ETV Bharat / sports

ತಂಡದಿಂದ ಕೈಬಿಟ್ಟ ನೋವನ್ನೇ ಇಂಧನವಾಗಿಸಿಕೊಂಡು ಕನ್ನಡಿಗ ಕೆ ಎಲ್‌ ರಾಹುಲ್​ ಭರ್ಜರಿ ಕಮ್​ಬ್ಯಾಕ್ - India vs England test series

ನನ್ನನ್ನು ಟೆಸ್ಟ್ ತಂಡದಿಂದ ಕೈಬಿಡುವ ಮೊದಲು ನಾನು ವಿಭಿನ್ನ ಪರಿಸ್ಥಿತಿಯಲ್ಲಿ ಆಡಿದ್ದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ಆಸ್ಟ್ರೇಲಿಯಾಗಳಿಗೆ ಮೊದಲ ಬಾರಿಗೆ ಪ್ರವಾಸ ಮಾಡಿದ್ದೆ. ಆ ಸಂದರ್ಭದಲ್ಲಿ ನನ್ನ ಮನಸ್ಸು ತುಂಬಾ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಆ ಸಂದರ್ಭದಲ್ಲಿ ಪ್ರತಿಚೆಂಡಿಗೂ ನನ್ನ ಬಳಿ ಎರಡು ಹೊಡೆತಗಳಿವೆ ಎಂದು ಭಾವಿಸುತ್ತಿದ್ದೆ. ಜೊತೆಗೆ ಸದಾ ರನ್​ಗಳಿಸುವುದರ ಕಡೆಗೆ ನಾನು ಆಲೋಚಿಸುತ್ತಿದ್ದೆ. ಈ ಮನೋಭಾವನೆ ನನ್ನನ್ನು ವೈಫಲ್ಯಕ್ಕೀಡು ಮಾಡಿತ್ತು..

KL Rahul comeback
ಕೆಎಲ್ ರಾಹುಲ್​
author img

By

Published : Aug 14, 2021, 4:02 PM IST

ಲಂಡನ್ : ಎರಡು ವರ್ಷಗಳ ಹಿಂದೆ ಭಾರತ ಟೆಸ್ಟ್​ ತಂಡದಿಂದ ಕೈಬಿಟ್ಟಿದ್ದು ಕೆ ಎಲ್​ ರಾಹುಲ್​ಗೆ ನೋವುಂಟು ಮಾಡಿತ್ತು. ಆದರೆ, ಕನ್ನಡಿಗ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಭರ್ಜರಿ ಪುನರಾಗಮನ ಮಾಡಲು ಅದನ್ನೇ ಇಂಧನವಾಗಿ ಬಳಸಿಕೊಂಡಿರುವುದಾಗಿ ಹೇಳಿದ್ದಾರೆ.

29 ವರ್ಷದ ವಿಕೆಟ್ ಕೀಪರ್​ ಕಮ್‌ ಬ್ಯಾಟ್ಸ್​ಮನ್ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಮೊದಲ ಸರಣಿಯಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ತಮ್ಮ ಕೊನೆಯ ಟೆಸ್ಟ್​ ಪಂದ್ಯವನ್ನಾಡಿದ್ದರು. ಆ ಸರಣಿಯ ನಂತರ ಅವರನ್ನು ಟೆಸ್ಟ್​ ತಂಡದಿಂದ ಕೈಬಿಡಲಾಗಿತ್ತು.

ಆದರೆ, ಸೀಮಿತ ಓವರ್​ಗಳ ಸರಣಿಯಲ್ಲಿ ತಮ್ಮ ಸ್ಥಿರ ಪ್ರದರ್ಶನವನ್ನು ಕಾಪಾಡಿಕೊಂಡಿದ್ದ ಅವರು, ಇದೀಗ ಸಿಕ್ಕ ಒಂದು ಅವಕಾಶದಲ್ಲೇ ಎರಡು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಸ್ಥಾನಕ್ಕೆ ಸಿಮೆಂಟ್ ಹಾಕಿ ಭದ್ರಪಡಿಸಿಕೊಂಡಿದ್ದಾರೆ.

ಅವರು ಮೊದಲ ಟೆಸ್ಟ್​ನಲ್ಲಿ 84 ರನ್​ಗಳಿಸಿದ್ದರು. ಈ ಪ್ರದರ್ಶನ ಅವರನ್ನು ಸ್ವಯಂಚಾಲಿತವಾಗಿ 2ನೇ ಟೆಸ್ಟ್​ನಲ್ಲೂ ಅವಕಾಶ ಸಿಗುವಂತೆ ಮಾಡಿತು. ಇಲ್ಲೂ ತಮ್ಮ ಖದರ್ ತೋರಿಸಿದ ಕೆ ಎಲ್‌ ರಾಹುಲ್, ಬೌಲರ್​ ಸ್ನೇಹಿ ಪಿಚ್​ನಲ್ಲಿ ಆಂಗ್ಲರ ದಾಳಿ ಹಿಮ್ಮೆಟ್ಟಿಸಿ ಭರ್ಜರಿ ಶತಕ(129) ಸಿಡಿಸಿ ಮಿಂಚಿದರು. ಇವರ ಶತಕದ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್​ಗಳ ಸವಾಲಿನ ಮೊತ್ತ ಪೇರಿಸಿತು.

KL Rahul
ಕೆ ಎಲ್ ರಾಹುಲ್​

ಟೆಸ್ಟ್​ ತಂಡದಿಂದ ಹೊರಬಿದ್ದಿದ್ದು ತುಂಬಾ ನಿರಾಶೆಯನ್ನುಂಟು ಮಾಡಿತ್ತು. ಅದು ನೋವನ್ನು ಉಂಟು ಮಾಡಿತ್ತು. ಆದರೆ, ಇದಕ್ಕೆ ಯಾರನ್ನು ದೂಷಿಸುವ ಬದಲು ನನ್ನನ್ನು ನಾನೇ ದೂಷಿಸಿಕೊಂಡಿದ್ದೆ. ಆದರೆ, ನಾನು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೆ.

ನಾನು ಭಾವಿಸಿದಂತೆ ಈಗ ನನ್ನ ಬಳಿ ಬಂದಿದೆ. ನಾನು ನನ್ನ ಬ್ಯಾಟಿಂಗ್​ ಅನ್ನು ಆನಂದಿಸುತ್ತೇನೆ. ಲಾರ್ಡ್ಸ್​ನಲ್ಲಿ 100 ಗಳಿಸುವುದು ತುಂಬಾ ವಿಶೇಷವಾದದ್ದು" ಎಂದು ರಾಹುಲ್ ತಮ್ಮ ಜೊತೆಗಾರ ರೋಹಿತ್​ ಜೊತೆ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ.

ಇದನ್ನು ಓದಿ:ಪೂಜಾರಾ, ರಹಾನೆ ಪರ ರಾಹುಲ್​ ಬ್ಯಾಟ್​​: ಆದಷ್ಟು ಬೇಗ ಫಾರ್ಮ್​​ ಕಂಡುಕೊಳ್ಳಲಿದ್ದಾರೆ ಎಂದ ಕನ್ನಡಿಗ

ಹಿಂದೆ ಕಹಿ ನೆನಪುಗಳನ್ನು ನಾನು ನನ್ನೊಂದಿಗೆ ಕೊಂಡೊಯ್ಯಲು ಬಯಸಲ್ಲ, ಬದಲಾಗಿ ಅದನ್ನು ಇಂಧನವಾಗಿ ಬಳಸಿಕೊಳ್ಳುತ್ತೇನೆ. ನಿಮಗೆ ಆ ರೀತಿಯ ನೋವು ಅಗತ್ಯವಿರುತ್ತದೆ. ಯಾಕೆಂದರೆ, ಅದೇ ನಿಮ್ಮನ್ನು ಮತ್ತಷ್ಟು ದೂರ ತಳ್ಳುತ್ತದೆ ಎಂದು ಕೆ ಎಲ್‌ ರಾಹುಲ್ ಹೇಳಿದ್ದಾರೆ. ಈ ಎರಡು ವರ್ಷಗಳಲ್ಲಿ ಬದಲಾವಣೆ ಹೇಗೆ ಸಾಧ್ಯವಾಯಿತು ಎಂದು ಕೇಳಿದ್ದಕ್ಕೆ, ನನ್ನಲ್ಲಿದ್ದ ಯಾವಾಗಲೂ ರನ್​ಗಳಿಸಲೇಬೇಕೆಂಬ ಮನಸ್ಥಿತಿಯಿಂದ ಹೊರಬಂದ ನಂತರ ಇದು ಸಾಧ್ಯವಾಗಿದೆ ಎಂದರು.

ನನ್ನನ್ನು ಟೆಸ್ಟ್ ತಂಡದಿಂದ ಕೈಬಿಡುವ ಮೊದಲು ನಾನು ವಿಭಿನ್ನ ಪರಿಸ್ಥಿತಿಯಲ್ಲಿ ಆಡಿದ್ದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ಆಸ್ಟ್ರೇಲಿಯಾಗಳಿಗೆ ಮೊದಲ ಬಾರಿಗೆ ಪ್ರವಾಸ ಮಾಡಿದ್ದೆ. ಆ ಸಂದರ್ಭದಲ್ಲಿ ನನ್ನ ಮನಸ್ಸು ತುಂಬಾ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಆ ಸಂದರ್ಭದಲ್ಲಿ ಪ್ರತಿಚೆಂಡಿಗೂ ನನ್ನ ಬಳಿ ಎರಡು ಹೊಡೆತಗಳಿವೆ ಎಂದು ಭಾವಿಸುತ್ತಿದ್ದೆ. ಜೊತೆಗೆ ಸದಾ ರನ್​ಗಳಿಸುವುದರ ಕಡೆಗೆ ನಾನು ಆಲೋಚಿಸುತ್ತಿದ್ದೆ. ಈ ಮನೋಭಾವನೆ ನನ್ನನ್ನು ವೈಫಲ್ಯಕ್ಕೀಡು ಮಾಡಿತ್ತು.

ಆದರೆ, ಈ ಬಾರಿ ರನ್​ಗಾಗಿ ಹುಡುಕುವ ಬದಲು ಕೇವಲ ಚೆಂಡನ್ನು ಆಡುಬೇಕು ಎಂದು ನನ್ನಲ್ಲಿ ನಾನೇ ಹೇಳಿಕೊಂಡೆ. ಇದು ನನಗೆ ಪ್ರಜ್ಞಾಪೂರ್ವಕ ಪ್ರಯತ್ನವಾಗಿತ್ತು. ಎರಡು ವರ್ಷಗಳ ಕಾಲ ಅಭ್ಯಾಸ ಮಾಡಿದೆ ಮತ್ತು ಈ ಸಂದರ್ಭದಲ್ಲಿ ಬೇರೆ ಆಟಗಾರರ ಬ್ಯಾಟಿಂಗ್​ ನೋಡಿ, ಬ್ಯಾಟ್ಸ್​ಮನ್ ಆದವನು ಹೇಗೆ ಇನ್ನಿಂಗ್ಸ್​ ಕಟ್ಟಬೇಕು ಮತ್ತು ರನ್​ಗಳಿಸಬೇಕು ಎಂಬ ಕೌಶಲ್ಯವನ್ನು ಅರಿತುಕೊಂಡೆ, ಇದು ನನಗೆ ತುಂಬಾ ನೆರವಾಯಿತು ಎಂದು ತಮ್ಮ ಬದಲಾವಣೆಯ ಬಗ್ಗೆ ಕನ್ನಡಿಗ ಕೆ ಎಲ್‌ ರಾಹುಲ್‌ ವಿವರಿಸಿದ್ದಾರೆ.

ಇದನ್ನು ಓದಿ: 1990 ಆಗಸ್ಟ್​ 14: ಶತಕಗಳ ಶತಕಕ್ಕೆ ಸಚಿನ್​ ನಾಂದಿ ಹಾಡಿ ಇಂದಿಗೆ 31 ವರ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.