ಬ್ರಿಸ್ಟೋಲ್(ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು, ಈಗಾಗಲೇ ಅನೇಕ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 96ರನ್ಗಳಿಕೆ ಮಾಡಿದ್ದ 17 ವರ್ಷದ ಶೆಫಾಲಿ, ಎರಡನೇ ಇನ್ನಿಂಗ್ಸ್ನಲ್ಲೂ ಈಗಾಗಲೇ ಅರ್ಧಶತಕ ಸಿಡಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಇವರ ಬ್ಯಾಟಿಂಗ್ ವಿಚಾರವಾಗಿ ಮಾತನಾಡಿರುವ ಇಂಗ್ಲೆಂಡ್ ಮಹಿಳಾ ತಂಡದ ಸ್ಪಿನ್ನರ್ ಸೋಫಿ, ಉತ್ತಮವಾಗಿ ರನ್ಗಳಿಕೆ ಮಾಡುತ್ತಿರುವ ಶೆಫಾಲಿ ವರ್ಮಾ ವಿರುದ್ಧ ಬೌಲಿಂಗ್ ಮಾಡುವುದು ಒಂದು ಸವಾಲು ಆಗಿದೆ ಎಂದಿದ್ದಾರೆ. ಇಂಗ್ಲೆಂಡ್ ಮಹಿಳಾ ತಂಡದ ಎಡಗೈ ಸ್ಪಿನ್ನರ್ ಆಗಿರುವ ಸೋಫಿ ಎಕ್ಲೆಸ್ಟೋನ್, ಪಂದ್ಯದಲ್ಲಿ ಏನು ಆಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಟಿ-20 ಯಂತಹ ಪಂದ್ಯಗಳಲ್ಲಿ ಶೆಫಾಲಿ ಉತ್ತಮವಾಗಿ ಬ್ಯಾಟಿಂಗ್ ಮಾಡ್ತಾರೆ. ಸದ್ಯ ಟೆಸ್ಟ್ನಲ್ಲೂ ಅದೇ ರೀತಿಯ ಪ್ರದರ್ಶನ ನೀಡ್ತಿದ್ದು, ನಿಜಕ್ಕೂ ಅವರ ಬ್ಯಾಟಿಂಗ್ ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: Shafali Varma: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮತ್ತೊಂದು ದಾಖಲೆ ಬರೆದ 17ರ ಪೋರಿ!
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೆಹ್ವಾಗ್ ಎಂದು ಗುರುತಿಸಿಕೊಂಡಿರುವ ಶೆಫಾಲಿ ವರ್ಮಾ ಎರಡು ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ.