ನವದೆಹಲಿ: ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಯೋಜಿಸಲು ಹೊರಟಿರುವ ಕಾಶ್ಮೀರ್ ಪ್ರೀಮಿಯರ್ ಲೀಗ್ನಿಂದ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಈಗಾಗಲೇ ಹೊರಬಂದಿದ್ದಾರೆ. ಆದರೆ, ಈ ನಿರ್ಧಾರ ತಮ್ಮ ಸ್ವಂತದ್ದೇ ಹೊರೆತು ನನಗೆ ಯಾರಿಂದಲೂ ಬೆದರಿಕೆ ಇಲ್ಲ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬೆಂಬಲದೊಂದಿಗೆ ಮಾಜಿ ಕ್ರಿಕೆಟಿಗರು ಮತ್ತು ಕಾಶ್ಮೀರದಲ್ಲಿನ ಯುವ ಕ್ರಿಕೆಟಿಗರಿಗಾಗಿ ವಿವಾದಿತ ಪಿಒಕೆಯಲ್ಲಿ ಕೆಪಿಎಲ್ ನಡೆಸಲು ಸ್ಥಳೀಯ ರಾಜಕಾರಣಿ ನಿರ್ಧರಿಸಿದ್ದರು. ಇದಕ್ಕೆ ವಿದೇಶಿ ಮಾಜಿ ಕ್ರಿಕೆಟಿಗರಿಗೂ ಕೂಡ ಅವಕಾಶ ನೀಡಲಾಗಿತ್ತು.
ಆದರೆ, ಬಿಸಿಸಿಐ ಎಲ್ಲಾ ಕ್ರಿಕೆಟ್ ಬೋರ್ಡ್ಗಳಿಗೂ ಕೆಪಿಎಲ್ ಲೀಗ್ನಲ್ಲಿ ಭಾಗವಹಿಸುವುದಕ್ಕೆ ಯಾವುದೇ ಆಟಗಾರನಿಗೆ ಅವಕಾಶ ನೀಡಕೂಡದು. ಒಂದು ವೇಳೆ ಅಲ್ಲಿ ಯಾವುದೇ ಆಟಗಾರ ಭಾಗವಹಿಸಿದರೆ, ಆ ಆಟಗಾರಿಗೆ ಭಾರತದಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ಕಾರ್ಯಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಸೂಚನೆ ನೀಡಿತ್ತು.
-
I have decided not to participate in the KPL because of the political tensions between India and Pakistan over kashmir issues. I don't want to be in the middle of this , it would make me feel uncomfortable. #KPL2021 #Kashmir #india #Cricket #Pakistan #ENGvIND #TheHundred
— Monty Panesar (@MontyPanesar) August 1, 2021 " class="align-text-top noRightClick twitterSection" data="
">I have decided not to participate in the KPL because of the political tensions between India and Pakistan over kashmir issues. I don't want to be in the middle of this , it would make me feel uncomfortable. #KPL2021 #Kashmir #india #Cricket #Pakistan #ENGvIND #TheHundred
— Monty Panesar (@MontyPanesar) August 1, 2021I have decided not to participate in the KPL because of the political tensions between India and Pakistan over kashmir issues. I don't want to be in the middle of this , it would make me feel uncomfortable. #KPL2021 #Kashmir #india #Cricket #Pakistan #ENGvIND #TheHundred
— Monty Panesar (@MontyPanesar) August 1, 2021
ಬಿಸಿಸಿಐ ಸೂಚನೆ ನೀಡಿದ ನಂತರ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಬಹಿರಂಗವಾಗಿ ಈ ವಿಷಯವನ್ನು ಟ್ವೀಟ್ ಮಾಡಿ ಬಿಸಿಸಿಐ ವಿರುದ್ಧ ಕಿಡಿಕಾರಿದ್ದರು.
ಇದೀಗ ಇಂಗ್ಲೆಂಡ್ ಸ್ಪಿನ್ನರ್ ತಾವೂ ಕಾಶ್ಮೀರ ಪ್ರೀಮಿಯರ್ ಲೀಗ್ನಿಂದ ಹೊರಬರುತ್ತಿರುವುದಾಗಿ ಸೋಮವಾರ ಪ್ರಕಟಿಸಿದ್ದರು.
-
I have decided not to participate in the KPL because of the political tensions between India and Pakistan over kashmir issues. I don't want to be in the middle of this , it would make me feel uncomfortable. #KPL2021 #Kashmir #india #Cricket #Pakistan #ENGvIND #TheHundred
— Monty Panesar (@MontyPanesar) August 1, 2021 " class="align-text-top noRightClick twitterSection" data="
">I have decided not to participate in the KPL because of the political tensions between India and Pakistan over kashmir issues. I don't want to be in the middle of this , it would make me feel uncomfortable. #KPL2021 #Kashmir #india #Cricket #Pakistan #ENGvIND #TheHundred
— Monty Panesar (@MontyPanesar) August 1, 2021I have decided not to participate in the KPL because of the political tensions between India and Pakistan over kashmir issues. I don't want to be in the middle of this , it would make me feel uncomfortable. #KPL2021 #Kashmir #india #Cricket #Pakistan #ENGvIND #TheHundred
— Monty Panesar (@MontyPanesar) August 1, 2021
ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರ ವಿಷಯಕ್ಕಾಗಿ ವಿವಾದ ವಿರುವುದರಿಂದ ನಾನು ಕೆಪಿಎಲ್ನಲ್ಲಿ ಭಾಗವಹಿಸಲು ನಿರ್ಧರಿಸಿದ್ದೇನೆ. ಈ ವಿಷಯಗಳ ಮಧ್ಯೆ ತಲೆಹಾಕಲು ನಾನು ಬಯಸುವುದಿಲ್ಲ. ಇದು ನನಗೆ ಸರಿ ಎಂದು ತೋರಿಸುತ್ತಿಲ್ಲ ಎಂದು ಮೊದಲು ಟ್ವೀಟ್ ಮಾಡಿದ್ದರು.
ಇದಕ್ಕೆ ಕೆಲವು ನೆಟ್ಟಿಗರು ನಿಮಗೆ ಬಿಸಿಸಿಐನಿಂದ ಬೆದರಿಕೆಯಿರಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಮಾಂಟಿ ನನಗೆ ಯಾವುದೇ ಬೆದರಿಕೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೆ ಯಾರೊಬ್ಬರು ಹೆದರಿಸಿಲ್ಲ. ಈ ಲೀಗ್ನಿಂದಾಗುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಇಸಿಬಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಅಸೋಸಿಯೇಷನ್ ನನಗೆ ಸಲಹೆ ನೀಡಿದೆ. ಹಾಗಾಗಿ ಲೀಗ್ನಲ್ಲಿ ಆಡದಿರುವ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಪನೇಸರ್ ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್-2021ರಲ್ಲಿ ಆಡಲು ಇಂಗ್ಲೆಂಡ್ ಆಟಗಾರರು ಲಭ್ಯ: ಬಿಸಿಸಿಐ