನಲ್ಲಿ ಮಾತ್ರ ಶರ್ಮಾ ವಿಫಲರಾಗಿದ್ದಾರೆ. ಉಳಿದಂತೆ 4 ಅರ್ಧಶತಕ ಮತ್ತು 2 ಶತಕಗಳು ಇನ್ನಿಂಗ್ಸ್​ ಆಡಿದ್ದಾರೆ. ವಿಶ್ವಕಪ್​ನಲ್ಲಿ 7 ಶತಕದ ದಾಖಲೆ ಮಾಡಿದ ರೋಹಿತ್​ ಇಂದು 14 ರನ್​ನಿಂದ ಮತ್ತೊಂದು 100 ಮಿಸ್​ ಮಾಡಿಕೊಂಡರು.

ಏಕದಿನದಲ್ಲಿ 300 ಸಿಕ್ಸ್​: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ 300 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಹ್ಯಾರಿಸ್ ರೌಫ್ ಅವರನ್ನು ಸಿಕ್ಸರ್‌ಗೆ ಹೊಡೆದ ನಂತರ ರೋಹಿತ್ ಈ ಮೈಲಿಗಲ್ಲು ಸಾಧಿಸಿದರು. ರೋಹಿತ್ ಏಕದಿನ ಮಾದರಿಯಲ್ಲಿ ಕೇವಲ 254 ಪಂದ್ಯಗಳಲ್ಲಿ ಈ ದಾಖಲೆ ಮಾಡಿದ್ದಾರೆ. 308 ಪಂದ್ಯಗಳಲ್ಲಿ 351 ಸಿಕ್ಸರ್‌ಗಳೊಂದಿಗೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇನ್ನೂ ಅಗ್ರಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ 301 ಇನ್ನಿಂಗ್ಸ್​ನಲ್ಲಿ 331 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.

ವಿಶ್ವಕಪ್​ನಲ್ಲಿ 5ಕ್ಕೂ ಹೆಚ್ಚು ಸಿಕ್ಸ್​ ಹೊಡೆದ ದಾಖಲೆ: ವಿಶ್ವಕಪ್​ ಪಂದ್ಯದಲ್ಲಿ ರೋಹಿತ್​ ಶರ್ಮಾ ಐದಕ್ಕೂ ಹೆಚ್ಚು ಸಿಕ್ಸ್​ ಗಳಿಸಿದ ಆಟಗಾರರ ಪಟ್ಟಿಯನ್ನು ಸೇರಿಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಇಂದಿನ ಇನ್ನಿಂಗ್ಸ್​ನಲ್ಲಿ 6 ಸಿಕ್ಸ್​ ಬಾರಿಸುವ ಮೂಲಕ ಈ ದಾಖಲೆ ಮಾಡಿದ್ದಾರೆ. ವೆಸ್ಟ್​ ಇಂಡೀಸ್​ ಆಟಗಾರ ಯುನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ ಮತ್ತು 360 ಪ್ಲೇಯರ್​ ಎಬಿ ಡಿವಿಲಿಯರ್ಸ್​ 3 ಬಾರಿ ವಿಶ್ವಕಪ್​ನಲ್ಲಿ 5ಕ್ಕೂ ಹೆಚ್ಚು ಸಿಕ್ಸ್​ ಬಾರಿಸಿದ ದಾಖಲೆ ಮಾಡಿದ್ದರು. ಈಗ ಆ ಸಾಲಿಗೆ ರೋಹಿತ್​ ಶರ್ಮಾ ಸಹ ಸೇರ್ಪಡೆ ಆಗಿದ್ದಾರೆ.

ಪಂದ್ಯ: ಪಾಕಿಸ್ತಾನ ವಿರುದ್ಧ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಆಡಿದ ವಿಶ್ವಕಪ್​ ಪಂದ್ಯದಲ್ಲಿ 7 ವಿಕೆಟ್​ನ ಜಯ ದಾಖಲಿಸಿತು. ಪಾಕ್​​ ವಿರುದ್ಧ ಭಾರತದ ಎಂಟನೇ ಗೆಲುವು ಇದಾಗಿದೆ. ಮೊದಲು ಬ್ಯಾಟಿಂಗ್​ ಮಾಡಿದ ಪಾಕ್​ 191ರನ್​ ಗಳಿಸಿತು. ಇದನ್ನು ಭಾರತ 30.3 ಓವರ್​ನಲ್ಲಿ ಬೆನ್ನತ್ತಿ ಜಯ ದಾಖಲಿಸಿತು. ಭಾರತದ ಪರ ರೋಹಿತ್​ ಶರ್ಮಾ (86) ಮತ್ತು ಶ್ರೇಯಸ್​ ಅಯ್ಯರ್​ (53) ಉತ್ತಮ ಇನ್ನಿಂಗ್ಸ್ ಆಡಿದರು.

ಇದನ್ನೂ ಓದಿ:​ ಪಾಕಿಸ್ತಾನ ಮಣಿಸಿ ಹ್ಯಾಟ್ರಿಕ್​ ಜಯ ದಾಖಲಿಸಿದ ಭಾರತ.. ಪಾಕ್​ ವಿರುದ್ಧ ವಿಶ್ವಕಪ್​ನ 8ನೇ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.