ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ಕೊನೆಯ ಪಂದ್ಯ ಆಡುವುದಕ್ಕೂ ಮುಂಚಿತವಾಗಿ ಕೋವಿಡ್ ಸೋಂಕಿಗೊಳಗಾಗಿದ್ದ ಕಾರಣ ಫೈನಲ್ ಪಂದ್ಯ ರದ್ದಾಗಿತ್ತು. ಇದೀಗ ಆ ಪಂದ್ಯ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಆಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಆಗಸ್ಟ್ - ಸೆಪ್ಟೆಂಬರ್ ತಿಂಗಳಲ್ಲಿ ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆಯೋಜನೆಗೊಂಡಿತ್ತು. ನಾಲ್ಕು ಟೆಸ್ಟ್ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಐದನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ತಯಾರಿ ನಡೆಸಿದ್ದ ವೇಳೆ ತಂಡದ ಸಹಾಯಕ ಸಿಬ್ಬಂದಿ ಯೋಗೇಶ್ ಪಾರ್ಮರ್ಗೆ ಕೊರೊನಾ ಸೋಂಕು ದೃಢಗೊಂಡಿದ್ದರಿಂದ ಫೈನಲ್ ಪಂದ್ಯ ದಿಢೀರ್ ಆಗಿ ರದ್ದುಗೊಂಡಿತ್ತು.
-
The fifth match of our Men's LV= Insurance Test Series against India has been rescheduled and will now take place in July 2022.
— England Cricket (@englandcricket) October 22, 2021 " class="align-text-top noRightClick twitterSection" data="
">The fifth match of our Men's LV= Insurance Test Series against India has been rescheduled and will now take place in July 2022.
— England Cricket (@englandcricket) October 22, 2021The fifth match of our Men's LV= Insurance Test Series against India has been rescheduled and will now take place in July 2022.
— England Cricket (@englandcricket) October 22, 2021
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 2-1 ಅಂತರದ ಮುನ್ನಡೆ ಪಡೆದುಕೊಂಡಿದ್ದು, ಕೊನೆಯ ಪಂದ್ಯ ಮುಂದಿನ ವರ್ಷ ಜುಲೈ 2022ರಲ್ಲಿ ಆಯೋಜನೆ ಮಾಡುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದ್ದು, ಅದಕ್ಕೆ ಬಿಸಿಸಿಐ ಕೂಡ ಸಮ್ಮಿತಿ ಸೂಚಿಸಿದೆ.
ಈ ಹಿಂದಿನ ವೇಳಾಪಟ್ಟಿ ಪ್ರಕಾರ ಪಂದ್ಯ ಮ್ಯಾಂಚೆಸ್ಟರ್ ಬದಲಾಗಿ ಎಡ್ಜ್‌ಬಾಸ್ಟನ್(Edgbaston)ದಲ್ಲಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಇಸಿಬಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಈಗಾಗಲೇ ವೇಳಾಪಟ್ಟಿ ನಿರ್ಧಾರಗೊಂಡಿರುವ ಕಾರಣ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ನಲ್ಲಿ ಪಂದ್ಯ ಆಯೋಜನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಎಡ್ಜ್ಬಾಸ್ಟನ್ನಲ್ಲಿ ಪಂದ್ಯ ನಡೆಯಲಿದೆ ಎಂದಿದೆ.
ಉಭಯ ತಂಡಗಳ ನಡುವಿನ 4ನೇ ಟೆಸ್ಟ್ ಪಂಧ್ಯದ ವೇಳೆ ಟೀಂ ಇಂಡಿಯಾ ಕೋಚ್ಗಳಾದ ರವಿಶಾಸ್ತ್ರಿ, ಭರತ್ ಅರುಣ್ ಹಾಗೂ ಆರ್ ಶ್ರೀಧರ್ಗೂ ಸೋಂಕು ದೃಢಪಟ್ಟಿತ್ತು. ಅವರು ಕ್ವಾರಂಟೈನ್ಗೊಳಗಾಗಿದ್ದರು. ಇದರ ಬೆನ್ನಲ್ಲೇ 4ನೇ ಟೆಸ್ಟ್ ಪಂದ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು. ಆದರೆ, ಫೈನಲ್ ಪಂದ್ಯದ ವೇಳೆ ಫಿಸಿಯೋಗೆ ಕೊರೊನಾ ಕಾಣಿಸಿಕೊಂಡಿದ್ದ ಕಾರಣ ಪಂದ್ಯ ರದ್ದು ಮಾಡುವ ನಿರ್ಧಾರ ಕೈಗೊಂಡಿತು.