ETV Bharat / sports

ಯುವ ಆಟಗಾರನಾದರೂ ಪಂತ್​ರಿಂದ ಇದೊಂದು ಕಲೆ ಕಲಿಯಲು ಬಯಸುವೆ: ವಾರ್ನರ್​

2022ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ತಮ್ಮ ಮೊದಲ ಪಂದ್ಯವನ್ನು ಆಡುವುದಕ್ಕೆ ಎದುರು ನೋಡುತ್ತಿದ್ದಾರೆ. 2014ರಿಂದ ಸನ್​ರೈಸರ್ಸ್ ಭಾಗವಾಗಿದ್ದ ವಾರ್ನರ್​ರನ್ನು ಹೈದರಾಬಾದ್​ ರಿಟೈನ್ ಮಾಡಿಕೊಂಡಿರಲಿಲ್ಲ. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 6.25 ಕೋಟಿ ರೂಗಳಿಗೆ ಖರೀದಿಸಿದ್ದು, ಹೊಸ ತಂಡದಲ್ಲಿ ಆಡುವುದಕ್ಕೆ ಆಸೀಸ್ ಆರಂಭಿಕ ಬ್ಯಾಟರ್ ಸಜ್ಜಾಗಿದ್ದಾರೆ.

author img

By

Published : Apr 7, 2022, 5:48 PM IST

David warner on Rishabh pant
ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಪದಾರ್ಪಣೆ ಮಾಡುವ ಉತ್ಸಾಹದಲ್ಲಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್​ ತಮ್ಮ ತಂಡದ ನಾಯಕ ರಿಷಭ್ ಪಂತ್​ ಅವರಿಂದ ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸುವ ಕಲೆ ಕಲಿಯುವುದಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

2022ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ತಮ್ಮ ಮೊದಲ ಪಂದ್ಯವನ್ನು ಆಡುವುದಕ್ಕೆ ಎದುರು ನೋಡುತ್ತಿದ್ದಾರೆ. 2014ರಿಂದ ಸನ್​ರೈಸರ್ಸ್ ಭಾಗವಾಗಿದ್ದ ವಾರ್ನರ್​ರನ್ನು ಹೈದರಾಬಾದ್​ ರಿಟೈನ್ ಮಾಡಿಕೊಂಡಿರಲಿಲ್ಲ. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 6.25 ಕೋಟಿ ರೂಗಳಿಗೆ ಖರೀದಿಸಿದ್ದು, ಹೊಸ ತಂಡದಲ್ಲಿ ಆಡುವುದಕ್ಕೆ ಆಸಿಸ್ ಆರಂಭಿಕ ಬ್ಯಾಟರ್ ಸಜ್ಜಾಗಿದ್ದಾರೆ.

ಕ್ಲಾಸ್ ಬ್ಯಾಟರ್ ಆಗಿರುವ ಡೇವಿಡ್​ ವಾರ್ನರ್,​ ನಾಯಕ ರಿಷಭ್ ಪಂತ್​ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದು, ಅವರಿಂದ ಈ ಬಾರಿ ಪ್ರತ್ಯೇಕ ಕ್ರಿಕೆಟಿಂಗ್ ಶಾಟ್​ ಕಲಿಯುವುದಕ್ಕೆ ಎದುರು ನೋಡುವುದಾಗಿ ಹೇಳಿದ್ದಾರೆ. "ಪಂತ್ ಬ್ಯಾಟಿಂಗ್ ಮಾಡುವುದನ್ನು ನೋಡಲು ಎದುರು ನೋಡುತ್ತಿದ್ದೇನೆ. ಅವರಂತೆ ಒಂದೇ ಕೈಯಲ್ಲಿ ಶಾಟ್ ಮಾಡುವುದನ್ನು ಕಲಿಯಲು ಬಯಸಿದ್ದೇನೆ" ಎಂದು ತಿಳಿಸಿದ್ದಾರೆ.

ಅವರು ಭಾರತ ತಂಡಕ್ಕಾಗಿ ಆಡುವ ವೇಳೆ ನಾನು ಅವರ ವಿರುದ್ಧವಾಗಿರುತ್ತೇನೆ. ಆದರೆ ಇವಾಗ ಅವರ ಜೊತೆಗೆ ವೇಳೆ ಕ್ರೀಸ್​ನ ಮತ್ತೊಂದು ಬದಿಯಲ್ಲಿ ನಿಂತು ಬ್ಯಾಟ್ ಮಾಡಲು ನನಗೆ ಕಾಯಲಾಗುತ್ತಿಲ್ಲ. ಆತ ನಾಯಕತ್ವವನ್ನು ಕಲಿಯುತ್ತಿರುವ ಯುವಕ ಮತ್ತು ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಮೈದಾನದಲ್ಲಿ ಅವರೊಂದಿಗೆ ಬ್ಯಾಟಿಂಗ್ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದು ವಾರ್ನರ್ ಹೇಳಿದ್ದಾರೆ.

ಇದನ್ನೂ ಓದಿ:ಕೃನಾಲ್ ಪಾಂಡ್ಯ ಜೊತೆ ವೈಮನಸ್ಸು: ಬಹಿರಂಗ ಸ್ಪಷ್ಟನೆ ಕೊಟ್ಟ ದೀಪಕ್ ಹೂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.