ಮುಂಬೈ (ಮಹಾರಾಷ್ಟ್ರ): ಇಲ್ಲಿನ ವಾಂಖೆಡೆ ಮೈದಾನ ನಾಳೆ (ನ.15) ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧವಾಗಿದೆ. ಭಾರತ ಕಳೆದ ವಿಶ್ವಕಪ್ನ ಸೆಮೀಸ್ ಸೋಲಿನ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. 10 ವರ್ಷಗಳಿಂದ ಇರುವ ಐಸಿಸಿ ಟ್ರೋಫಿಯ ಬರ ನೀಗಿಸಲು ರೋಹಿತ್ ಪಡೆ ಈ ಹರ್ಡಲ್ ಅನ್ನು ಯಶಸ್ವಿಯಾಗಿ ದಾಟಲು ತಂತ್ರ ಹೆಣೆಯುತ್ತಿದೆ.
-
The hosts' last training session before tomorrow's date with destiny 🇮🇳 #CWC23 pic.twitter.com/5niXqYTHJr
— ICC Cricket World Cup (@cricketworldcup) November 14, 2023 " class="align-text-top noRightClick twitterSection" data="
">The hosts' last training session before tomorrow's date with destiny 🇮🇳 #CWC23 pic.twitter.com/5niXqYTHJr
— ICC Cricket World Cup (@cricketworldcup) November 14, 2023The hosts' last training session before tomorrow's date with destiny 🇮🇳 #CWC23 pic.twitter.com/5niXqYTHJr
— ICC Cricket World Cup (@cricketworldcup) November 14, 2023
ಶರ್ಮಾ ಪಡೆ ವಿಶ್ವಕಪ್ನ ಲೀಗ್ ಹಂತದಲ್ಲಿ ಯಾವುದೇ ಸೋಲಿಲ್ಲದೇ ಅಜೇಯ ತಂಡವಾಗಿ ಸೆಮೀಸ್ಗೆ ಪ್ರವೇಶ ಪಡೆದುಕೊಂಡಿದೆ. ಆದರೆ, ಭಾರತಕ್ಕೆ ಕಾಡುತ್ತಿರುವ ನೆಗೆಟಿವಿಟಿ ಎಂದರೆ, 2003ರಲ್ಲಿ ಟೀಮ್ ಇಂಡಿಯಾ ಇದೇ ರೀತಿ ಸೆಮೀಸ್ಗೆ ಕಾಲಿಟ್ಟಿತ್ತು. ಆದರೆ ಅಂದು ಸೆಮೀಸ್ನಲ್ಲಿ ಎಡವಿತ್ತು. 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಎಡವಿತ್ತು. ಈ ಎರಡು ಋಣಾತ್ಮಕ ಅಂಶಗಳನ್ನು ಟೀಮ್ ಇಂಡಿಯಾ ದಾಟಬೇಕಿದೆ.
2023ರ ವಿಶ್ವಕಪ್ನ ಲೀಗ್ ಹಂತದ ಮುಖಾಮುಖಿಯಲ್ಲಿ ಭಾರತ ಕಿವೀಸ್ ಅನ್ನು ಸೋಲಿದೆ. ಈ ಮೂಲಕ 20 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ಗೆದ್ದ ಸಾಧನೆ ಮಾಡಿತ್ತು. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ರಚಿನ್ ರವೀಂದ್ರ ಅವರ 77 ರನ್‌ಗಳ ಇನ್ನಿಂಗ್ಸ್ ಮತ್ತು ಡ್ಯಾರಿಲ್ ಮಿಚೆಲ್ ಅವರ ಶತಕದ ಹೊರತಾಗಿಯೂ ಭಾರತವು ನ್ಯೂಜಿಲೆಂಡ್ ಅನ್ನು ಸೋಲಿಸಿತು.
ಚೊಚ್ಚಲ ಪ್ರಶಸ್ತಿಗೆ ಕಿವೀಸ್ ಕಣ್ಣು: 2019ರ ವಿಶ್ವಕಪ್ನ ಗೆಲುವನ್ನು ನ್ಯೂಜಿಲೆಂಡ್ ಬೆರಳಂಚಿನಲ್ಲಿ ಕಳೆದುಕೊಂಡಿತ್ತು. ಕಳೆದ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮುಖಾಮುಖಿ ಆಗಿತ್ತು ಅಂದು ಪಂದ್ಯ ಹಾಗೂ ಸೂಪರ್ ಓವರ್ ಟೈ ಆಗಿದ್ದಕ್ಕೆ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು. ಈ ಸೋಲಿನಿಂದ ಚೊಚ್ಚಲ ವಿಶ್ವಕಪ್ ಗೆಲ್ಲುವ ಕಿವೀಸ್ ಕನಸು ಭಗ್ನವಾಗಿತ್ತು. ಈ ವರ್ಷವೂ ಕಿವೀಸ್ ಅದೇ ಗುರಿಯನ್ನು ಭಾರತಕ್ಕೆ ಪ್ರವಾಸ ಬೆಳೆಸಿದೆ.
-
New Zealand are putting in the hard yards ahead of the semi-finals 🇳🇿 #CWC23 pic.twitter.com/e0joibZumJ
— ICC Cricket World Cup (@cricketworldcup) November 14, 2023 " class="align-text-top noRightClick twitterSection" data="
">New Zealand are putting in the hard yards ahead of the semi-finals 🇳🇿 #CWC23 pic.twitter.com/e0joibZumJ
— ICC Cricket World Cup (@cricketworldcup) November 14, 2023New Zealand are putting in the hard yards ahead of the semi-finals 🇳🇿 #CWC23 pic.twitter.com/e0joibZumJ
— ICC Cricket World Cup (@cricketworldcup) November 14, 2023
ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿದೆ ಭಾರತ: ಟೀಮ್ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಬಲಿಷ್ಠವಾಗಿದೆ. ಆರಂಭಿಕರಾಗಿ ರೋಹಿತ್ ಶರ್ಮಾ, ಶುಭಮನ್ ಗಿಲ್ ಯಶಸ್ಸು ಸಾಧಸಿದ್ದಾರೆ. ವಿರಾಟ್ ಕೊಹ್ಲಿ 9 ಇನ್ನಿಂಗ್ಸ್ನಿಂದ ಪ್ರಸ್ತುತ ವಿಶ್ವಕಪ್ನ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. ಅಯ್ಯರ್ ಮತ್ತು ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕಾಯ್ದುಕೊಳ್ಳುತ್ತಿದ್ದಾರೆ. ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ನೆರವಾಗುತ್ತಿದ್ದಾರೆ.
ಐವರ ಬೌಲಿಂಗ್ ಪಡೆಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಿರಾಜ್, ಬುಮ್ರಾ ಮೊದಲ 10 ಓವರ್ನಲ್ಲಿ ಎದುರಾಳಿಗಳನ್ನು ಕಾಡಿದರೆ, ನಂತರ ಶಮಿ ಸ್ಪಿನ್ನರ್ಗಳ ಜೊತೆ ಮಧ್ಯಮ ಓವರ್ಗಳಲ್ಲಿ ಕಾಟ ಕೊಡುತ್ತಿದ್ದಾರೆ. ವಿಶ್ವಕಪ್ನಲ್ಲಿ ಐದು ಜನ ಬೌಲರ್ಗಳು 9 ಪಂದ್ಯದಲ್ಲಿ 10ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅಲ್ಲದೇ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಎದುರಾಳಿ ತಂಡವನ್ನು 300 ದಾಟದಂತೆ ಬೌಲಿಂಗ್ ಮಾಡಿದ್ದಾರೆ.
ಬಲಿಷ್ಠವಾಗಿದೆ ಕಿವೀಸ್: ಡೆವೊನ್ ಕಾನ್ವೇ ನ್ಯೂಜಿಲೆಂಡ್ಗೆ ಉತ್ತಮ ಆರಂಭವನ್ನು ತಂದು ಕೊಟ್ಟಿದ್ದಾರೆ. ರಚಿನ್ ರವೀಂದ್ರ ವಿಶ್ವಕಪ್ನ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಆಗಿದ್ದಾರೆ. ರಚಿನ್ ಬ್ಯಾಟ್ನಿಂದ ಈ ವಿಶ್ವಕಪ್ನಲ್ಲಿ 3 ಶತಕ ದಾಖಲಾಗಿದೆ. ನಾಯಕ ವಿಲಿಯಮ್ಸನ್ 3 ಇನ್ನಿಂಗ್ಸ್ ಮಾತ್ರ ಆಡಿದ್ದು, 3 ಅರ್ಧಶತಕದಿಂದ 187 ರನ್ ಕಲೆ ಹಾಕಿದ್ದಾರೆ. ಬೌಲಿಂಗ್ನಲ್ಲಿ ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್ ವಿಶ್ವಕಪ್ ಉದ್ದಕ್ಕೂ ಎದುರಾಳಿಗೆ ಕಾಡಿದ್ದಾರೆ.
ಸಂಭಾವ್ಯ ತಂಡ.. ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್
ಪಂದ್ಯ: ಮಧ್ಯಹ್ನ 2ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾಟ್ ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ಲಭ್ಯವಿದೆ.
ಇದನ್ನೂ ಓದಿ: 'ಸೆಮೀಸ್ ಹಂತದಲ್ಲಿ ಎಲ್ಲವೂ ಮೊದಲಿನಿಂದ ಆರಂಭವಾದಂತೆ, ಇಲ್ಲಿ ಏನು ಬೇಕಾದರೂ ಆಗಬಹುದು': ಕೇನ್ ವಿಲಿಯಮ್ಸನ್