ETV Bharat / sports

ಸ್ಫೋಟಕ ಆಲ್​ರೌಂಡರ್​ಗೆ ಗಾಯ: ವಿಶ್ವಕಪ್​​​ಗೆ​ ಮುನ್ನವೇ ಇಂಗ್ಲೆಂಡ್​ಗೆ ಆಘಾತ - ಲಿವಿಂಗ್​ಸ್ಟೋನ್​ ಬೆರಳು ಗಾಯ

ಲಿಯಾಮ್​ ಲಿವಿಂಗ್​ಸ್ಟೋನ್ ವಿಶ್ವಕಪ್​ಗೆ ಲಭ್ಯರಾಗಲಿದ್ದಾರೆಯೇ ಎಂಬುದರ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳಲು ಇಸಿಸಿಬಿ ಮುಂದಿನ 24 ಗಂಟೆಗಳ ಕಾಲ ಅವರ ಗಾಯದ ಮೌಲ್ಯ ಮಾಪನ ಮಾಡಲಿದೆ ಎಂದು ಸ್ಕೈ ಸ್ಪೋರ್ಟ್ಸ್​ ವರದಿ ಮಾಡಿದೆ.

Finger injury renders Livingstone doubtful for T20 WC
ಲಿಯಾಮ್ ಲಿವಿಂಗ್​ಸ್ಟೋನ್​ಗೆ ಗಾಯ
author img

By

Published : Oct 19, 2021, 3:09 PM IST

ದುಬೈ: ಭಾರತದ ವಿರುದ್ಧ ಸೋಮವಾರ ನಡೆದ ಅಭ್ಯಾಸ ಪಂದ್ಯದ ವೇಳೆ ಕ್ಯಾಚ್​ ಹಿಡಿಯುವಾಗ ಬೆರಳಿಗೆ ಗಾಯಮಾಡಿಕೊಂಡಿರುವ ಇಂಗ್ಲೆಂಡ್ ಆಲ್​ರೌಂಡರ್​ ಲಿಯಾಮ್ ಲಿವಿಂಗ್​ಸ್ಟೋನ್​ ಟಿ20 ವಿಶ್ವಕಪ್​ನಲ್ಲಿ ಆಡುವುದು ಅನುಮಾನವಾಗಿದೆ.

ಲಿಯಾಮ್​ ಲಿವಿಂಗ್​ಸ್ಟೋನ್ ವಿಶ್ವಕಪ್​ಗೆ ಲಭ್ಯರಾಗಲಿದ್ದಾರೆಯೇ ಎಂಬುದರ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳಲು ಇಸಿಸಿಬಿ ಮುಂದಿನ 24 ಗಂಟೆಗಳ ಕಾಲ ಅವರ ಗಾಯದ ಮೌಲ್ಯ ಮಾಪನ ಮಾಡಲಿದೆ ಎಂದು ಸ್ಕೈ ಸ್ಪೋರ್ಟ್ಸ್​ ವರದಿ ಮಾಡಿದೆ.

ಲಿವಿಂಗ್​ಸ್ಟೋನ್​ ಆಭ್ಯಾಸ ಪಂದ್ಯದ ವೇಳೆ ಇಶಾನ್ ಕಿಶನ್ ಬಾರಿಸಿದ ಚೆಂಡನ್ನ ಬೌಂಡರಿ ಲೈನ್​ ಬಳಿ ಹಿಡಿಯುವ ವೇಳೆ ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಸ್ಟಾರ್ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡಲು ಅನಿರ್ದಿಷ್ಟಾವಧಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಅವರ ಬದಲಿಗೆ ಲಿವಿಂಗ್​ಸ್ಟೋನ್​ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.

ಈ ಪಂದ್ಯದಲ್ಲಿ ಇಂಗ್ಲೆಂಡ್ ಆಲ್​ರೌಂಡರ್​ 20 ಎಸೆತಗಳಲ್ಲಿ 30 ರನ್​ ಬಾರಿಸಿದ್ದರು. ಜೊತೆಗೆ 2 ಓವರ್​ ಬೌಲಿಂಗ್ ಮಾಡಿ ಕೊಹ್ಲಿ ವಿಕೆಟ್​ ಪಡೆದುಕೊಂಡಿದ್ದರು. ಆದರೆ, ಇಂಗ್ಲೆಂಡ್ ನೀಡಿದ್ದ 189 ರನ್​ಗಳ ಗುರಿಯನ್ನು ಭಾರತ ತಂಡ 3 ವಿಕೆಟ್​ ಕಳೆದುಕೊಂಡು ಇನ್ನು ಒಂದು ಒವರ್​ ಉಳಿದಿರುವಂತೆ ಗೆಲುವು ಸಾಧಿಸಿತು.

ಇದನ್ನೂ ಓದಿ:Dhoni ಇಲ್ಲದೆ, CSK ಇಲ್ಲ.. ಚೆನ್ನೈ ಸೂಪರ್​ ಕಿಂಗ್ಸ್​ ಮಾಲೀಕ ಶ್ರೀನಿವಾಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.