ರಾಜ್‌ಕೋಟ್: ಸೌರಾಷ್ಟ್ರದ ಮಾಜಿ ಕ್ರಿಕೆಟರ್ ಹಾಗೂ ಬಿಸಿಸಿಐ ರೆಫರಿ ರಾಜೇಂದ್ರ ಸಿಂಹ ಜಡೇಜಾ ಭಾನುವಾರ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರು ಎಂದು ಸೌರಾಷ್ಟ್ರ ಕ್ರಿಕೆಟ್ ಸಂಘ (ಎಸ್‌ಸಿಎ) ತಿಳಿಸಿದೆ.
"ಸೌರಾಷ್ಟ್ರದ ಪ್ರಮುಖ ಕ್ರಿಕೆಟಿಗರಲ್ಲಿ ಒಬ್ಬರಾದ ರಾಜೇಂದ್ರ ಸಿಂಹ ಜಡೇಜಾ ಅಗಲಿಕೆ ನಮಗೆ ಅತೀವ ನೋವು ನೀಡಿದೆ" ಎಂದು ಎಸ್‌ಸಿಎ ಟ್ವೀಟ್ನಲ್ಲಿ ಬರೆದುಕೊಂಡಿದೆ.
ಜಡೇಜಾ ನಿಧನಕ್ಕೆ ಬಿಸಿಸಿಐ ಮತ್ತು ಎಸ್‌ಸಿಎ ಮಾಜಿ ಕಾರ್ಯದರ್ಶಿ ನಿರಂಜನ್ ಷಾ ಮತ್ತು ಎಸ್‌ಸಿಎ ಅಧ್ಯಕ್ಷ ಜಯದೇವ್ ಷಾ ಸಂತಾಪ ಸೂಚಿಸಿದ್ದಾರೆ.