ನವದೆಹಲಿ: ಭಾರತ ತಂಡದ ಮಾಜಿ ವೇಗದ ಬೌಲರ್ ರುದ್ರಪ್ರತಾಪ್ ಸಿಂಗ್ ಅವರ ತಂದೆ ಶಿವಪ್ರಸಾದ್ ಸಿಂಗ್ ಬುಧವಾರ ನಿಧನರಾಗಿದ್ದಾರೆ. ಅವರು ಇತ್ತೀಚೆಗೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರೆಂದು ತಿಳಿದು ಬಂದಿದೆ.
"ಇಂದು ನನ್ನ ತಂದೆ ಶಿವಪ್ರಸಾದ್ ಸಿಂಗ್ ಅವರ ನಿಧನದ ಸುದ್ದಿಯನ್ನು ಅತೀವ ದುಃಖದಿಂದ ತಿಳಿಸುತ್ತೇವೆ. ಕೋವಿಡ್-19 ವೈರಸ್ ಸೋಂಕಿನಿಂದ ಬಳಲುತ್ತಿದ್ದ ಅವರು ಮೇ 12ರಂದು ನಮ್ಮನ್ನು ಅಗಲಿದ್ದಾರೆ. ನನ್ನ ಪ್ರೀತಿಯ ತಂದೆಯ ಆತ್ಮಕ್ಕೆ ಶಾಂತಿ ಕೋರಿ ನೀವೆಲ್ಲರೂ ಪ್ರಾರ್ಥಿಸಿ ಎಂದು ನಾವು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಆರ್ಐಪಿ ಪಾಪಾ'' ಎಂದು ಆರ್.ಪಿ.ಸಿಂಗ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
-
It is with deepest grief and sadness we inform the passing away of my father, Mr Shiv Prasad Singh. He left for his heavenly abode on 12th May after suffering from Covid. We request you to keep my beloved father in your thoughts and prayers. RIP Papa. ॐ नमः शिवाय 🙏🙏
— R P Singh रुद्र प्रताप सिंह (@rpsingh) May 12, 2021 " class="align-text-top noRightClick twitterSection" data="
">It is with deepest grief and sadness we inform the passing away of my father, Mr Shiv Prasad Singh. He left for his heavenly abode on 12th May after suffering from Covid. We request you to keep my beloved father in your thoughts and prayers. RIP Papa. ॐ नमः शिवाय 🙏🙏
— R P Singh रुद्र प्रताप सिंह (@rpsingh) May 12, 2021It is with deepest grief and sadness we inform the passing away of my father, Mr Shiv Prasad Singh. He left for his heavenly abode on 12th May after suffering from Covid. We request you to keep my beloved father in your thoughts and prayers. RIP Papa. ॐ नमः शिवाय 🙏🙏
— R P Singh रुद्र प्रताप सिंह (@rpsingh) May 12, 2021
ಆರ್.ಪಿ.ಸಿಂಗ್ ಭಾರತದ ಪರ 14 ಟೆಸ್ಟ್, 58 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 40, 69 ಮತ್ತು 15 ವಿಕೆಟ್ ಪಡೆದಿದ್ದಾರೆ. 2007ರ ಟಿ-20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಅವರು 2018ರಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಮಂಗಳವಾರ ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ತಂದೆ, ಕಳೆದ ವಾರ ಯುವ ಬೌಲರ್ ಚೇತನ್ ಸಕಾರಿಯಾ ತಂದೆ ಮತ್ತು ಮಹಿಳಾ ಕ್ರಿಕೆಟರ್ ವೇದಾ ಕೃಷ್ಣ ಮೂರ್ತಿ ತಾಯಿ ಮತ್ತು ಸಹೋದರಿ ಕೂಡ ಮಾರಕ ವೈರಸ್ನಿಂದಲೇ ಮೃತಪಟ್ಟಿದ್ದರು.
ಇದನ್ನು ಓದಿ:ಕೋವಿಡ್ 19ಕ್ಕೆ ಚಾವ್ಲಾ ತಂದೆ ಬಲಿ: ಸಂತಾಪ ಸೂಚಿಸಿದ ಮುಂಬೈ ಇಂಡಿಯನ್ಸ್