ಲಖನೌ (ಉತ್ತರ ಪ್ರದೇಶ): ಬೌಲಿಂಗ್ ಮತ್ತು ಬ್ಯಾಟಿಂಗ್ನಿಂದ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾವನ್ನು ಮಣಿಸಿದ ಅಫ್ಘಾನಿಸ್ತಾನ ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ವಿರುದ್ಧ ಕ್ಷೇತ್ರರಕ್ಷಣೆಯ ಮಿಂಚಿನ ಸಂಚಲನ ಮೂಡಿಸಿ 4 ಪ್ರಮುಖ ಆಟಗಾರರನ್ನು ರನ್ಔಟ್ ಮಾಡಿ ನಿಯಂತ್ರಣ ಹೇರುವಲ್ಲಿ ಯಶಸ್ವಿ ಆಗಿದೆ. ಅಫ್ಘಾನ್ ಚುರುಕಾದ ಫೀಲ್ಡಿಂಗ್ನಿಂದಾಗಿ ಡಚ್ಚರು 46.3 ಓವರ್ಗೆ 179 ರನ್ ಗಳಿಸಿ ಸರ್ವಪತನ ಕಂಡರು. ಸೆಮೀಸ್ ರೇಸ್ನಲ್ಲಿ ಅಫ್ಘಾನ್ ಮುಂದುವರೆಯಬೇಕಾದಲ್ಲಿ 180 ರನ್ಗಳ ಸುಲಭ ಗುರಿಯನ್ನು ಭೇದಿಸಬೇಕಿದೆ.
- " class="align-text-top noRightClick twitterSection" data="">
ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ತನ್ನ ಬೌಲಿಂಗ್ನ ಶಕ್ತಿಯಿಂದ ಕಟ್ಟಿಹಾಕಿದ ನೆದರ್ಲೆಂಡ್ಸ್ ಲಖನೌನ ಏಕನಾ ಕ್ರಿಕೆಟ್ ಸ್ಟೇಡಿಯಂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ನೀಡುವಲ್ಲಿ ಎಡವಿತು. ಮುಜೀಬ್ ಉರ್ ರಹಮಾನ್ ಡಚ್ಚರಿಗೆ ಮೊದಲ ಓವರ್ನಲ್ಲೇ ಶಾಕ್ ನೀಡಿದರು. ತಂಡ 3 ರನ್ ಗಳಿಸಿದ್ದಾಗ ವೆಸ್ಲಿ ಬ್ಯಾರೆಸಿ (1) ಎಲ್ಬಿಡ್ಲ್ಯೂಗೆ ಬಲಿಯಾದರು.
ಎರಡನೇ ವಿಕೆಟ್ಗೆ ಅರ್ಧಶತಕದ ಜತೆಯಾಟ: ಎರಡನೇ ವಿಕೆಟ್ಗೆ ಒಂದಾದ ಮ್ಯಾಕ್ಸ್ ಓಡೌಡ್ ಮತ್ತು ಕಾಲಿನ್ ಅರ್ಕಮನ್ 73 ರನ್ ಪಾಲುದಾರಿಕೆ ಮಾಡಿದರು. ಫಸ್ಟ್ ಓವರ್ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿದ್ದರೂ ಇಬ್ಬರೂ ವಿಚಲಿತರಾಗದೇ ಬ್ಯಾಟ್ ಬೀಸಿದರು. ಇದರಿಂದ ಪವರ್ಪ್ಲೇ (ಮೊದಲ 10ಓವರ್) ಮುಕ್ತಾಯಕ್ಕೆ ತಂಡ 6 ರನ್ರೇಟ್ನಲ್ಲಿ 66 ರನ್ ಕಲೆಹಾಕಿತ್ತು. ಈ ಜೊತೆಯಾಟ ರನ್ಔಟ್ನಿಂದ ಬ್ರೇಕ್ ಆಯಿತು. 42 ರನ್ ಗಳಿಸಿ ಆಡುತ್ತಿದ್ದ ಮ್ಯಾಕ್ಸ್ ಓಡೌಡ್ ಓಟ ಕದಿಯುವಾಗ ವಿಕೆಟ್ ಕೊಟ್ಟು 8 ರನ್ನಿಂದ ಅರ್ಧಶತಕ ಕಳೆದುಕೊಂಡರು.
-
Afghanistan Bundle the Netherlands out for 179! 👊#AfghanAtalan, banking on some incredible bowling from @MohammadNabi007 (3/28) & @noor_ahmad_15 (2/28) and some outstanding fielding efforts by the team, bundled out the @KNCBcricket for 179 runs in the 1st inning. 🤩👏#CWC23 pic.twitter.com/VB1ddZfHx9
— Afghanistan Cricket Board (@ACBofficials) November 3, 2023 " class="align-text-top noRightClick twitterSection" data="
">Afghanistan Bundle the Netherlands out for 179! 👊#AfghanAtalan, banking on some incredible bowling from @MohammadNabi007 (3/28) & @noor_ahmad_15 (2/28) and some outstanding fielding efforts by the team, bundled out the @KNCBcricket for 179 runs in the 1st inning. 🤩👏#CWC23 pic.twitter.com/VB1ddZfHx9
— Afghanistan Cricket Board (@ACBofficials) November 3, 2023Afghanistan Bundle the Netherlands out for 179! 👊#AfghanAtalan, banking on some incredible bowling from @MohammadNabi007 (3/28) & @noor_ahmad_15 (2/28) and some outstanding fielding efforts by the team, bundled out the @KNCBcricket for 179 runs in the 1st inning. 🤩👏#CWC23 pic.twitter.com/VB1ddZfHx9
— Afghanistan Cricket Board (@ACBofficials) November 3, 2023
ಸೈಬ್ರಾಂಡ್ ಆಕರ್ಷಕ ಅರ್ಧಶತಕ: ಓಡೌಡ್ ರನ್ಔಟ್ ಬೆನ್ನಲ್ಲೇ ಮತ್ತೆರಡು ವಿಕೆಟ್ಗಳು ಅದೇ ರೀತಿ ಪತನ ಆಯಿತು. 24 ರನ್ಗಳಿಸಿ ಆಡುತ್ತಿದ್ದ ಕಾಲಿನ್ ಅರ್ಕಮನ್ ಸಹ ರನ್ಔಟ್ಗೆ ಬಲಿಯಾದರು, ಅವರ ಬೆನ್ನಲ್ಲೇ ನಾಯಕ ಸ್ಕಾಟ್ ಎಡ್ವರ್ಡ್ಸ್ ಸಹ ವಿಕೆಟ್ ಒಪ್ಪಿಸಿದರು. ಬಾಸ್ ಡಿ ಲೀಡೆ (3), ಸಾಕಿಬ್ ಜುಲ್ಫಿಕರ್ (3), ಲೋಗನ್ ವ್ಯಾನ್ ಬೀಕ್ (2) ವಿಕೆಟ್ ಕಾಯ್ದುಕೊಳ್ಳುವಲ್ಲಿ ಯಶಸ್ವಿ ಆಗಲಿಲ್ಲ. ಈ ಎಲ್ಲ ಬ್ಯಾಟರ್ಗಳು ವಿಕೆಟ್ ಕಳೆದುಕೊಳ್ಳುವಾಗ ಏಕಾಂಗಿಯಾಗಿ ಆಡಿ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಅರ್ಧಶತಕ ಪೂರೈಸಿಕೊಂಡರು. ಇನ್ನಿಂಗ್ಸ್ನಲ್ಲಿ 86 ಬಾಲ್ ಆಡಿದ ಅವರು 6 ಬೌಂಡರಿಯ ಸಹಾಯದಿಂದ 58 ರನ್ ಗಳಿಸಿ 8ನೇ ವಿಕೆಟ್ ಆಗಿ ಔಟ್ ಆದರು.
ಹೋರಾಟ ಬಿಡದ ಡಚ್ಚರು: ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್ಗಳು ವಿಫಲರಾದರೂ ಟೇಲ್ ಎಂಡರ್ಗಳು ಅಫ್ಘನ್ ಬೌಲರ್ಗಳನ್ನು ಕಾಡಿದರು. ರನ್ ಗಳಿಸು ಪರದಾಡಿದರೂ ವಿಕೆಟ್ ಕಾಯ್ದುಕೊಂಡರು. 34ನೇ ಓವರ್ಗೆ 8 ವಿಕೆಟ್ ನಷ್ಟವಾಗಿದ್ದರೂ 47ನೇ ಓವರ್ ಪಂದ್ಯವನ್ನು ಕೊನೆಯ ಎರಡು ಆಟಗಾರರು ಕೊಂಡೊಯ್ದರು. ಕೊನೆಯ ಆಟಗಾರರ ಹೋರಾದ ಫಲವಾಗಿ ತಂಡ 46.3 ಬಾಲ್ಗೆ 179 ರನ್ಗೆ ಸರ್ವಪತನ ಕಂಡಿತು.
ಅಫ್ಘಾನ್ ಪರ ಮೊಹಮ್ಮದ್ ನಬಿ 3, ನೂರ್ ಅಹ್ಮದ್ 2 ಮತ್ತು ಮುಜೀಬ್ ಉರ್ ರಹಮಾನ್ 1 ವಿಕೆಟ್ ಪಡೆದರು. ಮಧ್ಯಮ ಕ್ರಮಾಂಕದಲ್ಲಿ ನಾಲ್ವರು ಆಟಗಾರರು ರನ್ಔಟ್ಗೆ ಬಲಿಯಾದ್ದದ್ದು ಡಚ್ ತಂಡಕ್ಕೆ ಹೊರೆಯಾಯಿತು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಟೀಮ್ ಇಂಡಿಯಾ ಗೆಲುವಿನಲ್ಲಿ ಸಚಿನ್ ದಾಖಲೆ ಮುರಿದ ವಿರಾಟ್