ಚೆನ್ನೈ (ತಮಿಳುನಾಡು): ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಬ್ಯಾಟಿಂಗ್ ವೈಫಲ್ಯದಿಂದ ಸೋಲುಂಡ ಪಾಕಿಸ್ತಾನ ಇದೀಗ ಚೆನ್ನೈನ ಚೆಪಾಕ್ ಮೈದಾನದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸುತ್ತಿದೆ. ಬಾಬರ್ ಆಜಂ ಮತ್ತು ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ ಅವರ ಅರ್ಧಶತಕದ ಇನ್ನಿಂಗ್ಸ್ ನೆರವಿನಿಂದ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು ತಂಡ 282 ರನ್ ಗಳಿಸಿತು.
-
Iftikhar and Shadab unleash fireworks, propelling Pakistan to 282-7 after Babar and Abdullah's composed half-centuries! 💥
— Pakistan Cricket (@TheRealPCB) October 23, 2023 " class="align-text-top noRightClick twitterSection" data="
Over to the bowlers in the second innings 🎯#PAKvAFG | #DattKePakistani pic.twitter.com/WA0KR8AmE0
">Iftikhar and Shadab unleash fireworks, propelling Pakistan to 282-7 after Babar and Abdullah's composed half-centuries! 💥
— Pakistan Cricket (@TheRealPCB) October 23, 2023
Over to the bowlers in the second innings 🎯#PAKvAFG | #DattKePakistani pic.twitter.com/WA0KR8AmE0Iftikhar and Shadab unleash fireworks, propelling Pakistan to 282-7 after Babar and Abdullah's composed half-centuries! 💥
— Pakistan Cricket (@TheRealPCB) October 23, 2023
Over to the bowlers in the second innings 🎯#PAKvAFG | #DattKePakistani pic.twitter.com/WA0KR8AmE0
ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಬಾಬರ್ ಆಜಂ ಮೊದಲು ಬ್ಯಾಟಿಂಗ್ ಮಾಡಲು ಮುಂದಾದರು. ಚೆನ್ನೈನ ಸ್ಪಿನ್ ಪಿಚ್ನಲ್ಲಿ ಶಾದಾಬ್ ಖಾನ್ ಅವರನ್ನು ನವಾಜ್ ಬದಲಾಗಿ ಸೇರಿಸಿಕೊಂಡರು. ಅಬ್ದುಲ್ಲಾ ಶಫೀಕ್ ತಂಡಕ್ಕೆ ವೇಗದ ಆರಂಭ ನೀಡಿದರು. ಮೊದಲ ವಿಕೆಟ್ಗೆ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ 54 ರನ್ಗಳ ಜತೆಯಾಟ ಮಾಡಿದರು. ಆದರೆ 17 ರನ್ ಗಳಿಸಿದ್ದ ಇಮಾಮ್-ಉಲ್-ಹಕ್ ವಿಶ್ವಕಪ್ನಲ್ಲಿ ಮತ್ತೆ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಬಾಬರ್ ಕಮ್ಬ್ಯಾಕ್: ಎರಡನೇ ವಿಕೆಟ್ಗೆ ಅಬ್ದುಲ್ಲಾ ಶಫೀಕ್ ಜತೆಗೆ ನಾಯಕ ಬಾಬರ್ ಆಜಂ ಸೇರಿಕೊಂಡರು. ಈ ಜೋಡಿ ಎರಡನೇ ವಿಕೆಟ್ಗೆ ಮತ್ತೊಂದು 54 ರನ್ ಜತೆಯಾಟ ಮಾಡಿದರು. ಅರ್ಧಶತಕ ಗಳಿಸಿದ್ದ ಅಬ್ದುಲ್ಲಾ ಶಫೀಕ್ (58) ವಿಕೆಟ್ ಕೊಟ್ಟರು. ವಿಶ್ವಕಪ್ನಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಸೋತಿದ್ದ ಬಾಬರ್ ಇಂದು ಅಫ್ಘಾನ್ ವಿರುದ್ಧ ಫಾರ್ಮ್ಗೆ ಮರಳಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ರಿಜ್ವಾನ್ (8) ನಾಯಕನಿಗೆ ಆಸರೆಯಾಗಲಿಲ್ಲ. ಆದರೆ ಬಾಬರ್ ಅಫ್ಘನ್ ಸ್ಪಿನ್ನರ್ಗಳನ್ನು ತಾಳ್ಮೆಯಿಂದ ಎದುರಿಸಿದರು.
- " class="align-text-top noRightClick twitterSection" data="">
ಸೌದ್ ಶಕೀಲ್ ಬಾಬರ್ ಜತೆಗೆ 4ನೇ ವಿಕೆಟ್ಗೆ ಜತೆಯಾಗಿ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ಬಾಬರ್ ತಮ್ಮ ಅರ್ಧಶತಕ ಪೂರೈಸಿಕೊಂಡರು. ಇದು ಈ ವಿಶ್ವಕಪ್ನಲ್ಲಿ ಬಾಬರ್ ಆಜಂ ಬ್ಯಾಟ್ನಿಂದ ಬಂದ ಎರಡನೇ ಅರ್ಧಶತಕವಾಗಿದೆ. ಸೌದ್ ಶಕೀಲ್ 25 ರನ್ಗಳ ಚುಟುಕು ಇನ್ನಿಂಗ್ಸ್ ಮುಗಿಸಿದರು. ಬಾಬರ್ ಆಜಂ 92 ಬಾಲ್ ಆಡಿ 1 ಸಿಕ್ಸ್ ಮತ್ತು 4 ಬೌಂಡರಿ ಸಹಾಯದಿಂದ 74 ರನ್ಗಳಿಗೆ ವಿಕೆಟ್ ಕೊಟ್ಟರು. ಈ ವಿಶ್ವಕಪ್ನಲ್ಲಿ ಬಾಬರ್ ಗಳಿಸಿ ದೊಡ್ಡ ಮೊತ್ತ ಇದಾಗಿದೆ.
ಇಫ್ತಿಕರ್, ಶಾದಾಬ್ ಅಬ್ಬರ: ಈ ಇಬ್ಬರು ಬ್ಯಾಟರ್ಗಳು ಕ್ರೀಸ್ಗೆ ಬರುವಾಗ ಕೊನೆಯ 10 ಓವರ್ ಬಾಕಿ ಇದ್ದ ಕಾರಣ ತಂಡದ ಮೊತ್ತ ಹೆಚ್ಚಿಸಲು ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. 27 ಬಾಲ್ ಎದುರಿಸಿದ ಇಫ್ತಿಕರ್ ಅಹ್ಮದ್ 4 ಸಿಕ್ಸ್, 2 ಬೌಂಡರಿ ಸಹಾಯದಿಂದ 40 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. 40 ರನ್ಗಳ ಇನ್ನಿಂಗ್ಸ್ ಆಡಿದ ಶಾದಾಬ್ ಖಾನ್ ಸಹ ಪಂದ್ಯದ ಕೊನೆಯ ಬಾಲ್ನಲ್ಲಿ ವಿಕೆಟ್ ಕೊಟ್ಟರು. ಪಾಕಿಸ್ತಾನ 50 ಓವರ್ಗೆ 7 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತು.
ಅಫ್ಘಾನಿಸ್ತಾನದ ಪರ ನೂರ್ ಅಹಮ್ಮದ್ 3, ನವೀನ್ ಉಲ್ ಹಕ್ 2 ಮತ್ತು ಅಜ್ಮತುಲ್ಲಾ ಮಿರ್ಜಾ, ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಗಾಯಗೊಂಡು ಇಂಗ್ಲೆಂಡ್ ತಂಡದಿಂದ ಹೊರಬಿದ್ದ ಟೋಪ್ಲಿ, ಕಾರ್ಸೆಗೆ ಸ್ಥಾನ