ನವದೆಹಲಿ: ತಮಿಳುನಾಡಿನ ಮಾಜಿ ನಾಯಕ ಹಾಗೂ ದೇಶಿ ಕ್ರಿಕೆಟ್ ದೈತ್ಯ ಶ್ರೀಧರನ್ ಶರತ್ ಬಿಸಿಸಿಐ ಕಿರಿಯರ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಮುಂಬರುವ ಅಂಡರ್ 19 ವಿಶ್ವಕಪ್ಗೆ ಬಲಿಷ್ಠ ಯುವ ಕ್ರಿಕೆಟಿಗರ ತಂಡವನ್ನು ಕಟ್ಟುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಶರತ್ ತಮಿಳುನಾಡು ಪರ 100 ರಣಜಿ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅಸ್ಸೋಂ ತಂಡದ ಪರವೂ ಕೆಲವು ಸಮಯ ಆಡಿರುವ ಅವರು ಒಟ್ಟಾರೆ ದೇಶಿ ಕ್ರಿಕೆಟ್ನ 15 ವರ್ಷಗಳ ವೃತ್ತಿ ಜೀವನದಲ್ಲಿ 139 ಪ್ರಥಮ ದರ್ಜೆ ಪಂದ್ಯಗಳಿಂದ 27 ಶತಕಗಳ ಸಹಿತ 51+ ಸರಾಸರಿಯಲ್ಲಿ 8700 ರನ್ ಗಳಿಸಿದ್ದಾರೆ.
ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರ ಬಲವಾದ ಸ್ಪರ್ಧೆಯಿಂದ ಭಾರತದ ಪರ ಟೆಸ್ಟ್ ತಂಡದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ.
ಜೂನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಶರತ್ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇತರೆ ಸ್ಪರ್ಧಿಗಳಾದ ಕೃಷ್ಣನ್ ಮೋಹನ್(ನಾರ್ಥ್ ಜೋನ್), ಹರ್ವಿಂದರ್ ಸಿಂಗ್ ಸೋಧಿ(ಸೆಂಟ್ರಲ್ ಜೋನ್), ಹಿತೇಶ್ ಮಜುಂದಾರ್(ವೆಸ್ಟ್ ಜೋನ್) ಹಾಗೂ ರಣದೇಬ್ ಬೋಸ್(ಈಸ್ಟ್ ಜೋನ್) ಅವರಿಗಿಂತ ಶರತ್ ಹೆಸರು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯುಳಿದಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಬ್ರಿಟಿಷ್ ರಾಯಭಾರಿಗೆ ಕನ್ನಡ ಕಲಿಸಿಕೊಟ್ಟ ದ್ರಾವಿಡ್: ಇವರಿಗಿಂತ ಉತ್ತಮ ಶಿಕ್ಷಕ ಇಲ್ಲ ಎಂದ ಅಲೆಕ್ಸ್ ಎಲ್ಲಿಸ್