ETV Bharat / sports

ಟಿ-20ಯಲ್ಲಿ ಮ್ಯಾಟ್ ಹೆನ್ರಿ ಹ್ಯಾಟ್ರಿಕ್ ಸಾಧನೆ, ಕಿವೀಸ್​ನ ನಾಲ್ಕನೇ ಬೌಲರ್​

ಪಾಕಿಸ್ತಾನ ವಿರುದ್ಧದ ಟಿ-20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವೇಗಿ ಮ್ಯಾಟ್​ ಹೆನ್ರಿ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದರು. ಈ ದಾಖಲೆ ಮಾಡಿದ ಕಿವೀಸ್​ನ 4 ನೇ ಬೌಲರ್​ ಎನಿಸಿಕೊಂಡರು.

ಟಿ20ಯಲ್ಲಿ ಮ್ಯಾಟ್ ಹೆನ್ರಿ ಹ್ಯಾಟ್ರಿಕ್ ಸಾಧನೆ

author img

By

Published : Apr 15, 2023, 11:36 AM IST

ಲಾಹೋರ್(ಪಾಕಿಸ್ತಾನ): ವೇಗಿ ಮ್ಯಾಟ್​ ಹೆನ್ರಿ ಹ್ಯಾಟ್ರಿಕ್​ ಸಾಧನೆಯ ನಡುವೆಯೂ ಪಾಕಿಸ್ತಾನ ವಿರುದ್ಧದ ಮೊದಲ ಟಿ-20ಯಲ್ಲಿ ನ್ಯೂಜಿಲ್ಯಾಂಡ್​ ಹೀನಾಯ ಸೋಲು ಅನುಭವಿಸಿದೆ. ಹೆನ್ರಿ ಹ್ಯಾಟ್ರಿಕ್​ ವಿಕೆಟ್​ ಗಳಿಸಿದ ನ್ಯೂಜಿಲ್ಯಾಂಡ್​ನ ಮೂರನೇ ಬೌಲರ್​ ಎನಿಸಿಕೊಂಡರು.

ಲಾಹೋರ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ನ್ಯೂಜಿಲ್ಯಾಂಡ್​ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಇದರ ಮಧ್ಯೆಯೂ ಮ್ಯಾಟ್​ ಹೆನ್ರಿ ವಿಶೇಷ ಸಾಧನೆ ಗಮನ ಸೆಳೆಯಿತು. 13 ನೇ ಓವರ್​ನ ಕೊನೆಯ 2 ಎಸೆತಗಳಲ್ಲಿ ಇಬ್ಬರು ಆಟಗಾರರನ್ನು ಹೆನ್ರಿ ಔಟ್​ ಮಾಡಿದರು. 5 ರನ್​ ಗಳಿಸಿದ್ದ ಶಾದಾಬ್​ ಖಾನ್​ ಕಿವೀಸ್​ನ ಟಾಮ್​ ಲಾಥಮ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಇಫ್ತಿಕಾರ್​ ಅಹ್ಮದ್​ ಕೂಡ ಪೆವಿಲಿಯನ್ ಸೇರಿದರು. ಇದರಿಂದ ಹೆನ್ರಿ ಹ್ಯಾಟ್ರಿಕ್​ ಅವಕಾಶ ಪಡೆದುಕೊಂಡರು.

ಇದಾದ ಬಳಿಕ 18 ನೇ ಓವರ್​ ಎಸೆಯಲು ಬಂದ ಕಿವೀಸ್​ ವೇಗಿ ಮೊದಲ ಎಸೆತದಲ್ಲೇ ಶಾಹೀನ್​ ಆಫ್ರಿದಿ ವಿಕೆಟ್​ ಪಡೆದು ಹ್ಯಾಟ್ರಿಕ್​ ವಿಕೆಟ್​ ಕಿತ್ತರು. ಹೆನ್ರಿ 4 ಓವರ್​ಗಳಲ್ಲಿ 32 ರನ್​ ನೀಡಿ 3 ವಿಕೆಟ್​​ ಪಡೆದರು. ಇದು ಅವರ ಟಿ20 ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ಮತ್ತು ನ್ಯೂಜಿಲ್ಯಾಂಡ್​ ಪರವಾಗಿ ಹ್ಯಾಟ್ರಿಕ್ ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡರು.

ಇದಕ್ಕೂ ಮೊದಲು 2009 ರಲ್ಲಿ ಶ್ರೀಲಂಕಾ ವಿರುದ್ಧ ಜಾಕೋಬ್​ ಓರಂ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇದು ಚುಟುಕು ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್​ ಪಡೆದ ಮೊದಲ ಕಿವೀಸ್​ ಆಟಗಾರ ಎಂಬ ದಾಖಲೆ ಬರೆದರು. ಇದಾದ ಬಳಿಕ 2010 ರಲ್ಲಿ ಟಿಮ್​ ಸೌಥಿ ಪಾಕಿಸ್ತಾನದ ವಿರುದ್ಧ ತ್ರಿವಳಿ ವಿಕೆಟ್​ ಪಡೆದು ಎರಡನೇ ಬೌಲರ್​ ಆದರು.

ಇದನ್ನೂ ಓದಿ: ಹ್ಯಾರಿ ಬ್ರೂಕ್ ಶತಕ, ಹೈದರಾಬಾದ್​ಗೆ ಒಲಿದ ಜಯ: ದಿಟ್ಟ ಹೋರಾಟ ನಡೆಸಿ ಸೋತ ಕೆಕೆಆರ್

2022 ರಲ್ಲಿ ಅಂದರೆ 12 ವರ್ಷಗಳ ಬಳಿಕ ಮೈಕಲ್ ಬ್ರೇಸ್‌ವೆಲ್ ಐರ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು. ಈ ಮೂಲಕ ಹ್ಯಾಟ್ರಿಕ್​ ಪಡೆದ ಮೂರನೇ ಬೌಲರ್​ ಆಗಿದ್ದರು. ಇದೀಗ ಹೆನ್ರಿ ಲಾಹೋರ್‌ನಲ್ಲಿ ಪಾಕ್​ ವಿರುದ್ಧ ಹ್ಯಾಟ್ರಿಕ್​ ಗಳಿಸಿದ್ದು ನ್ಯೂಜಿಲ್ಯಾಂಡ್​ನ 4 ನೇ ಬೌಲರ್​ ಆಗಿ ಪಟ್ಟಿ ಸೇರಿದರು.

ಇನ್ನೂ, ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್​ ಮಾಡಿದ ಪಾಕ್​ 182 ರನ್​ಗಳ ಸವಾಲಿನ ಮೊತ್ತ ಗಳಿಸಿತು. ಫಖರ್​ ಜಮಾನ್​ 34 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್​ ಸಮೇತ 47 ರನ್​ ಮಾದರೆ, ಸೈಮ್​ ಖಾನ್​ 6 ಬೌಂಡರಿ 2 ಸಿಕ್ಸರ್​ಗಳಿಂದ 47 ರನ್​ ಮಾಡಿದರು. ಕೊನೆಯಲ್ಲಿ ಫಹೀಮ್​ ಅಶ್ರಫ್​ 22 ರನ್​ ಸಿಡಿಸಿದರು.

183 ರನ್​ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್​ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ, 94 ರನ್​ಗೆ ಆಲೌಟ್​ ಆಯಿತು. ಇದರಿಂದ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿತು. ಮಾರ್ಕ್​ ಚಾಪ್​ಮನ್​ 34 ರನ್​ ಗಳಿಸಿದ್ದೇ ತಂಡದ ಆಟಗಾರನ ಗರಿಷ್ಠ ಮೊತ್ತವಾಗಿತ್ತು.

ಇದನ್ನೂ ಓದಿ: ಕೋಲ್ಕತ್ತಾ 'ನೈಟ್​' ರೈಡರ್ಸ್​ ವಿರುದ್ಧ 'ಸನ್​ರೈಸ್​': ಹ್ಯಾರಿ ಬ್ರೂಕ್​ ಶತಕದ ವೈಭವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.