ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಏಪ್ರಿಲ್‌ನಲ್ಲಿ ಪ್ರಾರಂಭವಾಗುವ ಐಪಿಎಲ್ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ನಿರ್ದೇಶಕರಾಗಿ ಮರಳಲಿದ್ದಾರೆ ಎಂದು ತಂಡದ ನಿಕಟ ಮೂಲಗಳು ಖಚಿತಪಡಿಸಿವೆ. ಅಕ್ಟೋಬರ್‌ನಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಭಾರತದ ಮಾಜಿ ನಾಯಕ ಗಂಗೂಲಿ ಐಎಲ್‌ಟಿ 20 ತಂಡ ದುಬೈ ಕ್ಯಾಪಿಟಲ್ಸ್ ಮತ್ತು ಎಸ್‌ಎಟಿ 230 ಲೀಗ್ ಸೈಡ್ ಪ್ರಿಟೋರಿಯಾ ಕ್ಯಾಪಿಟಲ್ಸ್ ಫ್ರಾಂಚೈಸಿಯ ಎಲ್ಲಾ ಪಂದ್ಯ ನಿರ್ವಹಣೆಯ ಜವಾಬ್ದಾರಿ ಹೊದಿದ್ದರು.
ಸೌರವ್ 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಾರ್ಗದರ್ಶಕರಗಿದ್ದರು. ಐಪಿಎಲ್ ಅಲ್ಲದೆ, ದಕ್ಷಿಣ ಆಫ್ರಿಕಾ ಲೀಗ್ ಮತ್ತು ದುಬೈ ಕ್ರಿಕೆಟ್ ಲೀಗ್‌ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪ್ರದರ್ಶನ ನೀಡಲಿದೆ. ಹೀಗಾಗಿ ಗಂಗೂಲಿಗೆ ಹೆಚ್ಚಿನ ಜವಾಬ್ದಾರಿ ವಹಿಸುವ ನಿರೀಕ್ಷೆ ಇದೆ.
ಡೆಲ್ಲಿ ತಂಡದ ಮೂಲದಿಂದ, ಗಂಗೂಲಿ ಅವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದರಿಂದ ಫ್ರಾಂಚೈಸಿಯ ಜೊತೆಗೆ ಉತ್ತಮ ಸಂಬಂಧ ಇದೆ. ಅವರೂ ಡೆಲ್ಲಿ ಕ್ಯಾಪಿಟಲ್ಸ್ನೊಂದಿಗೆ ಗುರುತಿಸಿ ಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೌರವ್ ಗಂಗೂಲಿ ಮೂರು ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷರಾಗಿದ್ದರು. ಎರಡನೇ ಅವಧಿಗೆ ಅವರಿಗೆ ವಿಸ್ತರಣೆ ಮಾಡಿಲ್ಲ, ಅವರ ಜಾಗಕ್ಕೆ ರೋಜರ್ ಬಿನ್ನಿ ಆಯ್ಕೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಆಗಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ತಂಡ: ರಿಷಭ್ ಪಂತ್ (ಸಿ), ಡೇವಿಡ್ ವಾರ್ನರ್, ಪೃಥ್ವಿ ಶಾ, ರೊಮೈನ್ ಪೊವೆಲ್, ಅಕ್ಷರ್ ಪಟೇಲ್, ಕಮಲೇಶ್ ನಾಗರಕೋಟಿ, ಲಲಿತ್ ಯಾದವ್, ಮಿಚೆಲ್ ಮಾರ್ಷ್, ಪ್ರವೀಣ್ ದುಬೆ, ರಿಪ್ಪಲ್ ಪಟೇಲ್, ಸರ್ಫರಾಜ್ ಖಾನ್, ವಿಕ್ಕಿ ಓಸ್ಟ್ವಾಲ್, ಯಶ್ ಧುಲ್, ಅಮನ್ ಖಾನ್, ಅನ್ರಿಚ್ ನೋರ್ಕಿಯಾ, ಚೇತನ್ ಸಕಾರಿಯಾ, ಚೇತನ್ ಸಕಾರಿಯಾ , ಕುಲದೀಪ್ ಯಾದವ್, ಲುಂಗಿ ಎನ್ಗಿಡಿ, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್, ಫಿಲ್ ಸಾಲ್ಟ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಮನೀಶ್ ಪಾಂಡೆ ಮತ್ತು ರಿಲೆ ರೊಸ್ಸೊ.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ವಿಚಾರ: ಮಾಜಿ ಅಧ್ಯಕ್ಷ ಚೇತನ್ ಶರ್ಮಾಗೆ ಮತ್ತೊಂದು ಚಾನ್ಸ್?