ಶಿಮ್ಲಾ: ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧ ನಡೆದ 2022ರ ಕಿರಿಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅದ್ಭುತ ಆಲ್ರೌಂಡರ್ ಪ್ರದರ್ಶನ ತೋರಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಹಿಮಾಚಲ ಪ್ರದೇಶದ 19 ವರ್ಷದ ಯುವಕ ರಾಜ್ ಬಾವಾ ದೇಶಕ್ಕೆ, ರಾಜ್ಯಕ್ಕೆ ಹಾಗೂ ತನ್ನ 3 ತಲೆಮಾರಿನ ಕ್ರೀಡಾ ಪರಂಪರೆಯುಳ್ಳ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.
ರಾಜ್ ಬಾವಾ ಹಿಮಾಚಲ ಪ್ರದೇಶದ ನಹಾನ್ ಪ್ರಾಂತ್ಯದ ಯುವ ಕ್ರಿಕೆಟಿಗ . ಈ ತ 2022ರ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 31 ರನ್ ನೀಡಿದ 5 ವಿಕೆಟ್ ಪಡೆದಿದ್ದರು. ಜೊತೆಗೆ 190 ರನ್ಗಲನ್ನು ಚೇಸ್ ಮಾಡುವ ವೇಳೆ 54 ಎಸೆತಗಳಲ್ಲಿ 35 ರನ್ಗಳಿಸಿ 4 ವಿಕೆಟ್ಗಳ ರೋಚಕ ಜಯಕ್ಕೆ ಕಾರಣರಾಗಿದ್ದರಲ್ಲದೆ, ಭಾರತ 5ನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯಲು ನೆರವಾಗಿದ್ದರು.
ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಈ ಯುವಕನಿಗೆ ಕ್ರೀಡೆ ಎಂಬುದು ರಕ್ತಗತವಾಗಿ ಬಂದಿದೆ. ಈತನ ಅಜ್ಜ ತ್ರಕೋಲನ್ ಸಿಂಗ್ ಬಾವಾ 1948ರ ಲಂಡನ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ಭಾರತ ಹಾಕಿ ತಂಡದ ಸದಸ್ಯರಾಗಿದ್ದರು. ಇದು ಭಾರತ ಸ್ವಾತಂತ್ರ್ಯ ಪಡೆದ ನಂತರ ಪಾಲ್ಗೊಂಡ ಮೊದಲ ಒಲಿಂಪಿಕ್ಸ್ ಆಗಿತ್ತು.
ಇನ್ನು ಇವರ ತಂದೆ ಸುಖ್ವಿಂದರ್ ಸಿಂಗ್ ಬಾವಾ ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಬೇಕೆನಿಸಿದರೂ ಗಾಯದ ಕಾರಣ ಕ್ರಿಕೆಟ್ನಲ್ಲಿ ಮುಂದುವರಿಯಲು ಆಗಲಿಲ್ಲ. ಆದರೆ 2000ದಲ್ಲಿ ಅಂಡರ್ 19 ವಿಶ್ವಕಪ್ ವೇಳೆ ಭಾರತದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಇದೀಗ ಬಾವಾ ಕುಟುಂಬದ ಮೂರನೇ ತಲೆಮಾರಿನ ಕುಡಿ, 2022ರ ಕಿರಿಯರ ವಿಶ್ವಕಪ್ನಲ್ಲಿ ದೇಶಕ್ಕೆ ಟ್ರೋಫಿ ಗೆದ್ದುಕೊಡುವ ಮೂಲಕ ತಾತನಂತೆ ದೇಶಕ್ಕೆ ಕೀರ್ತಿ ತಂದರೆ, ಅಪ್ಪನಿಂದ ಸಾಧ್ಯವಾಗದ ಭಾರತ ಜರ್ಸಿಯನ್ನು ತೊಡುವ ಮೂಲಕ ಅವರ ಕನಸನ್ನು ನನಸು ಮಾಡಿದ್ದಾರೆ.
-
This picture sums up everything. @YUVSTRONG12 has the future #ICCU19WCFinal winner and man of the match, Raj Bawa in his lap. Chandigarh should be really proud of what they have given to Indian cricket over the years. @therealkapildev @vikrantgupta73 @chetans1987 pic.twitter.com/pkazmdyJpa
— NISHANT JEET ARORA (@NJA21) February 5, 2022 " class="align-text-top noRightClick twitterSection" data="
">This picture sums up everything. @YUVSTRONG12 has the future #ICCU19WCFinal winner and man of the match, Raj Bawa in his lap. Chandigarh should be really proud of what they have given to Indian cricket over the years. @therealkapildev @vikrantgupta73 @chetans1987 pic.twitter.com/pkazmdyJpa
— NISHANT JEET ARORA (@NJA21) February 5, 2022This picture sums up everything. @YUVSTRONG12 has the future #ICCU19WCFinal winner and man of the match, Raj Bawa in his lap. Chandigarh should be really proud of what they have given to Indian cricket over the years. @therealkapildev @vikrantgupta73 @chetans1987 pic.twitter.com/pkazmdyJpa
— NISHANT JEET ARORA (@NJA21) February 5, 2022
ಯುವರಾಜ್ ಸಿಂಗ್ ಅವರನ್ನ ಪ್ರೇರಣೆಯಾಗಿ ತೆಗೆದುಕೊಂಡಿರುವ ರಾಜ್ ಬಾವಾ ಬಲಗೈ ಬೌಲರ್ ಮತ್ತು ಎಡಗೈ ಬ್ಯಾಟರ್. ಈತ 2022 ವಿಶ್ವಕಪ್ನಲ್ಲಿ 9 ವಿಕೆಟ್ ಮತ್ತು 252 ರನ್ಗಳಿಸಿದ್ದಾರೆ. ತಂಡದ ನಾಯಕ ಧುಲ್ ಮತ್ತು ಉಪನಾಯಕ ರಶೀದ್ ಕೊರೊನಾದಿಂದ ಲೀಗ್ ಪಂದ್ಯಗಳನ್ನು ತಪ್ಪಿಸಿಕೊಂಡಾಗ ತಂಡದಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು.
ಮೂರು ತಲೆಮಾರಿನಿಂದಲೂ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಾವಾ ಕುಟುಂಬದ ಪರಂಪರೆಯನ್ನು ರಾಜ್ ಮುಂದುವರಿಸಿಕೊಂಡು ಹೋಗುತ್ತಿದ್ದು, ಮುಂದೆಯೂ ಅವರು ಕುಟುಂಬದಂತೆ ಕ್ರೀಡಾ ಕ್ಷೇತ್ರದಲ್ಲಿ ದೇಶ ಹೆಮ್ಮೆ ಪಡುವ ರೀತೀಯಲ್ಲಿ ಸಾಗಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಇದನ್ನೂ ಓದಿ:ಐಸಿಸಿ U19 ವಿಶ್ವಕಪ್ 'ಅತ್ಯಂತ ಮೌಲ್ಯಯುತ ತಂಡ'ಕ್ಕೆ ಯಶ್ ಧುಲ್ ನಾಯಕ, 3 ಭಾರತೀಯರಿಗೆ ಸ್ಥಾನ