ನವದೆಹಲಿ : ಭಾರತದಲ್ಲಿ ಕೊರೊನಾದಿಂದ ಜನರು ಎದುರಿಸುತ್ತಿರುವ ಸಾವು-ನೋವುಗಳನ್ನು ನೋಡಿ ನನ್ನ ಹೃದಯ ಒಡೆದಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಕಳೆದ ಎರಡು ವಾರಗಳಿಂದ ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣ ಕಂಡು ಬರುತ್ತಿವೆ. ಸಾವಿರಾರು ಮಂದಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮಂಗಳವಾರ ಸ್ಥಗಿತಗೊಂಡಿದೆ. ಪ್ರಸ್ತುತ ಭಾರತದ ಸ್ಥಿತಿ ನೋಡಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟ್ಟೇಟರ್ ಕೆವಿನ ಪೀಟರ್ಸನ್ ಮರುಕ ವ್ಯಕ್ತಪಡಿಸಿದ್ದಾರೆ.
-
India - it’s heartbreaking to see a country I love so much suffering! 😢
— Kevin Pietersen🦏 (@KP24) May 4, 2021 " class="align-text-top noRightClick twitterSection" data="
You WILL get through this!
You WILL be stronger coming out of this!
Your kindness & generosity NEVER goes unnoticed even during this crisis! 🙏🏽#IncredibleIndia ❤️
">India - it’s heartbreaking to see a country I love so much suffering! 😢
— Kevin Pietersen🦏 (@KP24) May 4, 2021
You WILL get through this!
You WILL be stronger coming out of this!
Your kindness & generosity NEVER goes unnoticed even during this crisis! 🙏🏽#IncredibleIndia ❤️India - it’s heartbreaking to see a country I love so much suffering! 😢
— Kevin Pietersen🦏 (@KP24) May 4, 2021
You WILL get through this!
You WILL be stronger coming out of this!
Your kindness & generosity NEVER goes unnoticed even during this crisis! 🙏🏽#IncredibleIndia ❤️
ಭಾರತವು ನಾನು ತುಂಬಾ ಪ್ರೀತಿಸುವ ದೇಶದ ಜನತೆ ಕಣ್ಣೀರಿಡುತ್ತಿರುವ ಹಾಗೂ ಈ ರೀತಿ ನರಳಾಡುತ್ತಿರುವುದನ್ನು ನೋಡಿ ನನ್ನ ಹೃದಯ ಛಿದ್ರವಾಗಿದೆ. ನೀವು ಇದನ್ನು ದೂರ ಮಾಡಲಿದ್ದೀರಿ, ಇದರಿಂದ ಬಲಶಾಲಿಯಾಗಿ ಹೊರ ಬರಲಿದ್ದೀರಿ, ನಿಮ್ಮ ದಯೆ ಮತ್ತು ಔದಾರ್ಯ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಗಮನಕ್ಕೆ ಬಾರದೇ ಇರದು" ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ನ ಮುಂದೂಡಿದ ನಂತರ ಪೀಟರ್ಸನ್ ಈ ಟ್ವೀಟ್ ಮಾಡಿದ್ದಾರೆ. ಕೆಕೆಆರ್ ಮತ್ತು ಸಿಎಸ್ಕೆ ಬಳಗದಲ್ಲಿ ಕೆಲವು ಕ್ರಿಕೆಟಿರು ಮತ್ತು ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಬಿಸಿಸಿಐ ಟೂರ್ನಿಯನ್ನು ತಕ್ಷಣದಲ್ಲೇ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಇದನ್ನು ಓದಿ:ಕೊರೊನಾ ಹೋರಾಟಕ್ಕೆ ದೇಣಿಗೆ ನೀಡಿದ ಆಸ್ಟ್ರೇಲಿಯಾ ವೇಗಿ ಜೇಸನ್ ಬೆಹ್ರೆನ್ಡಾರ್ಫ್