ದುಬೈ: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರ ತಂಡ 3-0 ಅಂತರದ ಐತಿಹಾಸಿಕ ಜಯ ದಾಖಲಿಸಿದ ಆಟಗಾರ್ತಿಯರ ವೈಯಕ್ತಿಕ ಶ್ರೇಯಾಂಕದಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಂಗಳವಾರ ಐಸಿಸಿ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕು ಸ್ಥಾನಗಳ ಜಿಗಿತದೊಂದಿಗೆ 5ನೇ ಸ್ಥಾನಕ್ಕೆ ತಲುಪಿದ್ದಾರೆ.
ಕ್ಯಾಂಟರ್ಬರಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಕೌರ್ 111 ಎಸೆತಗಳಲ್ಲಿ ಔಟಾಗದೇ 143 ರನ್ ಗಳಿಸಿದ್ದ ಹರ್ಮನ್‌ಪ್ರೀತ್ ಕೌರ್ 716 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇನ್ನೊಬ್ಬ ಭಾರತೀಯೆ ಸ್ಮೃತಿ ಮಂಧಾನಾ ಒಂದು ಸ್ಥಾನ ಮೇಲೇರಿ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮಂಕಂಡಿಂಗ್ ಮೂಲಕ ಭಾರೀ ಸುದ್ದಿಯಲ್ಲಿರುವ ದೀಪ್ತಿ ಶರ್ಮಾ 8 ಸ್ಥಾನ ಮೇಲೇರಿ 24 ರಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ಪೂಜಾ ವಸ್ತ್ರಾಕರ್ ನಾಲ್ಕು ಸ್ಥಾನ ಮೇಲೇರಿ 49ನೇ ಸ್ಥಾನ, ಹರ್ಲೀನ್ ಡಿಯೋಲ್ 46 ಸ್ಥಾನ ಜಿಗಿದು 81ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ಪಟ್ಟಿಯಲ್ಲಿ ವೇಗಿ ರೇಣುಕಾ ಸಿಂಗ್ 35ನೇ ಸ್ಥಾನ ಪಡೆದಿದ್ದಾರೆ. ಇನ್ನು ಲಾರ್ಡ್ಸ್ನಲ್ಲಿ ನಡೆದ 3ನೇ ಏಕದಿನದಲ್ಲಿ ಕೊನೆಯ ಪಂದ್ಯವಾಡಿದ ಹಿರಿಯ ವೇಗಿ ಜೂಲನ್ ಗೋಸ್ವಾಮಿ ಅಗ್ರ 5ನೇ ಕ್ರಮಾಂಕದೊಂದಿಗೆ ಕ್ರಿಕೆಟ್ಗೆ ವಿದಾಯ ಹೇಳಿದರು. ಆಲ್ರೌಂಡರ್ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ 6 ನೇ ಸ್ಥಾನದಲ್ಲಿದ್ದಾರೆ.
ಓದಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23 ; ಕರ್ನಾಟಕ ಸಂಭಾವ್ಯ ತಂಡ ಪ್ರಕಟ