ನವದೆಹಲಿ : ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ಭಾರತ ವಿರುದ್ಧದ ತವರಿನ ಟೆಸ್ಟ್ ಸರಣಿಯ ವೇಳೆ ಅನಿರ್ದಿಷ್ಟಾವಧಿಗೆ ಕ್ರಿಕೆಟ್ನಿಂದ ವಿಶ್ರಾಂತಿ ತೆಗೆದುಕೊಂಡಿದ್ದರು. ಐಪಿಎಲ್ನ ಮೊದಲಾರ್ಧದ ವೇಳೆ ಗಾಯಕ್ಕೆ ಒಳಗಾಗಿದ್ದ ಅವರು, 4 ತಿಂಗಳ ಹಿಂದೆ ತಮ್ಮ ತೋರು ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಸುದೀರ್ಘ ವಿರಾಮದ ಬಳಿಕ ಈಗ ಬೆನ್ ಸ್ಟೋಕ್ಸ್ ಮತ್ತೆ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಗೆ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬೆನ್ ಸ್ಟೋಕ್ಸ್ ತಮ್ಮ ಎಡಗೈ ತೋರು ಬೆರಳಿನ ಶಸ್ತ್ರ ಚಕಿತ್ಸೆಗೆ ಒಳಗಾಗಿದ್ದರು. ಇದರಿಂದ ಚೇತರಿಸಿಕೊಂಡಿರುವ ಸ್ಟೋಕ್ಸ್ ಇತ್ತೀಚೆಗೆ ನೆಟ್ ಅಭ್ಯಾಸದಲ್ಲಿ ನಿರತರಾಗಿದ್ದ, ವಿಡಿಯೋವನ್ನು ಕೂಡಾ ಅವರು ಹಂಚಿಕೊಂಡಿದ್ದರು. ಈ ಮೂಲಕ ಬೆನ್ ಸ್ಟೋಕ್ಸ್ ಶೀಘ್ರದಲ್ಲಿಯೇ ಇಂಗ್ಲೆಂಡ್ ತಂಡಕ್ಕೆ ಮರಳುವ ಸೂಚನೆ ನೀಡಿದ್ದರು. ಆದರೆ, ಅದೀಗ ನಿಜವಾಗಿದ್ದು ಮುಂದಿನ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಪರವಾಗಿ ಕಣಕ್ಕಿಳಿಯಲು ಸ್ಟೋಕ್ಸ್ ಸಿದ್ಧರಾಗಿದ್ದಾರೆ. ಈ ಬಗ್ಗೆ ಇಸಿಬಿಯಿಂದ ಅಧಿಕೃತ ಮಾಹಿತಿ ದೊರೆತಿದೆ.
ನಾನೀಗ ಫರ್ಪೆಕ್ಟ್
ತಂಡಕ್ಕೆ ಮರಳುವ ಕುರಿತು ಮಾತನಾಡಿರುವ ಸ್ಟೋಕ್ಸ್, "ನಾನು ನನ್ನ ಮಾನಸಿಕ ಆರೋಗ್ಯವನ್ನು ಸರಿ ಮಾಡಿಕೊಳ್ಳಲು ಹಾಗೂ ಕೈ ಬೆರಳಿನ ಗಾಯದ ಚೇತರಿಕೆಗಾಗಿ ಆದ್ಯತೆ ನೀಡಿದ್ದೆ. ಈಗ ನಾನು ಚೇತರಿಕೆ ಕಂಡಿದ್ದು ನನ್ನ ಸಹ ಆಟಗಾರರನ್ನು ಸೇರಿಕೊಳ್ಳಲು ಕಾತರನಾಗಿದ್ದೇನೆ. ಆಸ್ಟ್ರೇಲಿಯಾಗೆ ತೆರಳಲು ನಾನು ಸಿದ್ಧನಾಗಿದ್ದೇನೆ" ಎಂದು ಹೇಳಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ತಂಡದಲ್ಲಿ ಹೆಸರಿಸಲ್ಪಟ್ಟಿದ್ದ ಬೆನ್ ಸ್ಟೋಕ್ಸ್ ಈ ಸರಣಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗಿ ವಿಶ್ರಾಂತಿ ಪಡೆಯಲು ಬಯಸಿದ್ದರು. ಅನಿರ್ದಿಷ್ಟಾವಧಿ ವಿಶ್ರಾಂತಿಯನ್ನು ಪಡೆದುಕೊಂಡಿದ್ದ ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯ ಹಾಗೂ ಕೈ ಬೆರಳಿನ ಕಾಯದ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದರು. ಹಾಗಾಗಿ ಅವರು ಈ ಬಾರಿಯ ಎರಡನೇ ಆವೃತ್ತಿಯ ಐಪಿಎಲ್ ಮತ್ತು ಟಿ-20 ವಿಶ್ವಕಪ್‌ನಿಂದಲೂ ದೂರ ಉಳಿದಿದ್ದರು.