ETV Bharat / sports

ಹೇಡನ್, ಫಿಲಾಂಡರ್​ಗೆ ಮಣೆ ಹಾಕಿದ ಪಾಕ್; ಟಿ-20 ವಿಶ್ವಕಪ್​ಗೆ ಕೋಚ್​ಗಳಾಗಿ ನೇಮಕ - ಪಾಕ್​ ಕೋಚ್​ ಆಗಿ ಮ್ಯಾಥೂ ಹೇಡನ್​

ವಿಶ್ವಕಪ್​​ ಟೂರ್ನಮೆಂಟ್​ಗೆ ಆಯ್ಕೆಯಾಗಿರುವ ಪಾಕ್​ ತಂಡಕ್ಕೆ ಇದೀಗ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್​ ಬ್ಯಾಟಿಂಗ್ ಕೋಚ್​ ಆಗಿ ಹಾಗೂ ದಕ್ಷಿಣ ಆಫ್ರಿಕಾದ ವೇಗದ ಬೌಲರ್​​ ಫಿಲಾಂಡರ್​ ಬೌಲಿಂಗ್​ ಕೋಚ್​ ಆಗಿ ನೇಮಕಗೊಂಡಿದ್ದಾರೆ.

Hayden, Philander
Hayden, Philander
author img

By

Published : Sep 13, 2021, 6:13 PM IST

ಕರಾಚಿ(ಇಸ್ಲಾಮಾಬಾದ್​): ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ಗೆ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಮೀಜ್​ ರಾಜಾ ನೇತೃತ್ವದ ಮಂಡಳಿ ಇದೀಗ ನೂತನ ಕೋಚ್​ಗಳ ಆಯ್ಕೆ ಮಾಡಿದೆ. ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್​ಮನ್​ ಮ್ಯಾಥ್ಯೂ ಹೇಡನ್​ ಹಾಗೂ ದಕ್ಷಿಣ ಆಫ್ರಿಕಾದ ವೇಗದ ಬೌಲರ್​​ ಫಿಲಾಂಡರ್​ ಪಾಕ್​ ತಂಡದ ಕೋಚ್​ಗಳಾಗಿ ನೇಮಕವಾಗಿದ್ದಾರೆ.

ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಆಯ್ಕೆಯಾಗುತ್ತಿದ್ದಂತೆ ಕೋಚ್​ಗಳಾಗಿದ್ದ ಮಿಸ್ಬಾ ಉಲ್ ಹಕ್​ ಹಾಗೂ ವಕಾರ್​ ಯೂನಿಸ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ನೂತನ ಕೋಚ್​​ಗಳ ನೇಮಕ ಮಾಡುವ ಅನಿವಾರ್ಯತೆ ತಂಡಕ್ಕೆ ನಿರ್ಮಾಣವಾಗಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಾಕಿಸ್ತಾನ ಕ್ರಿಕೆಟ್​ನ ಮಾಜಿ ಕ್ಯಾಪ್ಟನ್​ ಹಾಗೂ ವಿಶ್ವಕಪ್ ವಿಜೇತ ತಂಡದ ಸದಸ್ಯ ರಮೀಜ್​ ರಾಜಾ ಈ ಕೋಚ್​ಗಳಿಗೆ ನೇಮಕ ಮಾಡಿದ್ದಾರೆ.

ಆಸ್ಟ್ರೇಲಿಯಾ ಪರ 103 ಟೆಸ್ಟ್​, 161 ಏಕದಿನ ಹಾಗೂ 9 ಟಿ-20 ಪಂದ್ಯಗಳನ್ನಾಡಿರುವ ಮ್ಯಾಥ್ಯೂ ಹೇಡನ್​, ಟೆಸ್ಟ್​​ನಲ್ಲಿ 30 ಶತಕ, 29 ಅರ್ಧಶತಕ ಗಳಿಕೆ ಮಾಡಿದ್ದು, 8,625ರನ್​ಗಳಿಕೆ ಮಾಡಿದ್ದಾರೆ. ಏಕದಿನ ಪಂದ್ಯಗಳಿಂದ 10 ಶತಕ, 36 ಅರ್ಧಶತಕ ಸೇರಿದಂತೆ 6,133 ರನ್​ಗಳಿಸಿದ್ದಾರೆ.

  • Mr Ramiz Raja has been elected unanimously and unopposed as Pakistan Cricket Board’s 36th Chairman for a three-year term in a Special Meeting presided over by PCB Election Commissioner, Mr Justice (retd) Sheikh Azmat Saeed.

    More details: https://t.co/IIQDsUS2U9 pic.twitter.com/MMFAc8thnk

    — PCB Media (@TheRealPCBMedia) September 13, 2021 " class="align-text-top noRightClick twitterSection" data=" ">

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಫಿಲಾಂಡರ್​​ 64 ಟೆಸ್ಟ್​​ ಪಂದ್ಯಗಳಿಂದ 8 ಅರ್ಧಶತಕ ಸೇರಿದಂತೆ 1,779ರನ್​ಗಳಿಕೆ ಮಾಡಿದ್ದು, 224ವಿಕೆಟ್​ ಪಡೆದುಕೊಂಡಿದ್ದಾರೆ. 30 ಏಕದಿನ ಪಂದ್ಯಗಳಿಂದ 41 ವಿಕೆಟ್​​ ಹಾಗೂ 7 ಟಿ-20 ಪಂದ್ಯಗಳಿಂದ 4 ವಿಕೆಟ್​ ಗಳಿಸಿದ್ದಾರೆ.

ಇದನ್ನೂ ಓದಿ: ಸಮವಸ್ತ್ರ ತೊಟ್ಟು, ರಿವಾಲ್ವರ್ ತೋರಿಸಿ ಸಿನಿಮಾ ಡೈಲಾಗ್​ ಹೊಡೆದಿದ್ದ ಮಹಿಳಾ ಪೊಲೀಸ್‌ ರಾಜೀನಾಮೆ

ಪಾಕ್​ ಬೋರ್ಡ್​ಗೆ ಹೊಸದಾಗಿ ಆಯ್ಕೆಯಾಗಿರುವ ರಮೀಜ್​ ರಾಜ್​​​, 1992ರಲ್ಲಿ ಪಾಕ್​ ವಿಶ್ವಕಪ್​ ಗೆದ್ದ ತಂಡದ ಸದಸ್ಯ ಆಗಿದ್ದರು. 1984ರಿಂದ 1997ರವರೆಗೆ 57 ಟೆಸ್ಟ್​ ಪಂದ್ಯ, 198 ಏಕದಿನ ಪಂದ್ಯಗಳಿಂದ 8674ರನ್​ಗಳಿಕೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.