ETV Bharat / sports

3ನೇ ಟೆಸ್ಟ್​ಗೆ ನಾನು ಸಂಪೂರ್ಣ ಫಿಟ್​, ಆದರೆ ಆತ ಆಡುವುದು ಡೌಟ್​: ವಿರಾಟ್ ಕೊಹ್ಲಿ - ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್​

ಬೆನ್ನು ನೋವಿನ ಕಾರಣ 2ನೇ ಟೆಸ್ಟ್​ ಪಂದ್ಯದಿಂದ ವಿರಾಟ್​ ಕೊಹ್ಲಿ ಹೊರಗುಳಿದಿದ್ದು, ಕನ್ನಡಿಗ ಕೆ.ಎಲ್.ರಾಹುಲ್ ತಂಡ ಮುನ್ನಡೆಸಿದ್ದರು. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ 7 ವಿಕೆಟ್​ಗಳಿಂದ ಗೆದ್ದು ಸರಣಿಯಲ್ಲಿ 1-1 ರ ಸಮಬಲ ಸಾಧಿಸಿತ್ತು.

Virat kohli fit for 3rd test
ವಿರಾಟ್​ ಕೊಹ್ಲಿ 3ನೇ ಟೆಸ್ಟ್​
author img

By

Published : Jan 10, 2022, 4:54 PM IST

ಕೇಪ್​ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರದಿಂದ ಆರಂಭವಾಗಲಿರುವ ನಿರ್ಣಾಯಕ ಟೆಸ್ಟ್​ ಪಂದ್ಯದಲ್ಲಿ ಆಡುವುದಕ್ಕೆ ನಾನು ಸಂಪೂರ್ಣ ಫಿಟ್ ಆಗಿದ್ದೇನೆ ಎಂದು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ತಿಳಿಸಿದ್ದಾರೆ.

ಬೆನ್ನು ನೋವಿನ ಕಾರಣ 2ನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಹೊರಗುಳಿದಿದ್ದು ಕೆ.ಎಲ್.ರಾಹುಲ್ ತಂಡ ಮುನ್ನಡೆಸಿದ್ದರು. ಈ ಪಂದ್ಯವನ್ನು ದ. ಆಫ್ರಿಕಾ 7 ವಿಕೆಟ್​ಗಳಿಂದ ಗೆದ್ದು ಸರಣಿಯಲ್ಲಿಸಮಬಲ ಸಾಧಿಸಿತ್ತು.

ನಾನು ಸಂಪೂರ್ಣವಾಗಿ ಫಿಟ್​ ಆಗಿದ್ದೇನೆ ಎಂದು 3ನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದರು. ವೇಗಿ ಸಿರಾಜ್​ ಅವರು ಜೋಹನ್ಸ್ ಬರ್ಗ್​ ಟೆಸ್ಟ್​ ವೇಳೆ ಹ್ಯಾಮ್​ಸ್ಟ್ರಿಂಗ್​ಗೆ ಒಳಗಾಗಿದ್ದರು.

2ನೇ ಟೆಸ್ಟ್​ ಪಂದ್ಯದಲ್ಲಿ ಸೋಲುಂಡಿರುವ ಭಾರತ ತಂಡ ಈ ಪಂದ್ಯದಲ್ಲಿ ಬೌನ್ಸ್​ಬ್ಯಾಕ್ ಮಾಡಲು ಕಾಯುತ್ತಿದೆ. ಈ ಪಂದ್ಯ ಗೆದ್ದರೆ ಭಾರತ ತಂಡ ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್​ ಸರಣಿ ಗೆದ್ದಂತಾಗುತ್ತದೆ.

ಸೆಂಚುರಿಯನ್​​ನಲ್ಲಿ ಮೊದಲ ಟೆಸ್ಟ್​ ಪಂದ್ಯವನ್ನು ಭಾರತ ತಂಡ 113 ರನ್​ಗಳಿಂದ ಗೆದ್ದರೆ, ಜೋಹನ್ಸ್​ಬರ್ಗ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯವನ್ನು ದ.ಆಫ್ರಿಕಾ ತಂಡ 7 ವಿಕೆಟ್​ಗಳಿಂದ ಗೆದ್ದುಕೊಂಡಿದೆ.

ಇದನ್ನೂ ಓದಿ:ಲೇಥಮ್ 252 ರನ್​, ಬೌಲ್ಟ್ 5 ವಿಕೆಟ್​​: ಬಾಂಗ್ಲಾದೇಶ ವಿರುದ್ಧ ನ್ಯೂಜಿಲ್ಯಾಂಡ್ ಪ್ರಾಬಲ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.