ETV Bharat / sports

ಇಂಗ್ಲೆಂಡ್‌ನ ಮಾಜಿ ವಿಕೆಟ್ ಕೀಪರ್ ಜಿಮ್ ಪಾರ್ಕ್ಸ್​ ನಿಧನ - ಅನಾರೋಗ್ಯದಿಂದ ನಿಧನ

ಇಂಗ್ಲೆಂಡ್‌ ಮತ್ತು ಸಸೆಕ್ಸ್ ಕ್ರಿಕೆಟ್​ ತಂಡದ ಮಾಜಿ ಆಟಗಾರ ಜಿಮ್ ಪಾರ್ಕ್ಸ್ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಇಂಗ್ಲೆಂಡ್​ ತಂಡ ಮತ್ತು ಸಸೆಕ್ಸ್ ಮಂಡಳಿ ಟ್ವೀಟ್​ ಮಾಡಿ ಸಂತಾಪ ಸೂಚಿಸಿದೆ.

Jim Parks
ಜಿಮ್ ಪಾರ್ಕ್ಸ್​ ನಿಧನ
author img

By

Published : Jun 1, 2022, 10:01 PM IST

ಲಂಡನ್: ಇಂಗ್ಲೆಂಡ್‌ನ ತಂಡದ ಮತ್ತು ಸಸೆಕ್ಸ್ ಆಡಿದ್ದ ಮಾಜಿ ವಿಕೆಟ್‌ ಕೀಪರ್ ಮತ್ತು ಬ್ಯಾಟರ್ ಜಿಮ್ ಪಾರ್ಕ್ಸ್(90) ಇಂದು ನಿಧನರಾದರು. ಪಾರ್ಕ್ಸ್ ಅವರು ಕಳೆದ ವಾರ ತಮ್ಮ ಮನೆಯಲ್ಲಿ ಬಿದ್ದು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಧನರಾಗಿದ್ದಾರೆ. 90 ನೇ ವಯಸ್ಸಿನಲ್ಲಿ ಜಿಮ್ ಪಾರ್ಕ್ಸ್ ಅವರ ನಿಧನವನ್ನು ಘೋಷಿಸಲು ತೀವ್ರ ದುಃಖವಾಗುತ್ತಿದೆ ಎಂದು ಸಸೆಕ್ಸ್ ಕ್ರಿಕೆಟ್ ಟ್ವೀಟ್​ ಮಾಡಿದೆ.

ಜಿಮ್​ ಅವರು 1930 ರಲ್ಲಿ ಹೇವರ್ಡ್ಸ್ ಹೀತ್‌ನಲ್ಲಿ ಜನಿಸಿದರು. ಹೋವ್ ಕೌಂಟಿ ಗ್ರಾಮರ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರು 1949 ರಲ್ಲಿ ಸಸೆಕ್ಸ್‌ಗೆ ಪಾದಾರ್ಪಣೆ ಮಾಡಿದರು. ಸಸೆಕ್ಸ್​ನಲ್ಲಿ ಅವರು ಒಟ್ಟು 739 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 132 ಲಿಸ್ಟ್ ಎ ಆಟಗಳನ್ನು ಆಡಿದ್ದಾರೆ.

  • Sussex Cricket is deeply saddened to announce the death of Jim Parks at the age of 90.

    Our thoughts and sincere condolences are with his wife Jenny and son Bobby. RIP, Jim.

    — Sussex Cricket (@SussexCCC) May 31, 2022 " class="align-text-top noRightClick twitterSection" data=" ">

ಪಾರ್ಕ್ಸ್ ಅವರು ಆಲ್​ ರೌಂಡ್​ ಆಟಗಾರರಾಗಿದ್ದರು. ಅವರು ಆರಂಭದ ದಿನಗಳಲ್ಲಿ ಲೆಗ್-ಬ್ರೇಕ್ ಬೌಲರ್ ಆಗಿ ಕ್ರಿಕೆಟ್​ನ್ನು ಪ್ರಾರಂಭಿಸಿದರು. ನಂತರ ಅತ್ಯುನ್ನತ ಕ್ರಮಾಂಕದ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು. ಇವರು 46 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್‌ 1963ರ ನಂತರ ಪರಿಚಯವಾದ ನಂತರ ಲಾರ್ಡ್ಸ್‌ನಲ್ಲಿ ಜಿಲೆಟ್ ಕಪ್ ಪಂದ್ಯದಲ್ಲಿ ಸಸೆಕ್ಸ್​ ಪರ ಎರಡು ಬಾರಿ ಕಪ್ ​ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ‘ಜೀವನದ ಹೊಸ ಅಧ್ಯಾಯ'ದ ಬಗ್ಗೆ ಗಂಗೂಲಿ 'ನಿಗೂಢ' ಟ್ವೀಟ್​.. ರಾಜಕೀಯ ಸೇರ್ತಾರಾ ದಾದಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.