ETV Bharat / sports

ತಮ್ಮ ದಾಖಲೆ ಮುರಿದ ಅಶ್ವಿನ್​ 500 ವಿಕೆಟ್ ಪಡೆಯಲಿ ಎಂದು ಹರಸಿದ ಕಪಿಲ್ ದೇವ್​ - ಭಾರತದ ಪರ ಹೆಚ್ಚು ಟೆಸ್ಟ್ ವಿಕೆಟ್

ಕಪಿಲ್ ದೇವ್‌ 132 ಟೆಸ್ಟ್ ಪಂದ್ಯಗಳಿಂದ 434 ವಿಕೆಟ್ ಪಡೆದಿದ್ದರು. ಶ್ರೀಲಂಕಾ ವಿರುದ್ಧದ ಟೆಸ್ಟ್​ ನಂತರ ಆರ್‌.ಅಶ್ವಿನ್ ಪಡೆದ ವಿಕೆಟ್​ ಸಂಖ್ಯೆ 436ಕ್ಕೆ ಏರಿಕೆಯಾಗಿದ್ದು, ಕನ್ನಡಿಗ ಅನಿಲ್ ಕುಂಬ್ಳೆ(619) ನಂತರ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ.

Kapil Dev reacts after R Ashwin broke his record
ಕಪಿಲ್ ದೇವ್- ಅಶ್ವಿನ್ ದಾಖಲೆ
author img

By

Published : Mar 7, 2022, 8:22 PM IST

ಮುಂಬೈ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ವಿಶ್ವಕಪ್ ಗೆದ್ದ ನಾಯಕ ಕಪಿಲ್​ ದೇವ್​ ಅವರನ್ನು ಹಿಂದಿಕ್ಕಿದ ರವಿಚಂದ್ರನ್ ಅಶ್ವಿನ್, ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಕಪಿಲ್ 132 ಟೆಸ್ಟ್ ಪಂದ್ಯಗಳಿಂದ 434 ವಿಕೆಟ್ ಪಡೆದಿದ್ದರು. ಶ್ರೀಲಂಕಾ ವಿರುದ್ಧದ ಟೆಸ್ಟ್​ ನಂತರ ಅಶ್ವಿನ್ ವಿಕೆಟ್​ ಸಂಖ್ಯೆ 436ಕ್ಕೆ ಏರಿಕೆಯಾಗಿದ್ದು, ಕನ್ನಡಿಗ ಅನಿಲ್ ಕುಂಬ್ಳೆ(619) ನಂತರ ಭಾರತದ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಈ ಕುರಿತು ಖಾಸಗಿ ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ 1983ರ ವಿಶ್ವಕಪ್ ನಾಯಕ, ಅಶ್ವಿನ್​ಗೆ ಸರಿಯಾದ ಅವಕಾಶಗಳು ಸಿಕ್ಕಿದ್ದಿದ್ದರೆ ಈ ಹಿಂದೆಯೇ ತಮ್ಮ ದಾಖಲೆಯನ್ನು ಬ್ರೇಕ್ ಮಾಡುತ್ತಿದ್ದರು ಎಂದರು.

"ಇದೊಂದು ಶ್ರೇಷ್ಠ ಸಾಧನೆ. ಏಕೆಂದರೆ ಆತನಿಗೆ ಇತ್ತೀಚೆಗೆ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ. ಒಂದು ವೇಳೆ ಆತನಿಗೆ ಆ ಅವಕಾಶಗಳು ಸಿಕ್ಕಿದ್ದಿದ್ದರೆ ಖಂಡಿತ ಈ ಹಿಂದೆಯೇ 434ರ ಗಡಿಯನ್ನು ಆತ ದಾಟುತ್ತಿದ್ದ. ಆತನ ಸಾಧನೆಯ ಬಗ್ಗೆ ನನಗೆ ತುಂಬಾ ಖುಷಿಯಿದೆ. ನಾನೇಕೆ ಆ ಸ್ಥಾನವನ್ನು ಉಳಿಸಿಕೊಳ್ಳಬೇಕು? ನನ್ನ ಸಮಯ ಎಂದೋ ಮುಗಿದು ಹೋಗಿದೆ" ಎಂದು ಕಪಿಲ್ ದೇವ್​ ಹೇಳಿದರು.

63 ವರ್ಷ ಮಾಜಿ ಆಲ್​ರೌಂಡರ್​ ಅಶ್ವಿನ್​ ಅವರಿಂದ 500 ವಿಕೆಟ್​​ಗಳ ಮೈಲುಗಲ್ಲನ್ನು ನಿರೀಕ್ಷಿಸುವುದಾಗಿಯೂ ಹೇಳಿದ್ದಾರೆ.

ಅಶ್ವಿನ್ ಒಬ್ಬ ಅಸಾಧಾರಣ ಕ್ರಿಕೆಟಿಗ, ಶ್ರೇಷ್ಠ ಮತ್ತು ಬುದ್ದಿವಂತ ಸ್ಪಿನ್ನರ್​. ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್ ಪಡೆಯುವ ಗುರಿಯನ್ನಿಟ್ಟುಕೊಳ್ಳಬೇಕು. ಅವರು ಅದಕ್ಕಾಗಿ ಪ್ರಯತ್ನಿಸುತ್ತಾರೆ ಮತ್ತು ಅದನ್ನು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಬಹುಶಃ ಅದಕ್ಕಿಂತಲೂ ಹೆಚ್ಚು ವಿಕೆಟ್ ಪಡೆಯಬಹುದು ಎಂದು ಕಪಿಲ್ ದೇವ್ ಇದೇ ವೇಳೆ ಆಶಿಸಿದರು.

ಇದನ್ನೂ ಓದಿ:ಪಾಕ್ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮರೂಫ್ ಮಹಿಳಾ ಕ್ರಿಕೆಟಿಗರಿಗೆ ಸ್ಫೂರ್ತಿ: ಸ್ಮೃತಿ ಮಂಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.