ಹೈದರಾಬಾದ್: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಲೆಜೆಂಡರಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ (77) ಅವರು ಸೋಮವಾರ ನಿಧನರಾಗಿದ್ದಾರೆ. ಇವರು ಪತ್ನಿ ಅಂಜು, ಮಗ ಅಂಗದ್ ಮತ್ತು ಸೊಸೆ ನೇಹಾ ಅವರನ್ನು ಅಗಲಿದ್ದಾರೆ.
1946ರಲ್ಲಿ ಅಮೃತಸರದಲ್ಲಿ ಜನಿಸಿದ ಬಿಶನ್ ಸಿಂಗ್ ಬೇಡಿ, ಭಾರತ ಕ್ರಿಕೆಟ್ ತಂಡದಲ್ಲಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 14 ಬಾರಿ ಐದು ವಿಕೆಟ್ ಪಡೆದ ವಿಶೇಷ ಸಾಧನೆ ಬೇಡಿ ಹೆಸರಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 266 ವಿಕೆಟ್ಗಳನ್ನು ಪಡೆದಿದ್ದಾರೆ. ಬೇಡಿ ಅವರು ಎರಪಳ್ಳಿ ಪ್ರಸನ್ನ, ಭಾಗವತ್ ಚಂದ್ರಶೇಖರ್ ಮತ್ತು ಶ್ರೀನಿವಾಸ್ ವೆಂಕಟರಾಘವನ್ ಅವರೊಂದಿಗೆ ಭಾರತೀಯ ಕ್ರಿಕೆಟ್‌ನ ಸುವರ್ಣ ಕಾಲಘಟ್ಟದಲ್ಲಿ ತ್ರಿವಳಿ ಸ್ಪಿನ್ ಜೋಡಿಯಾಗಿದ್ದರು. 1966 ಮತ್ತು 1978ರ ನಡುವೆ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಭಾವಿ ಆಟಗಾರರಾಗಿದ್ದರು.
-
The BCCI mourns the sad demise of former India Test Captain and legendary spinner, Bishan Singh Bedi.
— BCCI (@BCCI) October 23, 2023 " class="align-text-top noRightClick twitterSection" data="
Our thoughts and prayers are with his family and fans in these tough times.
May his soul rest in peace 🙏 pic.twitter.com/oYdJU0cBCV
">The BCCI mourns the sad demise of former India Test Captain and legendary spinner, Bishan Singh Bedi.
— BCCI (@BCCI) October 23, 2023
Our thoughts and prayers are with his family and fans in these tough times.
May his soul rest in peace 🙏 pic.twitter.com/oYdJU0cBCVThe BCCI mourns the sad demise of former India Test Captain and legendary spinner, Bishan Singh Bedi.
— BCCI (@BCCI) October 23, 2023
Our thoughts and prayers are with his family and fans in these tough times.
May his soul rest in peace 🙏 pic.twitter.com/oYdJU0cBCV
ಗಣ್ಯರಿಂದ ಸಂತಾಪ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಎಕ್ಸ್ ಖಾತೆಯಲ್ಲಿ, "ಭಾರತದ ಮಾಜಿ ಟೆಸ್ಟ್ ನಾಯಕ ಮತ್ತು ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನಕ್ಕೆ ಬಿಸಿಸಿಐ ಸಂತಾಪ ವ್ಯಕ್ತಪಡಿಸಿದೆ. ಈ ಸಮಯದಲ್ಲಿ ನಮ್ಮ ಆಲೋಚನೆ ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇರಲಿವೆ. ಆತ್ಮಕೆ ಶಾಂತಿ ಸಿಗಲಿ" ಎಂದು ಸಂತಾಪ ಸೂಚಿಸಿದೆ.
-
Sad to hear the demise of Shri Bishan Singh Bedi. Indian Cricket has lost an icon today. Bedi Sir defined an era of cricket and he left an indelible mark on the game with his artistry as a spin bowler and his impeccable character. My thoughts and prayers are with his family and…
— Jay Shah (@JayShah) October 23, 2023 " class="align-text-top noRightClick twitterSection" data="
">Sad to hear the demise of Shri Bishan Singh Bedi. Indian Cricket has lost an icon today. Bedi Sir defined an era of cricket and he left an indelible mark on the game with his artistry as a spin bowler and his impeccable character. My thoughts and prayers are with his family and…
— Jay Shah (@JayShah) October 23, 2023Sad to hear the demise of Shri Bishan Singh Bedi. Indian Cricket has lost an icon today. Bedi Sir defined an era of cricket and he left an indelible mark on the game with his artistry as a spin bowler and his impeccable character. My thoughts and prayers are with his family and…
— Jay Shah (@JayShah) October 23, 2023
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, "ಬಿಶನ್ ಸಿಂಗ್ ಬೇಡಿ ನಿಧನದ ಸುದ್ದಿ ಕೇಳಿ ದುಃಖವಾಯಿತು. ಭಾರತೀಯ ಕ್ರಿಕೆಟ್ ಇಂದು ಒಬ್ಬ ಐಕಾನ್ ಅನ್ನು ಕಳೆದುಕೊಂಡಿದೆ. ಬೇಡಿ ಅವರು ಕ್ರಿಕೆಟ್ ಯುಗವನ್ನು ವ್ಯಾಖ್ಯಾನಿಸಿದವರು. ಸ್ಪಿನ್ ಬೌಲಿಂಗ್ನಿಂದ ಆಟದಲ್ಲಿ ಅಳಿಸಲಾಗದ ಛಾಪು ಮೂಡಿಸಿದವರು. ಈ ಸಮಯದಲ್ಲಿ ನನ್ನ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಪ್ರೀತಿಪಾತ್ರರ ಜತೆಯಲ್ಲಿರಲಿವೆ" ಎಂದು ತಿಳಿಸಿದ್ದಾರೆ.
-
Deeply saddened by the demise of the legendary spinner and former captain of the Indian cricket team Bishan Singh Bedi Ji. Bedi Ji will live in our memories not only through his contribution to the cricketing world but also as the master of crafty bowling who could weave magic on…
— Amit Shah (@AmitShah) October 23, 2023 " class="align-text-top noRightClick twitterSection" data="
">Deeply saddened by the demise of the legendary spinner and former captain of the Indian cricket team Bishan Singh Bedi Ji. Bedi Ji will live in our memories not only through his contribution to the cricketing world but also as the master of crafty bowling who could weave magic on…
— Amit Shah (@AmitShah) October 23, 2023Deeply saddened by the demise of the legendary spinner and former captain of the Indian cricket team Bishan Singh Bedi Ji. Bedi Ji will live in our memories not only through his contribution to the cricketing world but also as the master of crafty bowling who could weave magic on…
— Amit Shah (@AmitShah) October 23, 2023
ಗೃಹ ಸಚಿವ ಅಮಿತ್ ಶಾ, "ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಸ್ಪಿನ್ನರ್ ಮತ್ತು ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಜಿ ನಿಧನದಿಂದ ತೀವ್ರ ದುಃಖವಾಗಿದೆ. ಬೇಡಿ ಅವರು ಕ್ರಿಕೆಟ್ ಜಗತ್ತಿಗೆ ನೀಡಿದ ಕೊಡುಗೆಯ ಮೂಲಕ ಮಾತ್ರವಲ್ಲದೆ, ತಮ್ಮ ಸ್ಪಿನ್ ಬೌಲಿಂಗ್ನಿಂದ ಎಲ್ಲರ ನೆನಪಿನಲ್ಲಿ ಉಳಿಯುತ್ತಾರೆ" ಎಂದು ಕಂಬನಿ ಮಿಡಿದಿದ್ದಾರೆ.
ಬೇಡಿ ಅವರಿಗೆ 1970ರಲ್ಲಿ ಭಾರತ ಸರ್ಕಾರ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಸಿದ್ಧ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಗೌರವಾರ್ಥವಾಗಿ ಒಂದು ಸ್ಟ್ಯಾಂಡ್ಗೆ ಅವರ ಹೆಸರನ್ನಿಟ್ಟಿದೆ. 1990ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಸಮಯದಲ್ಲಿ ಬೇಡಿ ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದರು. ಮಣಿಂದರ್ ಸಿಂಗ್ ಮತ್ತು ಮುರಳಿ ಕಾರ್ತಿಕ್ ಅವರಂತಹ ಅನೇಕ ಪ್ರತಿಭಾವಂತ ಆಟಗಾರರಿಗೆ ಮಾರ್ಗದರ್ಶಕರೂ ಆಗಿದ್ದರು.
ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ಗೆ ಬೌಲಿಂಗ್ ಕೋಚ್ ಆಗಿ ನ್ಯೂಜಿಲೆಂಡ್ ಮಾಜಿ ವೇಗಿ ಶೇನ್ ಬಾಂಡ್ ನೇಮಕ