ಚೆನ್ನೈ (ತಮಿಳುನಾಡು): ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅವರ ಅರ್ಧಶತಕದ ಇನ್ನಿಂಗ್ಸ್ ನೆರವಿನಿಂದ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು ಬಾಂಗ್ಲಾದೇಶವನ್ನು ನ್ಯೂಜಿಲೆಂಡ್ ತಂಡ 7.1 ಓವರ್‌ಗಳಿರುವಂತೆಯೇ 8 ವಿಕೆಟ್ಗಳಿಂದ ಮಣಿಸಿತು. ವಿಶ್ವಕಪ್ ಲೀಗ್ ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸುವ ಮೂಲಕ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.
-
The New Zealand juggernaut rolls on with a third consecutive win at #CWC23 🙌#NZvBAN 📝 https://t.co/NgRL4IBzCs pic.twitter.com/5t9Hte600S
— ICC Cricket World Cup (@cricketworldcup) October 13, 2023 " class="align-text-top noRightClick twitterSection" data="
">The New Zealand juggernaut rolls on with a third consecutive win at #CWC23 🙌#NZvBAN 📝 https://t.co/NgRL4IBzCs pic.twitter.com/5t9Hte600S
— ICC Cricket World Cup (@cricketworldcup) October 13, 2023The New Zealand juggernaut rolls on with a third consecutive win at #CWC23 🙌#NZvBAN 📝 https://t.co/NgRL4IBzCs pic.twitter.com/5t9Hte600S
— ICC Cricket World Cup (@cricketworldcup) October 13, 2023
2019ರಲ್ಲಿ ಉತ್ತಮ ಪ್ರದರ್ಶನ ನೀಡಿಯೂ ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದ ಕಿವೀಸ್ ಈ ಬಾರಿ ಚೊಚ್ಚಲ ಟ್ರೋಫಿಯನ್ನು ಗೆದ್ದೇ ತೀರುತ್ತೇವೆ ಎಂದು ಪಣತೊಟ್ಟಂತೆ ಕಾಣುತ್ತಿದೆ. ಲೀಗ್ ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಬೃಹತ್ ಅಂತರದಿಂದ ಮಣಿಸಿದರೆ, ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಸುಲಭ ಜಯ ದಾಖಲಿಸಿತು. ಮೂರನೇ ಪಂದ್ಯದಲ್ಲಿ ಇಂದು ಬಾಂಗ್ಲಾ ತಂಡವನ್ನು ಸೋಲಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ ಮತ್ತು ಮಹಮ್ಮದುಲ್ಲಾ ಬ್ಯಾಟಿಂಗ್ ನೆರವಿನಿಂದ 246 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಕಿವೀಸ್ ಗೆದ್ದುಕೊಂಡಿತು.
ಮೊದಲ ಪಂದ್ಯದಲ್ಲಿ ಶತಕ ಮತ್ತು ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ಕೊಟ್ಟಿದ್ದ ರಚಿನ್ ರವೀಂದ್ರ (9) ಅವಸರದ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳೆದುಕೊಂಡರು. ರವೀಂದ್ರ ವಿಕೆಟ್ ನಂತರ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ಕೇನ್ ವಿಲಿಯಮ್ಸನ್ ಮೈದಾನಕ್ಕಿಳಿದಿದ್ದರು. ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಕೇನ್ ಕಳೆದೆರಡು ಪಂದ್ಯವನ್ನು ಆಡಿರಲಿಲ್ಲ.
ಹೊಸ ಬಾಲ್ನಲ್ಲಿ ಬಾಂಗ್ಲಾ ಬೌಲರ್ಗಳು ಇನ್ಸ್ವಿಂಗ್ ಮತ್ತು ಔಟ್ ಸ್ವಿಂಗ್ನಿಂದ ಕಾಡಿದರಾದರೂ, ಬಾಲ್ ಹಳೆಯದಾದ ಮೇಲೆ ಕಿವೀಸ್ ಬ್ಯಾಟರ್ಗಳು ತಮ್ಮ ವೈಖರಿ ತೋರಿದರು. ಪಿಚ್ಗೆ ಸೆಟ್ ಆದ ಕೇನ್ ವಿಲಿಯಮ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಜೊತೆ 80 ರನ್ಗಳ ಜೊತೆಯಾಟ ಮಾಡಿದರು. 45 ರನ್ ಗಳಿಸಿ ಕಾನ್ವೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಡೇರಿಲ್ ಮಿಚೆಲ್ ನಾಯಕನ ಜೊತೆ ಇನ್ನಿಂಗ್ಸ್ ಮುಂದುವರೆಸಿದರು.
ವಿಲಿಯಮ್ಸನ್ಗೆ ಮತ್ತೆ ಗಾಯ: ಕೇನ್ ವಿಲಿಯಮ್ಸನ್ 107 ಬಾಲ್ ಎದುರಿಸಿ 78 ರನ್ ಗಳಿಸಿ ಆಡುತ್ತಿದ್ದಾಗ ಕೈ ಬೆರಳಿಗೆ ಚೆಂಡು ಜೋರಾಗಿ ತಗುಲಿದ್ದರಿಂದ ಮೈದಾನದಿಂದ ಹೊರನಡೆದರು. ಈಗಾಗಲೇ ಎರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿರುವ ಕೇನ್, ಮುಂದಿನ ಪಂದ್ಯದ ವೇಳೆಗೆ ಚೇತರಿಸಿಕೊಂಡಲ್ಲಿ ತಂಡಕ್ಕೆ ಸಹಾಯವಾಗಲಿದೆ.
-
Lockie Ferguson is awarded the @aramco #POTM for his starring show with the ball, having returned excellent figures of 3/49 🌟#CWC23 #NZvBAN pic.twitter.com/BSeJrDlpgj
— ICC Cricket World Cup (@cricketworldcup) October 13, 2023 " class="align-text-top noRightClick twitterSection" data="
">Lockie Ferguson is awarded the @aramco #POTM for his starring show with the ball, having returned excellent figures of 3/49 🌟#CWC23 #NZvBAN pic.twitter.com/BSeJrDlpgj
— ICC Cricket World Cup (@cricketworldcup) October 13, 2023Lockie Ferguson is awarded the @aramco #POTM for his starring show with the ball, having returned excellent figures of 3/49 🌟#CWC23 #NZvBAN pic.twitter.com/BSeJrDlpgj
— ICC Cricket World Cup (@cricketworldcup) October 13, 2023
ಡೇರಿಲ್ ಮಿಚೆಲ್ ಅಬ್ಬರ: ಆರಂಭದಲ್ಲಿ ಸ್ವಿಂಗ್ನಿಂದ ಕಾಡಿದ್ದರಿಂದ ರನ್ರೇಟ್ ಒತ್ತಡ ತಂಡಕ್ಕಿತ್ತು. ಮಿಚೆಲ್ ಮೊದಲ ಬಾಲ್ ಅನ್ನು ಸಿಕ್ಸ್ಗೆ ಅಟ್ಟುವ ಮೂಲಕ ಅಬ್ಬರಿಸುವ ಸೂಚನೆ ನೀಡಿದರು. ಅಲ್ಲದೇ ಉತ್ತಮವಾಗಿ ಸಿಕ್ಕ ಬಾಲ್ಗಳನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸಿದರು. 67 ಬಾಲ್ ಆಡಿದ ಮಿಚೆಲ್ 6 ಬೌಂಡರಿ ಮತ್ತು 4ಸಿಕ್ಸ್ನಿಂದ 89 ರನ್ ಕಲೆಹಾಕಿ ಅಜೇಯವಾಗಿ ಉಳಿದರು.
ಲಾಕಿ ಫರ್ಗುಸನ್ 'ಪಂದ್ಯಶ್ರೇಷ್ಠ': ಬಾಂಗ್ಲಾ ಪರ ಮುಶ್ಫಿಕರ್ ರಹೀಮ್ ಮತ್ತು ಶಕೀಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 10 ಓವರ್ ಮಾಡಿ 4.9 ಎಕಾನಮಿ ಸಾಧಿಸಿ 3 ವಿಕೆಟ್ ಉರುಳಿಸಿದ ಲಾಕಿ ಫರ್ಗುಸನ್ 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಶುಭ್‌ಮನ್ ಗಿಲ್ಗೆ 'ಐಸಿಸಿ ತಿಂಗಳ ಆಟಗಾರ' ಗೌರವ; ನಾಳೆ ಪಾಕಿಸ್ತಾನ ವಿರುದ್ಧ ಆಡಿದರೆ ನಂ.1 ಪಟ್ಟ