ETV Bharat / sports

ಹಾರ್ದಿಕ್, ಶಿಖರ್ ಮುಂದಾಳತ್ವದಲ್ಲಿ ನ್ಯೂಜಿಲೆಂಡ್‌ ಪ್ರವಾಸ: ಬಾಂಗ್ಲಾ ಸರಣಿಗೂ ಟೀಂ ಇಂಡಿಯಾ ಪ್ರಕಟ

ನವೆಂಬರ್ 18 ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ T20I ಮತ್ತು ODI ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ತಂಡ ಮುನ್ನಡೆಸಲಿದ್ದಾರೆ.

author img

By

Published : Oct 31, 2022, 8:07 PM IST

Hardik Pandya and Shikhar Dhawan to lead India in New Zealand

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಶಿಖರ್ ಧವನ್ ಏಕದಿನ ಸರಣಿಗೂ ನಾಯಕತ್ವವನ್ನು ಉಳಿಸಿಕೊಳ್ಳಲಿದ್ದಾರೆ. ಎರಡೂ ಸರಣಿಗಳಲ್ಲಿ ರಿಷಬ್ ಪಂತ್ ಉಪನಾಯಕನಾಗಿದ್ದಾರೆ. ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಏಕದಿನ ಸರಣಿಗೆ ಪಾಂಡ್ಯ ಹಾರ್ದಿಕ್ ಕೂಡ ಅಲಭ್ಯ.

ಸದ್ಯ T20 ವಿಶ್ವಕಪ್ ನಡೆಯುತ್ತಿದೆ. ಇದರ ಮುಕ್ತಾಯದ ಬಳಿಕ ಭಾರತ ಈ ಸರಣಿಗಳಿಗೆ ತಂಡ ಅಣಿಯಾಗಬೇಕಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಮೂರು ಟಿ20I ಮತ್ತು ಮೂರು ODIಗಳನ್ನು ಆಡಲಿದೆ. ಟಿ20 ವಿಶ್ವಕಪ್ ಫೈನಲ್‌ ಮುಗಿದ ಕೇವಲ ಐದು ದಿನಗಳ ಬಳಿಕ (ನವೆಂಬರ್ 18 ರಂದು) ಮೊದಲ ಟಿ20 ಪಂದ್ಯ ನಡೆಯಲಿದೆ. ಉಳಿದ ಎರಡನೇ ಟಿ20 ನವೆಂಬರ್ 20 ನಡೆಯಲಿದೆ. ಮೂರನೇ ಟಿ20 ನವೆಂಬರ್ 22 ರಂದು ನಿಗದಿಯಾಗಿದೆ. ಈ ಸರಣಿಗಳ ನಂತರ ನವೆಂಬರ್ 25, ನವೆಂಬರ್ 27 ಮತ್ತು ನವೆಂಬರ್ 30 ರಂದು ಕ್ರಮವಾಗಿ ಮೂರು ಪಂದ್ಯಗಳ ODI ಸರಣಿ ನಡೆಯಲಿದೆ ಎಂದು ಬಿಸಿಸಿಐ ಟ್ವೀಟ್​ ಮಾಡಿದೆ.

  • 🚨NEWS: The All-India Senior Selection Committee has picked the squads for India’s upcoming series against New Zealand and Bangladesh.

    — BCCI (@BCCI) October 31, 2022 " class="align-text-top noRightClick twitterSection" data=" ">

ಕಳೆದ ವರ್ಷ 2021ರ ಟಿ20 ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು. ಈ ಬಾರಿ ನಡೆಯಲಿರುವ ಎರಡೂ ಸರಣಿಯಲ್ಲಿ ಕೆಲವರಿಗೆ ವಿಶ್ರಾಂತಿ ನೀಡಿದರೆ ಇನ್ನೂ ಕೆಲವರಿಗೆ ಅವಕಾಶ ಒದಗಿಸಿ ಕೊಡಲಾಗಿದೆ. ಉಮ್ರಾನ್ ಮಲಿಕ್ ಮತ್ತೆ ಕಮ್​ ಬ್ಯಾಕ್​ ಮಾಡಲಿದ್ದಾರೆ.

ಟಿ20I ತಂಡ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ವಿಕೆಟ್​ ಕೀಪರ್​ ಮತ್ತು ಉಪನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್ , ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

ODI ತಂಡ: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ವಿಕೆಟ್​ ಕೀಪರ್​ ಮತ್ತು ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್ , ಅರ್ಶ್ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

ಬಾಂಗ್ಲಾದೇಶಕ್ಕೆ ಟೀಂ ಇಂಡಿಯಾ ಪ್ರವಾಸ: ಆತಿಥೇಯ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಎರಡು ಟೆಸ್ಟ್‌ಗಳು ಮತ್ತು ಮೂರು ಏಕದಿನ ಸರಣಿಗಳಿಗೂ ಟೀಂ ಇಂಡಿಯಾ ತನ್ನ ತಂಡವನ್ನು ಪ್ರಕಟಿಸಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ವಿಶ್ರಾಂತಿ ತೆಗೆದುಕೊಳ್ಳಲಿರುವ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ಕೆ ಎಲ್​ ರಾಹುಲ್ ಬಾಂಗ್ಲಾ ವಿರುದ್ಧದ ಸರಣಿಗಳಿಗೆ ಅಣಿಯಾಗಲಿದ್ದಾರೆ. ಇವರ ಜೊತೆಗೆ ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಯಶ್ ದಯಾಲ್, ರವೀಂದ್ರ ಜಡೇಜಾ ಕೂಡ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಟೆಸ್ಟ್​ನಲ್ಲಿ ಕೆಎಸ್ ಭರತ್ ಎರಡನೇ ಕೀಪರ್ ಆಗಿ ಇರಲಿದ್ದಾರೆ. ಇದರ ಹೊರತಾಗಿ ಇನ್ನೂ ಕೆಲವು ಬದಲಾವಣೆಗಳೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯುವ ಸಾಧ್ಯತೆ ಇದೆ.

  • Squad for Bangladesh ODIs:

    Rohit Sharma (C), KL Rahul (vc), Shikhar Dhawan, Virat Kohli, Rajat Patidar, Shreyas Iyer, Rahul Tripathi, Rishabh Pant (wk), Ishan Kishan (wk), Ravindra Jadeja, Axar Patel, W Sundar, Shardul Thakur, Mohd. Shami, Mohd. Siraj, Deepak Chahar, Yash Dayal

ಬಾಂಗ್ಲಾದೇಶ ಪ್ರವಾಸಕ್ಕೆ ಟೀಂ ಇಂಡಿಯಾದ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್​ ಕೀಪರ್), ಇಶಾನ್ ಕಿಶನ್ (ವಿಕೆಟ್​ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಡಬ್ಲ್ಯೂ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಯಶ್ ದಯಾಳ್

  • Squad for Bangladesh Tests:

    Rohit Sharma (C), KL Rahul (VC), Shubman Gill, Cheteshwar Pujara, Virat Kohli, Shreyas Iyer, Rishabh Pant (wk), KS Bharat (wk), Ravichandran Ashwin, Ravindra Jadeja, Axar Patel, Kuldeep Yadav, Shardul Thakur, Mohd. Shami, Mohd. Siraj, Umesh Yadav.

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್​ ಕೀಪರ್), ಕೆಎಸ್ ಭರತ್ (ವಿಕೆಟ್​ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.

ಇದನ್ನೂ ಓದಿ: ಕುಂದಾನಗರಿಯಲ್ಲಿ ಕ್ರಿಕೆಟ್​ ದೇವರು.. ಬೆಳಗಾವಿ ಚಹಾ ಸವಿದ ಸಚಿನ್‌ ತೆಂಡೂಲ್ಕರ್‌: ವಿಡಿಯೋ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.