ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಡೆದ ವಿಶ್ವಕಪ್ ಕ್ರಿಕೆಟ್‌ನ ಮೊದಲ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯ 50ನೇ ಶತಕ ಸಿಡಿಸಿದರು. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಗಳನ್ನು ಮುರಿದು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ.
-
Brimming with greatness 😍#CWC23 #BeAChampion pic.twitter.com/b29RaFwXhR
— ICC Cricket World Cup (@cricketworldcup) November 15, 2023 " class="align-text-top noRightClick twitterSection" data="
">Brimming with greatness 😍#CWC23 #BeAChampion pic.twitter.com/b29RaFwXhR
— ICC Cricket World Cup (@cricketworldcup) November 15, 2023Brimming with greatness 😍#CWC23 #BeAChampion pic.twitter.com/b29RaFwXhR
— ICC Cricket World Cup (@cricketworldcup) November 15, 2023
ಇಂತಹ ಐತಿಹಾಸಿಕ ಸಂದರ್ಭಕ್ಕೆ ಇಂಗ್ಲೆಂಡ್ ತಂಡದ ಪ್ರಸಿದ್ಧ ಮಾಜಿ ಫುಟ್‌ಬಾಲ್ ತಾರೆ ಡೇವಿಡ್ ಬೆಕ್‌ಹ್ಯಾಮ್ ಕೂಡಾ ಸಾಕ್ಷಿಯಾಗಿದ್ದರು. ಕೊಹ್ಲಿಯ ಕಲಾತ್ಮಕ ಬ್ಯಾಟಿಂಗ್ ಮೋಡಿಯನ್ನು ಬೆಕ್‌ಹ್ಯಾಮ್ ಕಣ್ತುಂಬಿಕೊಂಡು ಸಂಭ್ರಮಿಸಿದರು. "ನಾನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸ್ವಲ್ಪ ಸಮಯ ಕಳೆದೆ. ಅವರು ಈ ಕ್ರೀಡಾಂಗಣದಲ್ಲಿ ಏನು ಸಾಧಿಸಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಅವರು ದೇಶ ಮತ್ತು ಕ್ರೀಡೆಗಾಗಿ ಆಡುತ್ತಿದ್ದರು. ಅದರೆ, ಇಂದು ಅದನ್ನು ವಿರಾಟ್ ಮಾಡುವುದನ್ನು ನೋಡಲು ನಿಜವಾಗಿಯೂ ಆನಂದವಾಗುತ್ತಿದೆ. ಹೀಗಾಗಿ, ನಾನು ಇದೇ ಮೊದಲ ಬಾರಿಗೆ, ಸರಿಯಾದ ಸಮಯಕ್ಕೆ ಭಾರತಕ್ಕೆ ಬಂದಿದ್ದೇನೆ" ಎಂದು ಬೆಕ್‌ಹ್ಯಾಮ್ ನುಡಿದರು.
-
Virat Kohli playing football with David Beckham at Wankhede. [Beckham Instagram story] pic.twitter.com/gid0TcKP5V
— Johns. (@CricCrazyJohns) November 15, 2023 " class="align-text-top noRightClick twitterSection" data="
">Virat Kohli playing football with David Beckham at Wankhede. [Beckham Instagram story] pic.twitter.com/gid0TcKP5V
— Johns. (@CricCrazyJohns) November 15, 2023Virat Kohli playing football with David Beckham at Wankhede. [Beckham Instagram story] pic.twitter.com/gid0TcKP5V
— Johns. (@CricCrazyJohns) November 15, 2023
ಪ್ರಸ್ತುತ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ (UNICEF) ಸದ್ಭಾವನಾ ರಾಯಭಾರಿಯಾಗಿ ಬೆಕ್‌ಹ್ಯಾಮ್ ಭಾರತ ಪ್ರವಾಸದಲ್ಲಿದ್ದಾರೆ.
ಸಚಿನ್ ಸಂತಸ: "ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ನನ್ನ ಪಾದಗಳನ್ನು ಮುಟ್ಟುವಂತೆ ಇತರ ತಂಡದ ಸದಸ್ಯರು ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಿರಲಿಲ್ಲ. ಆದರೆ ಶೀಘ್ರದಲ್ಲೇ, ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನೀವು ನನ್ನ ಹೃದಯವನ್ನು ತಲುಪಿದಿರಿ. ಆ ಚಿಕ್ಕ ಹುಡುಗ 'ವಿರಾಟ್' ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಒಬ್ಬ ಭಾರತೀಯ ನನ್ನ ದಾಖಲೆಯನ್ನು ಮುರಿದಿದ್ದಕ್ಕೆ ನಾನು ಹೆಚ್ಚು ಸಂತೋಷಪಡುತ್ತೇನೆ. ದೊಡ್ಡ ವೇದಿಕೆ, ವಿಶ್ವಕಪ್ ಸೆಮಿ ಫೈನಲ್ ಮತ್ತು ನನ್ನ ತವರು ಮೈದಾನದಲ್ಲಿ ಇದನ್ನು ಮಾಡಿದ್ದು ನನಗೆ ಕೇಕ್ ಮೇಲೆ ಐಸ್ಕ್ರಿಮ್ ಹಾಕಿದಂತಿದೆ" ಎಂದು ಸಚಿನ್ ತೆಂಡೂಲ್ಕರ್ ವಿರಾಟ್ ಶತಕವನ್ನು ಮೈದಾನದಲ್ಲೇ ನೋಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದರು.
-
"A special person, a great footballer, and a @UNICEF Ambassador"
— ICC (@ICC) November 15, 2023 " class="align-text-top noRightClick twitterSection" data="
Legendary cricketer @sachin_rt's epic meetup with football great David Beckham illuminates Wankhede Stadium 🔥#CWC23 | #INDvNZ pic.twitter.com/QT6LHEq581
">"A special person, a great footballer, and a @UNICEF Ambassador"
— ICC (@ICC) November 15, 2023
Legendary cricketer @sachin_rt's epic meetup with football great David Beckham illuminates Wankhede Stadium 🔥#CWC23 | #INDvNZ pic.twitter.com/QT6LHEq581"A special person, a great footballer, and a @UNICEF Ambassador"
— ICC (@ICC) November 15, 2023
Legendary cricketer @sachin_rt's epic meetup with football great David Beckham illuminates Wankhede Stadium 🔥#CWC23 | #INDvNZ pic.twitter.com/QT6LHEq581
ಇದನ್ನೂ ಓದಿ: ಭಾರತ ವಿಶ್ವದಲ್ಲೇ ಅತ್ಯುತ್ತಮ ತಂಡ; ನಮಗಿಂತ ಉತ್ತಮ ತಂಡದೊಂದಿಗೆ ಸೋತೆವು-ಕೇನ್ ವಿಲಿಯಮ್ಸನ್