ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಕರಿನೆರಳು ಬೀರಿದ್ದು, ಅದೇ ಕಾರಣಕ್ಕಾಗಿ ಇದೀಗ ಟೂರ್ನಿ ಮುಂದೂಡಿಕೆಯಾಗಿದೆ.
ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆ ಮಾಡಲಾಗಿತ್ತು. ಟೂರ್ನಿ ಆರಂಭದಿಂದಲೂ ಕೆಲ ಪ್ಲೇಯರ್ಸ್ಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರ ಮಧ್ಯೆ ಕೂಡ ಮೊದಲ ಅವಧಿ ಪಂದ್ಯಗಳನ್ನ ಯಶಸ್ವಿಯಾಗಿ ನಡೆಸಲಾಗಿತ್ತು. ಆದರೆ, ಎರಡನೇ ಅವಧಿ ಮ್ಯಾಚ್ ಆರಂಭಗೊಳ್ಳುತ್ತಿದ್ದಂತೆ ಕೆಲ ತಂಡದ ಪ್ಲೇಯರ್ಗಳಲ್ಲಿ ಸೋಂಕು ದೃಢಗೊಳ್ಳಲು ಆರಂಭಗೊಂಡಿತು. ಹೀಗಾಗಿ ತಕ್ಷಣವೇ ಭಾರತೀಯ ಕ್ರಿಕೆಟ್ ಮಂಡಳಿ ಟೂರ್ನಿ ರದ್ಧುಗೊಳಿಸಿ ಮಹತ್ವದ ಆದೇಶ ಹೊರಹಾಕಿತ್ತು. ಹೀಗಾಗಿ ವಿದೇಶಿ ಪ್ಲೇಯರ್ಸ್ ಈಗಾಗಲೇ ತವರಿನತ್ತ ಮುಖ ಮಾಡಿದ್ದಾರೆ.
ಪ್ಲೇಯರ್ಸ್ಗಳಿಗೆ ಯಾವುದೇ ಕಾರಣಕ್ಕೂ ಕೋವಿಡ್ ಸೋಂಕು ಬರಬಾರದು ಎಂಬ ಉದ್ದೇಶದಿಂದ ಬಯೋ ಬಬಲ್ ನಿರ್ಮಿಸಲಾಗಿತ್ತು. ಆದರೂ ಅದರೊಳಗೆ ಕೊರೊನಾ ಲಗ್ಗೆ ಹಾಕಿರುವುದು ಇದೀಗ ಆಶ್ಚರ್ಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸ್ಟೇಡಿಯಂನಲ್ಲಿ ಕುಸ್ತಿಪಟು ಕೊಲೆ.. ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹುಡುಕಾಟದಲ್ಲಿ ಪೊಲೀಸ್
ಗಂಗೂಲಿ ಹೇಳಿದ್ದೇನು?
ಇಂಡಿಯನ್ ಪ್ರೀಮಿಯರ್ ಲೀಗ್ ಬೇರೆ ಬೇರೆ ನಗರಗಳಲ್ಲಿ ಆಯೋಜನೆಗೊಂಡಿದ್ದರಿಂದ ಪ್ಲೇಯರ್ಸ್ ಅಲ್ಲಿಗೆ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿತು. ಇದೇ ವೇಳೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಬಯೋ ಬಬಲ್ ಒಳಗೆ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಪ್ರಯಾಣ ಮಾಡಿರುವುದರಿಂದ ಕೋವಿಡ್ ಲಗ್ಗೆ ಹಾಕಿರುವ ಸಾಧ್ಯತೆ ಇದೆ ಎಂದಿರುವ ಗಂಗೂಲಿ, ಕಳೆದ ವರ್ಷ ಯುಎಇನಲ್ಲಿ ಆಯೋಜನೆ ಮಾಡಿದಾಗ ಪ್ಲೇಯರ್ಸ್ ವಿಮಾನದ ಮೂಲಕ ಪ್ರಯಾಣ ಬೆಳೆಸುವ ಅವಶ್ಯಕತೆ ಇರಲಿಲ್ಲ. ಆದರೆ, ಇದೀಗ ಆರು ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದರಿಂದ ವಿಮಾನದ ಮೂಲಕ ಪ್ಲೇಯರ್ಸ್ ಪ್ರಯಾಣ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಸಮಸ್ಯೆ ಉಂಟಾಗಿರಬಹುದು ಎಂದಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯರ್ಸ್ಗಳಲ್ಲಿ ಕೋವಿಡ್ ಕಾಣಿಸಿಕೊಂಡಿದ್ದರಿಂದ ಟೂರ್ನಿ ಮುಂದೂಡಿಕೆ ಮಾಡಲಾಗಿದೆ.