ನವದೆಹಲಿ : ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವದ ಬಗ್ಗೆ ಚರ್ಚೆ ಆರಂಭವಾಗಿದ್ದು, ಇದರ ಬೆನ್ನಲೇ ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯಲು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡಾಮಿಯನ್ ಫ್ಲೆಮಿಂಗ್ ಬೆಂಬಲ ಸೂಚಿಸಿದ್ದಾರೆ.
ಕಮ್ಮಿನ್ಸ್ ನಾಯಕ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದಿರುವ ಫ್ಲೆಮಿಂಗ್, ಒಂದು ಅಂತಿಮ ಗೆರೆ ಇದೆ. ಅದರ ಬಗ್ಗೆ ಅವನಿಗೆ (ಕಮ್ಮಿನ್ಸ್) ಮಾತ್ರ ತಿಳಿದಿದೆ. ಅವನು ಅದನ್ನು ಮುಂದುವರಿಸಬೇಕು ಎಂದು ನಾನು ಬಯಸುತ್ತೇನೆ. ಅದು ಯಾರಿಗೆ ಹೋಗುತ್ತದೆ ಎಂದು ನನಗೆ ತಿಳಿದಿಲ್ಲ. ಈಗಾಗಲೇ ಸ್ಟೀವ್ ಸ್ಮಿತ್ ಅವರು ಎಷ್ಟು ಸಮಯದವರೆಗೆ ಆಡುತ್ತಾರೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಟ್ರಾವಿಸ್ ಹೆಡ್ ಚಿಕ್ಕ ವಯಸ್ಸಿನಿಂದಲೂ ದಕ್ಷಿಣ ಆಸ್ಟ್ರೇಲಿಯಾದ ನಾಯಕರಾಗಿದ್ದರಿಂದ ಸಂಭವನೀಯ ಆಯ್ಕೆಯಾಗಿರಬಹುದು ಎಂದು ನಾಯಕತ್ವದ ಕುರಿತು ಡಾಮಿಯನ್ ಫ್ಲೆಮಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡಕ್ಕೆ ಒಬ್ಬ ನಾಯಕ 3 ರಿಂದ 4 ವರ್ಷಗಳು ಸೂಕ್ತ ಎಂದೆನಿಸುತ್ತದೆ. ಏಕೆಂದರೆ ಒಂದೆರಡು ವರ್ಷಗಳಲ್ಲಿ ಕಮ್ಮಿನ್ಸ್ ಯಶಸ್ವಿ ನಾಯಕನಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗೆ ಇದೆ. ಅಲ್ಲದೇ ಆಸ್ಟ್ರೇಲಿಯಾ ತಂಡಕ್ಕೆ ಕಮಿನ್ಸ್ ನಾಯಕನಾಗಿ ಬೌಲಿಂಗ್ ಮಾಡುವಾಗ ಮೈದಾನದಲ್ಲಿ ಸ್ಮಿತ್ಗಿಂತ ಹೆಚ್ಚಿನ ಅಗತ್ಯವಿದೆ. ಸ್ಟೀವ್ ಸ್ಮಿತ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದು, ತಂಡಕ್ಕೆ ಇದು ಅನುಕೂಲಕರವಾಗಿದೆ. ಈ ನಿಟ್ಟಿನಲ್ಲಿ ಕೆಲಸವಾಗಬೇಕು.
ಏಕೆಂದರೆ ಕಮ್ಮಿನ್ಸ್ ಬೌಲಿಂಗ್ ಮಾಡುತ್ತಿರುವುದರಿಂದ ಎಲ್ಲಿ ಯಾವ ಆಟಗಾರನ್ನು ಫೀಲ್ಡಿಂಗ್ ನಿಲ್ಲಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಸ್ಮಿತ್ ನಾಯಕನಾದರೆ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗೂ ಉಳಿದ ಆಟಗಾರರನ್ನು ಫೀಲ್ಡಿಂಗ್ ನಿಲ್ಲಿಸಲು ಸಮಸ್ಯೆಯಾಗಬಹುದು ಎಂದು ಕಮ್ಮಿನ್ಸ್ ಪರ ಫ್ಲೆಮಿಂಗ್ ಬ್ಯಾಟ್ ಬೀಸಿದ್ದಾರೆ.
ನಾವು ಮೊದಲ ಎರಡು ಟೆಸ್ಟ್‌ಗಳನ್ನು ಗೆದ್ದಿದ್ದು, ನಾವು ಆಶಸ್ ಅನ್ನು ಉಳಿಸಿಕೊಂಡಿದ್ದೇವೆ. ಹೀಗಾಗಿ ಓವಲ್‌ನಲ್ಲಿ ಗುರುವಾರದಿಂದ ಐದನೇ ಆಶಸ್ ಟೆಸ್ಟ್ ಪ್ರಾರಂಭವಾಗುತ್ತಿದೆ. ಇದು ಅಂತಿಮ ಟೆಸ್ಟ್ ಆಗಿರುವುದರಿಂದ ಸರಣಿಯನ್ನು 3-1 ರಿಂದ ಆಸ್ಟ್ರೇಲಿಯಾ ತಮ್ಮದಾಗಿಸಿಕೊಳ್ಳುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂದು ಫ್ಲೆಮಿಂಗ್ ಹೇಳಿದ್ದಾರೆ. ಕೆಲವು ದಿನಗಳಿಂದೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಕೂಡ ಪ್ಯಾಟ್ ಕಮ್ಮಿನ್ಸ್ ಅವರನ ಗುಣಗಾನ ಮಾಡಿದ್ದರು. ಕಮ್ಮಿನ್ಸ್ ಹಳೆಯ ಶೈಲಿಯ ಟೆಸ್ಟ್ ನಾಯಕ. ಮೈದಾನದಲ್ಲಿ ಆಟದ ಕುರಿತು ಯೋಜನೆಗಳನ್ನು ಬಿಚ್ಚಿಡಲು ಆಟಗಾರರಿಗೆ ಅವಕಾಶ ನೀಡುತ್ತಾರೆ ಎಂದಿದ್ದರು.
2 ವರ್ಷಗಳಲ್ಲಿ ಕಮ್ಮಿನ್ಸ್ ಟೆಸ್ಟ್ನಲ್ಲಿ ಕಮಾಲ್ : 2021 ರ ಆಶಸ್ ಟೆಸ್ಟ್ ಸರಣಿಗೆ ಮುಂಚಿತವಾಗಿ ಆಸ್ಟ್ರೇಲಿಯಾ ಮಾಜಿ ನಾಯಕ ಟಿಮ್ ಪೈನ್ ಅವರ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದರು. ನಂತರ ಟೆಸ್ಟ್ ನಾಯಕನಾಗಿ ಕಮ್ಮಿನ್ಸ್ ಉತ್ತಮ ರನ್ ಗಳಿಸಿದ್ದು, ಆಸ್ಟ್ರೇಲಿಯನ್ ವೇಗದ ಬೌಲಿಂಗ್ ಮುಂಚೂಣಿಯ ತನ್ನ ನಾಯಕತ್ವದಲ್ಲಿ ಕೊನೆಯ ಆಶಸ್ ಸರಣಿಯನ್ನು 4-0 ಅಂತರದಲ್ಲಿ ಗೆದ್ದಿದ್ದರು. ಬಳಿಕ ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಳನ್ನು ಗೆದ್ದಿತು. ಆದರೆ, ಕಳೆದ ವರ್ಷ ಮಾತ್ರ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ 1-1 ಸಮಬಲ ಸಾಧಿಸಿತ್ತು. ಈಗ ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆಗುವ ಮೂಲಕ ಆಸ್ಟ್ರೇಲಿಯಾ ಕಪ್ ಅನ್ನು ತನ್ನಲೇ ಉಳಿಸಿಕೊಂಡಿದೆ.
ಇದನ್ನೂ ಓದಿ : Ashes Test Series 2023: ಕಮ್ಮಿನ್ಸ್, ಸ್ಟೋಕ್ಸ್ ನಾಯಕತ್ವ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು?