ಅಹಮದಾಬಾದ್ (ಗುಜರಾತ್): ವಿಶ್ವಕಪ್ನ ಮೂರನೇ ಪಂದ್ಯದಲ್ಲೂ ಭಾರತ ಬೌಲಿಂಗ್ ಸಾಮರ್ಥ್ಯವನ್ನು ಮೆರೆದಿದೆ. ಭಾರತದ ಐವರು ಬೌಲರ್ಗಳು ತಲಾ ಎರಡು ವಿಕೆಟ್ ಕಬಳಿಸಿ 42.5 ಓವರ್ಗೆ 191 ರನ್ಗೆ ಪಾಕಿಸ್ತಾನವನ್ನು ಆಲ್ಔಟ್ ಮಾಡಿದರು. ಪಾಕಿಸ್ತಾನ ಪರ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಗಮನಾರ್ಹ ಇನ್ನಿಂಗ್ಸ್ ಆಡಿದ್ದರಿಂದ ಭಾರತ 192 ರನ್ ಗುರಿ ಎದುರಿಸಬೇಕಿದೆ.
ಭಾರತ ವಿಶ್ವಕಪ್ಗೂ ಮುನ್ನ ಏಷ್ಯಾಕಪ್ ಫೈನಲ್ನಲ್ಲಿ ತಾನು ಬೌಲಿಂಗ್ನಲ್ಲಿ ಸಮರ್ಥ ತಂಡ ಎಂದು ವಿಶ್ವಕ್ಕೆ ಸಂದೇಶ ನೀಡಿತ್ತು. ಅದರಂತೆ ವಿಶ್ವಕಪ್ನ ಎರಡು ಪಂದ್ಯದಲ್ಲಿ ನಿಯಂತ್ರಿತ ಬೌಲಿಂಗ್ ಪ್ರದರ್ಶನ ನೀಡಿತ್ತು. ಪಾಕಿಸ್ತಾನದ ವಿರುದ್ಧದ ಮೂರನೇ ಪಂದ್ಯದಲ್ಲಿ ಅದೇ ಲಯದ ಬೌಲಿಂಗ್ನ್ನು ಮುಂದುವರೆಸಿದೆ. ಸಿರಾಜ್ ಆರಂಭದಲ್ಲಿ ದುಬಾರಿ ಆದರು ನಂತರ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆದರೆ. ಪಾಕಿಸ್ತಾನ ನಾಯಕ ಬಾಬರ್ ಅರ್ಧಶತಕ ಮತ್ತು ರಿಜ್ವಾನ್ ಅವರ 49 ರನ್ ಬಲವಾಯಿತು. ಮತ್ತಾವ ಬ್ಯಾಟರ್ನಿಂದಲೂ ದೊಡ್ಡ ಇನ್ನಿಂಗ್ಸ್ ಬರಲೇ ಇಲ್ಲ.
-
Innings Break!
— BCCI (@BCCI) October 14, 2023 " class="align-text-top noRightClick twitterSection" data="
A cracker of a bowling performance from #TeamIndia! 👌 👌
Jasprit Bumrah, Kuldeep Yadav, Ravindra Jadeja, Hardik Pandya & Mohd. Siraj share the spoils with 2️⃣ wickets each!
Scorecard ▶️ https://t.co/H8cOEm3quc#CWC23 | #INDvPAK | #MeninBlue pic.twitter.com/omDQZnAbg7
">Innings Break!
— BCCI (@BCCI) October 14, 2023
A cracker of a bowling performance from #TeamIndia! 👌 👌
Jasprit Bumrah, Kuldeep Yadav, Ravindra Jadeja, Hardik Pandya & Mohd. Siraj share the spoils with 2️⃣ wickets each!
Scorecard ▶️ https://t.co/H8cOEm3quc#CWC23 | #INDvPAK | #MeninBlue pic.twitter.com/omDQZnAbg7Innings Break!
— BCCI (@BCCI) October 14, 2023
A cracker of a bowling performance from #TeamIndia! 👌 👌
Jasprit Bumrah, Kuldeep Yadav, Ravindra Jadeja, Hardik Pandya & Mohd. Siraj share the spoils with 2️⃣ wickets each!
Scorecard ▶️ https://t.co/H8cOEm3quc#CWC23 | #INDvPAK | #MeninBlue pic.twitter.com/omDQZnAbg7
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಪಾಕ್ ಮೊದಲ 5 ಓವರ್ನಲ್ಲಿ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡಿತು. ಆದರೆ 8ನೇ ಓವರ್ನಲ್ಲಿ ಸಿರಾಜ್ ಅಬ್ದುಲ್ಲಾ ಶಫೀಕ್ (20) ಅವರ ವಿಕೆಟ್ ಪಡೆದರು. ಅವರ ಬೆನ್ನಲ್ಲೇ ಇನ್ನೊಬ್ಬ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ (36) ವಿಕೆಟ್ ಸಹ ಉರುಳಿತು.
ಬಾಬರ್ - ರಿಜ್ವಾನ್ ಜೊತೆಯಾಟ: ಮೂರನೇ ವಿಕೆಟ್ಗೆ ಒಂದಾದ ನಾಯಕ ಬಾಬರ್ ಅಜಮ್ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಭರ್ಜರಿ ಜೊತೆಯಾಟ ಮಾಡಿದರು. ಈ ಜೋಡಿ ತಂಡಕ್ಕೆ ವಿಕೆಟ್ ಕಾಯ್ದುಕೊಟ್ಟಿದ್ದಲ್ಲದೇ, ಆರಂಭಿಕ ವಿಕೆಟ್ ನಷ್ಟದಿಂದ ತಂಡಕ್ಕೆ ಚೇತರಿಕೆಯನ್ನು ನೀಡಿತು. ಎರಡು ಪಂದ್ಯದಲ್ಲಿ ವಿಫಲತೆ ಕಂಡಿದ್ದ ಬಾಬರ್ ಅಜಮ್ ಇಂದು ಅರ್ಧಶತಕ ಗಳಿಸಿದರು. 58 ಬಾಲ್ ಎದುರಿಸಿದ ಬಾಬರ್ ಅಜಮ್ 7 ಬೌಂಡರಿ ಸಹಾಯದಿಂದ 50 ರನ್ ಗಳಿಸಿದರು. ಇಬ್ಬರು 82 ರನ್ನ ಜೊತೆಯಾಟ ಆಡಿದರು.
-
A first innings story 📖
— ICC Cricket World Cup (@cricketworldcup) October 14, 2023 " class="align-text-top noRightClick twitterSection" data="
Follow the action 📲 https://t.co/UBcEWW1bTJ#CWC23 #INDvPAK pic.twitter.com/T6OOx6I4po
">A first innings story 📖
— ICC Cricket World Cup (@cricketworldcup) October 14, 2023
Follow the action 📲 https://t.co/UBcEWW1bTJ#CWC23 #INDvPAK pic.twitter.com/T6OOx6I4poA first innings story 📖
— ICC Cricket World Cup (@cricketworldcup) October 14, 2023
Follow the action 📲 https://t.co/UBcEWW1bTJ#CWC23 #INDvPAK pic.twitter.com/T6OOx6I4po
36 ರನ್ ಅಂತರದಲ್ಲಿ 8 ವಿಕೆಟ್ ಪತನ: 50 ರನ್ ಗಳಿಸಿದ ಬಾಬರ್ ಸಿರಾಜ್ಗೆ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಸೌದ್ ಶಕೀಲ್(6), ಇಫ್ತಿಕರ್ ಅಹ್ಮದ್ (4) ವಿಕೆಟ್ನ್ನು ಕುಲ್ದೀಪ್ ಯಾದವ್ ಪಡೆದರು. ಈ ವೇಳೆ 49 ರನ್ ಗಳಿಸಿ ಪಿಚ್ಗೆ ಸೆಟ್ ಆಡುತ್ತಿದ್ದ ರಿಜ್ವಾನ್ ಬುಮ್ರಾಗೆ ವಿಕೆಟ್ ಕೊಟ್ಟರು. 1 ರನ್ನಿಂದ ಸತತ ಮೂರನೇ ಅರ್ಧಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು. ಅವರ ನಂತರ ಬಂದ ಶಾದಾಬ್ ಖಾನ್ (2) ಬುಮ್ರಾಗೆ ಕ್ಲೀನ್ ಬೌಲ್ಡ್ ಆದರು.
ನಿಲ್ಲದ ಬಾಲಂಗೋಚಿಗಳು: ಮೊದಲ ನಾಲ್ಕು ಆಟಗಾರರು ಎರಡಂಕಿಯ ರನ್ ಗಳಿಸಿದರೆ, ನಂತರದ ಬ್ಯಾಟರ್ಗಳು ಒಂದಂಕಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು. ಬಾಲಂಗೋಚಿಗಳಾದ ಮೊಹಮ್ಮದ್ ನವಾಜ್(4), ಹಸನ್ ಅಲಿ (12), ಹಾರಿಸ್ ರೌಫ್ (2) ಭಾರತದ ಬೌಲಿಂಗ್ ಎದುರಿಸುವಲ್ಲಿ ಎಡವಿದರು. ಇದರಿಂದ ಪಾಕಿಸ್ತಾನ 42.5 ಓವರ್ಗೆ ಸರ್ವಪತನ ಕಂಡ ಪಾಕಿಸ್ತಾನ 191 ರನ್ ಗಳಿಸಲಷ್ಟೇ ಶಕ್ತವಾಯಿತು.
-
🥶🥶🥶
— ICC Cricket World Cup (@cricketworldcup) October 14, 2023 " class="align-text-top noRightClick twitterSection" data="
Siraj clean bowls Babar Azam 📷 https://t.co/NMnvFv96gx#CWC23 #INDvPAK pic.twitter.com/s7Rpfx8UF5
">🥶🥶🥶
— ICC Cricket World Cup (@cricketworldcup) October 14, 2023
Siraj clean bowls Babar Azam 📷 https://t.co/NMnvFv96gx#CWC23 #INDvPAK pic.twitter.com/s7Rpfx8UF5🥶🥶🥶
— ICC Cricket World Cup (@cricketworldcup) October 14, 2023
Siraj clean bowls Babar Azam 📷 https://t.co/NMnvFv96gx#CWC23 #INDvPAK pic.twitter.com/s7Rpfx8UF5
ಭಾರತದ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್ಗಳನ್ನು ಸಮಾನವಾಗಿ ಹಂಚಿಕೊಂಡರು. ಅದರಲ್ಲೂ ಕುಲ್ದೀಪ್ ಯಾದವ್ 10 ಓವರ್ ಮಾಡಿ 35 ರನ್ ಬಿಟ್ಟುಕೊಟ್ಟು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಇದನ್ನೂ ಓದಿ: Cricket World Cup: 8ನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಭಾರತ.. ಉಭಯ ತಂಡಗಳ ಆಟಗಾರರ ಮಧ್ಯೆ ಹೀಗಿದೆ ಕಾದಾಟ