ನವದೆಹಲಿ: ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ರಸಿದ್ಧ ಫ್ರಾಂಚೈಸಿಯಲ್ಲಿ ಬೆಂಬಲ ಸಿಬ್ಬಂದಿಯ ಭಾಗವಾಗಲಿದ್ದಾರೆ ಎಂದು ತಿಳಿದು ಬಂದಿದೆ.
2021ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ 41 ವರ್ಷದ ಸ್ಪಿನ್ ಬೌಲರ್ ಯುಎಇ ಲೆಗ್ನಲ್ಲಿ ಒಂದೂ ಪಂದ್ಯವನ್ನಾಡಿರಲಿಲ್ಲ. ಮುಂದಿನ ವಾರ ಭಜ್ಜಿ ಅಧಿಕೃತವಾಗಿ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾಗಲಿದ್ದಾರೆ. ಈಗಾಗಲೇ ಕೆಲವು ಫ್ರಾಂಚೈಸಿಗಳಿಂದ ಬಂದಿರುವ ಆಫರ್ಗಳಲ್ಲಿ ಯಾವುದಾದರೂ ಒಂದು ಫ್ರಾಂಚೈಸಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಐಪಿಎಲ್ ಮೂಲಗಳಿಂದ ತಿಳಿದು ಬಂದಿದೆ
ಹರ್ಭಜನ್ ಸಿಂಗ್ ಅವರನ್ನು ಸಲಹೆಗಾರ, ಮೆಂಟರ್ ಅಥವಾ ಸಲಹಾ ಸಮಿತಿಯ ಭಾಗವಾಗಲು ಫ್ರಾಂಚೈಸಿಗಳು ಆಫರ್ ನೀಡಿವೆ. ಭಜ್ಜಿ ಅವರ ಅಪಾರ ಅನುಭವವನ್ನು ಬಳಸಿಕೊಳ್ಳುವ ಆಲೋಚನೆಯಲ್ಲಿವೆ. ಮುಂಬರುವ ಮೆಗಾ ಹರಜು ಪ್ರಕ್ರಿಯೆಯಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದಕ್ಕೆ ಅವರ ನೆರವಾಗುವ ಸಾಧ್ಯತೆಯಿದೆ ಎಂದು ಐಪಿಎಲ್ ಮೂಲ ಪಿಟಿಐಗೆ ಮಾಹಿತಿ ನೀಡಿದೆ.
ದಶಕದ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹರ್ಭಜನ್ ಸಿಂಗ್ ಯುವ ಆಟಗಾರರ ಬೆಳವಣಿಗೆಯ ಬಗ್ಗೆ ಸದಾ ಆಸಕ್ತಿ ಹೊಂದಿದ್ದರು. ಕಳೆದ ಎರಡೂ ಆವೃತ್ತಿ ಕೆಕೆಆರ್ನಲ್ಲಿ ಕಳೆದಿರುವ ಅವರು ವರುಣ್ ಚಕ್ರವರ್ತಿ ಅವರ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದನ್ನೂ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ನಾಯಕ ಇಯಾನ್ ಮಾರ್ಗನ್ ಕೂಡ ಪ್ರಶಂಸಿದ್ದರು.
ಭಜ್ಜಿ ಐಪಿಎಲ್ನಲ್ಲಿ 163 ಪಂದ್ಯಗಳನ್ನಾಡಿದ್ದು, 150 ವಿಕೆಟ್ ಪಡೆದಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 417 ಟೆಸ್ಟ್ ಮತ್ತು 269 ಏಕದಿನ ವಿಕೆಟ್ ಪಡೆದಿದ್ದಾರೆ.