ಚೆನ್ನೈ (ತಮಿಳುನಾಡು): ಐಡೆನ್ ಮಾರ್ಕ್ರಾಮ್ ಅವರ ಸಮಯೋಚಿತ ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ 10ನೇ ವಿಕೆಟ್ಗೆ ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಅವರ ಬ್ಯಾಟಿಂಗ್ ಸಹಾಯದಿಂದ ಅತಿ ರೋಚಕವಾಗಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ನೀಡಿದ್ದ 271 ರನ್ಗಳ ಗುರಿಯನ್ನು 16 ಎಸೆತಗಳನ್ನು ಉಳಿಸಿಕೊಂಡು 1 ವಿಕೆಟ್‌ನಿಂದ ಗೆದ್ದುಕೊಂಡಿತು.
-
A MASSIVE VICTORY FOR THE PROTEAS 🇿🇦
— Proteas Men (@ProteasMenCSA) October 27, 2023 " class="align-text-top noRightClick twitterSection" data="
A remarkable chase from the Proteas which went to the very end🔥
What A Win !🥳#PAKvSA #CWC23 #BePartOfIt pic.twitter.com/jXmaHUZzRa
">A MASSIVE VICTORY FOR THE PROTEAS 🇿🇦
— Proteas Men (@ProteasMenCSA) October 27, 2023
A remarkable chase from the Proteas which went to the very end🔥
What A Win !🥳#PAKvSA #CWC23 #BePartOfIt pic.twitter.com/jXmaHUZzRaA MASSIVE VICTORY FOR THE PROTEAS 🇿🇦
— Proteas Men (@ProteasMenCSA) October 27, 2023
A remarkable chase from the Proteas which went to the very end🔥
What A Win !🥳#PAKvSA #CWC23 #BePartOfIt pic.twitter.com/jXmaHUZzRa
ಚೆನ್ನೈನ ಚೆಪಾಕ್ ಕ್ರೀಡಾಂಗಣ ಈ ವಿಶ್ವಕಪ್ನ ಮೊದಲ ರೋಚಕ ಪಂದ್ಯ ಒಂದಕ್ಕೆ ಸಾಕ್ಷಿಯಾಯಿತು. ಗೆಲುವಿಗೆ 21 ರನ್ ಬೇಕಿದ್ದಾಗ 91 ರನ್ ಗಳಿಸಿ ಆಡುತ್ತಿದ್ದ ಐಡೆನ್ ಮಾರ್ಕ್ರಾಮ್ ವಿಕೆಟ್ ಉರುಳಿದ್ದು ದಕ್ಷಿಣ ಆಫ್ರಿಕಾ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ನಂತರ ಬಾಲಂಗೋಚಿಗಳು ಪಂದ್ಯ ಗೆಲ್ಲಿಸುವರಾ ಎಂಬ ಪ್ರಶ್ನೆ ಎದುರಾಯಿತು. ಜೆರಾಲ್ಡ್ ಕೊಯೆಟ್ಜಿ ಮತ್ತು ಲುಂಗಿ ಎನ್ಗಿಡಿಯೂ ಪಂದ್ಯ ಗೆಲ್ಲಿಸುವಲ್ಲಿ ಕೊಡುಗೆ ನೀಡಲಿಲ್ಲ. ಕೊನೆಯಲ್ಲಿ ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ 11 ರನ್ ಗಳಿಸಿ ತಂಡವನ್ನು 16 ಬಾಲ್ ಉಳಿಸಿಕೊಂಡು ಗೆಲ್ಲಿಸಿಕೊಟ್ಟರು. ಪಾಕಿಸ್ತಾನ ಹರಿಣಗಳ ಒಂದು ವಿಕೆಟ್ ಪಡೆಯುವಲ್ಲಿ ವಿಫಲವಾಗಿ ಸತತ ನಾಲ್ಕನೇ ಸೋಲು ಕಂಡಿತು.
ಪಾಕಿಸ್ತಾನ ಸುಧಾರಿತ ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗ್ ಪ್ರದರ್ಶನ ನೀಡಿದರೂ ಗೆಲುವು ದೂರದ ಮಾತಾಯಿತು. ಚೇಸಿಂಗ್ ಮಾಡುವಾಗ ಒತ್ತಡದಲ್ಲಿ ಬ್ಯಾಟಿಂಗ್ ಮಾಡಲಾಗದೇ ಹರಿಣಗಳ ತಂಡ ಸೋಲು ಕಂಡಿತ್ತು. ಇದೇ ಲೆಕ್ಕಾಚಾರದಲ್ಲಿ ಪಾಕ್ ಮೊದಲು ಬ್ಯಾಟಿಂಗ್ಗೆ ಇಳಿಯಿತು. ಬಾಬರ್ ಅಜಮ್ ಮತ್ತು ಸೌದ್ ಶಕೀಲ್ ಅರ್ಧಶತಕದ ಕೊಡುಗೆಯಿಂದ 270 ರನ್ ಗಳಿಸಿತಾದರೂ ಕೊನೆಯ ಬ್ಯಾಟರ್ಗಳು ಬೇಗ ವಿಕೆಟ್ ಒಪ್ಪಿಸಿದ ಕಾರಣ 46.3 ಆಲ್ಔಟ್ ಆಯಿತು.
-
Tabraiz Shamsi weaved his magic at Chepauk and scalped four Pakistan batters 👏
— ICC Cricket World Cup (@cricketworldcup) October 27, 2023 " class="align-text-top noRightClick twitterSection" data="
It helps him win the @aramco #POTM 🎉#CWC23 | #PAKvSA pic.twitter.com/sAqrSj4o7X
">Tabraiz Shamsi weaved his magic at Chepauk and scalped four Pakistan batters 👏
— ICC Cricket World Cup (@cricketworldcup) October 27, 2023
It helps him win the @aramco #POTM 🎉#CWC23 | #PAKvSA pic.twitter.com/sAqrSj4o7XTabraiz Shamsi weaved his magic at Chepauk and scalped four Pakistan batters 👏
— ICC Cricket World Cup (@cricketworldcup) October 27, 2023
It helps him win the @aramco #POTM 🎉#CWC23 | #PAKvSA pic.twitter.com/sAqrSj4o7X
ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ರನ್ ಒತ್ತಡದಲ್ಲಿ ಬ್ಯಾಟಿಂಗ್ ಮಾಡಲು ಹೆಣಗಾಡುತ್ತದೆ ಎಂಬುದನ್ನು ಮತ್ತೆ ಸಾಬೀತುಮಾಡಿತು. ಪಾಕ್ನ ಮೊಹಮ್ಮದ್ ವಾಸಿಮ್ ಜೂನಿಯರ್ ಹರಿಣಗಳ ಆರಂಭಿಕರನ್ನು ಕಾಡಿದರು. ವಿಶ್ವಕಪ್ನಲ್ಲಿ ಮೂರು ಶತಕ ಮಾಡಿದ ಕ್ವಿಂಟನ್ ಡಿ ಕಾಕ್ 24 ರನ್ಗೆ ಜೂನಿಯರ್ಗೆ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ವಿಶ್ವಕಪ್ನಲ್ಲಿ ಸತತ ವಿಫಲ ಕಾಣುತ್ತಿರುವ ತೆಂಬಾ ಬವುಮಾ ಸಹ (28) ಔಟ್ ಆದರು.
ಮಾರ್ಕ್ರಾಮ್ ಏಕಾಂಗಿ ಆಟ: ಮೂರನೇ ವಿಕೆಟ್ಗೆ ಒಂದಾದ ಐಡೆನ್ ಮಾರ್ಕ್ರಾಮ್ ಮತ್ತು ಐಡೆನ್ ಮಾರ್ಕ್ರಾಮ್ 54 ರನ್ ಜತೆಯಾಟ ಮಾಡಿದರು. ಆರಂಭಿಕ ಕುಸಿತ ಕಂಡಿದ್ದ ತಂಡಕ್ಕೆ ಇದು ಚೇತರಿಕೆ ನೀಡಿತು. ಆದರೆ ಡಸ್ಸೆನ್ (21) ವಿಕೆಟ್ ನಂತರ ಮಾರ್ಕ್ರಾಮ್ ಜತೆ ಯಾರು ಪಾಲುದಾರಿಕೆ ಹಂಚಿಕೊಳ್ಳಲಿಲ್ಲ. ಹೆನ್ರಿಚ್ ಕ್ಲಾಸೆನ್ (12), ಡೇವಿಡ್ ಮಿಲ್ಲರ್ (29), ಮಾರ್ಕೊ ಜಾನ್ಸೆನ್ (20) ಬೇಗ ವಿಕೆಟ್ ಕೊಟ್ಟರು. ಪಾಕಿಸ್ತಾನದ ವೇಗಿಗಳು ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆದರು.
ತಬ್ರೈಜ್ ಶಮ್ಸಿ ಪಂದ್ಯ ಶ್ರೇಷ್ಠ: ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ 3, ಮೊಹಮ್ಮದ್ ವಾಸಿಮ್ ಜೂನಿಯರ್, ಹ್ಯಾರಿಸ್ ರೌಫ್ ಮತ್ತು ಉಸಮಾ ಮಿರ್ ತಲಾ ಎರಡು ವಿಕೆಟ್ ಪಡೆದರು. ಬೌಲಿಂಗ್ನಲ್ಲಿ 4 ವಿಕೆಟ್ ಮತ್ತು ಕೊನೆ ಕ್ಷಣದಲ್ಲಿ ವಿಕೆಟ್ ಕಾಯ್ದ ತಬ್ರೈಜ್ ಶಮ್ಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಪ್ಯಾರಾ ಏಷ್ಯನ್ ಗೇಮ್ಸ್, 6ನೇ ದಿನ: 99 ಪದಕ ಗೆದ್ದು ದಾಖಲೆ ಬರೆದ ಭಾರತ; ನಾಳೆ ಕ್ರೀಡಾಕೂಟಕ್ಕೆ ತೆರೆ