ಟಿ-20 ಕ್ರಿಕೆಟ್ನಲ್ಲಿ ವಯಸ್ಸಿನ ಹಂಗಿಲ್ಲ. ಫ್ರಾನ್ಸ್ ತಂಡದ ಆರಂಭಿಕ ಆಟಗಾರ 18 ವರ್ಷ, 280 ದಿನದ ಗುಸ್ತಾವ್ ಮೆಕ್‌ಕಿಯಾನ್ ಟಿ-20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ್ದಾರೆ. ಇದು ಚುಟುಕು ಕ್ರಿಕೆಟ್ನಲ್ಲಿ ಶತಕ ಸಾಧನೆ ಮಾಡಿದ ಅತಿ ಕಿರಿಯ ವ್ಯಕ್ತಿಯಾಗಿದ್ದಾರೆ.
ಸ್ವಿಟ್ಜರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮೆಕ್‌ಕಿಯಾನ್ 61 ಎಸೆತಗಳಲ್ಲಿ 109 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್‌ಗಳಿದ್ದವು. ವಿಶೇಷ ಅಂದರೆ, ಈ ಯುವ ಆಟಗಾರನಿಗೆ ಇದು ಎರಡನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಪದಾರ್ಪಣಾ ಪಂದ್ಯದಲ್ಲಿ ಜೆಕ್ ಗಣರಾಜ್ಯದ ವಿರುದ್ಧ 54 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ್ದಾರೆ. 2019 ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಆಟಗಾರ ಹಜರತುಲ್ಲಾ ಝಜೈ ತಮ್ಮ 20 ವರ್ಷ, 337 ದಿನದಲ್ಲಿ ಶತಕ(162) ಸಾಧನೆ ಮಾಡಿ ದಾಖಲೆ ಮಾಡಿದ್ದರು. ಅದನ್ನು ಮೆಕ್‌ಕಿಯಾನ್ ಮುರಿದಿದ್ದಾರೆ.
ಶತಕ ಬಾರಿಸಿದ ಕಿರಿಯರು
- ಗುಸ್ತಾವ್ ಮೆಕ್‌ಕಿಯಾನ್- 18 ವರ್ಷ 280 ದಿನ
- ಹಜರತುಲ್ಲಾ ಝಜೈ 20 ವರ್ಷ 337 ದಿನ
- ಶಿವಕುಮಾರ್ ಪೆರಿಯಾಳ್ವಾರ್ 21 ವರ್ಷ 161 ದಿನ
- ಆರ್ಕಿಡ್ ತುಯಿಸೆಂಗೆ 21 ವರ್ಷ 190 ದಿನ
- ದೀಪೇಂದ್ರ ಸಿಂಗ್ ಐರಿ 22 ವರ್ಷ 68 ದಿನ