ನವದೆಹಲಿ: ವಿಶ್ವಕಪ್ ಮುನ್ನ ಭಾರತ ಮೂರು ಏಕದಿನ ಪಂದ್ಯದ ಸರಣಿಯನ್ನು ಆಸ್ಟ್ರೇಲಿಯಾದ ವಿರುದ್ಧ ಆಡುತ್ತಿದೆ. ಎರಡು ಪಂದ್ಯದ ನಾಯಕತ್ವವನ್ನು ಕನ್ನಡಿಗ ಕೆ ಎಲ್ ರಾಹುಲ್ಗೆ ನೀಡಲಾಗಿದೆ. ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಭಾರತ 5 ವಿಕೆಟ್ಗಳಿಂದ ಮಣಿಸಿದೆ. ಈ ಗೆಲುವಿನ ಸಹಾಯದಿಂದ ಭಾರತ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿದೆ.
ಈ ಪಂದ್ಯದ ಗೆಲುವಿನ ನಂತರ ನಾಯಕ ಕೆ ಎಲ್ ರಾಹುಲ್ ಜಿಯೋ ಸಿನಿಮಾದ ಜೊತೆಗೆ ಮಾತನಾಡಿದ್ದು, 2011ರಲ್ಲಿ ಭಾರತ ವಿಶ್ವಕಪ್ ಗೆದ್ದ ಕ್ಷಣವನ್ನು ನೆನೆದಿದ್ದಾರೆ. ಅಲ್ಲದೇ ಮತ್ತೊಮ್ಮೆ ಇಂತಹ ಐತಿಹಾಸಿಕ ಕ್ಷಣವನ್ನು ಮುಂಬರುವ 2023 ಆವೃತ್ತಿಯ ಮೂಲಕ ಅದನ್ನು ಮರುಸೃಷ್ಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
-
Which #TeamIndia member is on #KLRahul's speed dial📞? 🤔
— JioCinema (@JioCinema) September 23, 2023 " class="align-text-top noRightClick twitterSection" data="
Find out this and more as the skipper faces a rapid spell of questions in #Q20s- streaming FREE on #JioCinema 💻 #IndiaCricketKaNayaGhar #TestedByTheBest #IDFCFirstBankODITrophy pic.twitter.com/e1ra5eTxIc
">Which #TeamIndia member is on #KLRahul's speed dial📞? 🤔
— JioCinema (@JioCinema) September 23, 2023
Find out this and more as the skipper faces a rapid spell of questions in #Q20s- streaming FREE on #JioCinema 💻 #IndiaCricketKaNayaGhar #TestedByTheBest #IDFCFirstBankODITrophy pic.twitter.com/e1ra5eTxIcWhich #TeamIndia member is on #KLRahul's speed dial📞? 🤔
— JioCinema (@JioCinema) September 23, 2023
Find out this and more as the skipper faces a rapid spell of questions in #Q20s- streaming FREE on #JioCinema 💻 #IndiaCricketKaNayaGhar #TestedByTheBest #IDFCFirstBankODITrophy pic.twitter.com/e1ra5eTxIc
"2011 ವಿಶ್ವಕಪ್ನ ಫೈನಲ್ ಸಮಯದಲ್ಲಿ ನಾನು ಬೆಂಗಳೂರಿನಲ್ಲಿ ಕೆಲವು ಸ್ನೇಹಿತರೊಂದಿಗೆ ಆಟಗಳನ್ನು ನೋಡುತ್ತಿದ್ದೆ. ಮೊದಲೆರಡು ವಿಕೆಟ್ ಉರುಳಿದಾಗ ಪಂದ್ಯವನ್ನು ಸೋತೆವು ಎಂದುಕೊಂಡೆವು. ಆದರೆ ಕೊನೆಯಲ್ಲಿ ಧೋನಿ ಪಂದ್ಯವನ್ನು ಗೆಲ್ಲಿಸಿದರು. ವಿಜಯದ ನಂತರ ನಾವು ಬೆಂಗಳೂರಿನ ಗಲ್ಲಿಯಲ್ಲಿ ಬೈಕ್ನಲ್ಲಿ ಪ್ರಯಾಣಿಸಿದ್ದೆವು. ಆಗ ಗಲ್ಲಿಗಲ್ಲಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು. ಎಲ್ಲರೂ ಕುಣಿದು ಸಂಭ್ರಮಿಸುತ್ತಿದ್ದರು. ಅದು ಭಾರತೀಯರಾಗಿ ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ದೇಶದ ಜನರಿಗಾಗಿ ನಾವು ಅದನ್ನು ಮರುಸೃಷ್ಟಿಸಬಹುದು ಎಂದು ಆಶಿಸುತ್ತೇನೆ" ಎಂದು ರಾಹುಲ್ ಹೇಳಿದ್ದಾರೆ.
ಐಪಿಎಲ್ ವೇಳೆ ಗಾಯಕ್ಕೆ ತುತ್ತಾಗಿ ತಂಡದಿಂದ ಸುಮಾರು ಆರು ತಿಂಗಳ ಕಾಲ ಹೊರಗುಳಿದಿದ್ದ ರಾಹುಲ್ ಏಷ್ಯಾಕಪ್ಗೆ ನೇರವಾಗಿ ಆಯ್ಕೆ ಆದರು. ಅಲ್ಲಿ ಪಾಕಿಸ್ತಾನದ ಮೇಲೆ ಶತಕದ ಜೊತೆಗೆ ಉತ್ತಮ ಪ್ರದರ್ಶನ ನೀಡಿದರು. ನಂತರ ಈಗ ಆಸ್ಟ್ರೇಲಿಯಾದ ಭಾರತ ಪ್ರವಾಸದ ಪಂದ್ಯಕ್ಕೆ ನಾಯಕರಾಗಿ ಆಯ್ಕೆ ಆಗಿದ್ದಾರೆ. ಮೊದಲ ಪಂದ್ಯ ಅವರ ನಾಯಕತ್ವದಲ್ಲಿ ಭಾರತ ಸಾಂಘಿಕ ಪ್ರದರ್ಶನ ನೀಡಿ ಸುಲಭ ಜಯ ಸಾಧಿಸಿದೆ.
ನಾಯಕತ್ವದ ಪಾತ್ರವನ್ನು ವಹಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ, "ಕಳೆದ ಎರಡು ವರ್ಷಗಳಲ್ಲಿ ತಂಡದ ಆಡಳಿತವು ನನ್ನ ಮೇಲೆ ಹೆಚ್ಚಿನ ನಂಬಿಕೆಯನ್ನು ತೋರಿಸಿದೆ. ಅವರು ನನಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುತ್ತಿದ್ದಾರೆ, ಇದು ಅವರು ನನ್ನ ಸಾಮರ್ಥ್ಯಗಳಲ್ಲಿ ನಂಬಿಕೆಯನ್ನು ತೋರಿಸುತ್ತಾರೆ. ಇದು ನನಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳುವುದನ್ನು ಆನಂದಿಸುತ್ತೇನೆ" ಎಂದಿದ್ದಾರೆ.
"ಏಷ್ಯಾಕಪ್‌ನಲ್ಲಿ ನಾನು ಆಡುವುದನ್ನು ಎಲ್ಲರೂ ನೋಡಿದ್ದಾರೆ, ನಾನು ಎಲ್ಲಾ ಪಂದ್ಯಗಳನ್ನು ಸೂಪರ್ ಫೋರ್‌ನಲ್ಲಿ ಆಡಿದ್ದೇನೆ. ನನಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ರಯತ್ನವನ್ನು ಮಾಡಿದ್ದೇನೆ. ನನ್ನ ಫಿಟ್ನೆಸ್ಗೆ ಇದು ಹೆಚ್ಚು ಕಡಿಮೆ ಎಲ್ಲರಿಗೂ ಉತ್ತರ ಸಿಕ್ಕಂತೆ. ಮುಂದಿನ ಎರಡು ತಿಂಗಳು ವಿಶ್ವಕಪ್ ಮತ್ತು ಆಸ್ಟ್ರೇಲಿಯಾ ಸರಣಿ ಆಡಬೇಕಿದ್ದು, ಇದೇ ಆತ್ಮವಿಶ್ವಾಸದ ಜೊತೆಗೆ ಫಾರ್ಮ್ನ್ನು ಮುಂದುವರೆಸಿಕೊಂಡು ಹೋಗಲು ಬಯಸುತ್ತೇನೆ" ಎಂದು ಹೇಳಿದರು.
ಪಂದ್ಯವೊಂದಕ್ಕೆ ಅವರ ದೈಹಿಕ ಸಿದ್ಧತೆಯ ಬಗ್ಗೆ ಕೇಳಿದಾಗ, "ನಾನು ಯಾವಾಗ ತಂಡಕ್ಕೆ ಮರಳುತ್ತೇನೆ ಎಂದು ನನಗೆ ತಿಳಿದಿತ್ತು, ನಾನು ಕೀಪಿಂಗ್ ಮತ್ತು ಬ್ಯಾಟಿಂಗ್ ಮಾಡಬೇಕಾಗಿತ್ತು. ನಾನು ಕೇವಲ ಬ್ಯಾಟಿಂಗ್ ಮಾಡುವಾಗ ಹೋಲಿಸಿದರೆ ದೈಹಿಕ ಸವಾಲುಗಳು ತುಂಬಾ ಹೆಚ್ಚು. ಇದು ನನಗೆ ತಿಳಿದಿತ್ತು. ಹಾಗಾಗಿ ನನ್ನ ಫಿಟ್‌ನೆಸ್‌ನಲ್ಲಿ ನಾನು ತುಂಬಾ ಶ್ರಮಿಸಿದೆ. ಕ್ರಿಕೆಟಿಗರಾಗಿ, ಮೈದಾನದಲ್ಲಿ ನಾವು ಎದುರಿಸಬೇಕಾದ ಸವಾಲುಗಳನ್ನು ನಾವು ತಿಳಿದಿದ್ದೇವೆ. ತರಬೇತಿ ಮತ್ತು ಅಭ್ಯಾಸದ ಅವಧಿಗಳಲ್ಲಿ ಅದನ್ನು ಅದಕ್ಕಾಗಿ ಸೂಕ್ತ ತಯಾರಿಯನ್ನು ಮಾಡಿಕೊಂಡಿಕೊಳ್ಳುತ್ತೇವೆ" ಎಂದರು.
ಇದನ್ನೂ ಓದಿ: Asian Games: ಪ್ರಾಥಮಿಕ ಲೀಗ್ ಪಂದ್ಯದಲ್ಲಿ ಭಾರತಕ್ಕೆ ಸುಲಭ ಗೆಲುವು.. ಟೇಬಲ್ ಟೆನ್ನಿಸ್ನಲ್ಲಿ ಪ್ರಿ-ಕ್ವಾರ್ಟರ್ಗೆ ಪ್ರವೇಶ