2022ರ ಫಿಫಾ ವಿಶ್ವಕಪ್ ಕತಾರ್‌ನಲ್ಲಿ ಯಶಸ್ವಿಯಾಗಿ ನಡೆದಿತ್ತು. 2026ಕ್ಕೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಆತಿಥ್ಯ ವಹಿಸಿಕೊಳ್ಳಲಿವೆ. 26ರ ಕಾಲ್ಚೆಂಡಿನ ವಿಶ್ವಕಪ್ನ ಗುಂಪು ಹಂತದ ಪಂದ್ಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವ ಬಗ್ಗೆ ಮಂಗಳವಾರ ಫಿಫಾ ಕೌನ್ಸಿಲ್ ತಿಳಿಸಿದೆ. ಹೊಸ ನಿಯಮದಂತೆ ಈ ಹಿಂದೆ ಇದ್ದ 16 ತಂಡಗಳ ಮೂರು ಗುಂಪನ್ನು 12 ತಂಡದ ನಾಲ್ಕು ಗುಂಪಾಗಿ ವಿಭಾಗಿಸಲಾಗಿದೆ. 2022ರ ವಿಶ್ವಕಪ್‌ನಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿಸಲಾಗಿತ್ತು. ಇದೀಗ ಹೊಸ ಬದಲಾವಣೆಯ ನಂತರ 104 ಪಂದ್ಯಗಳು ನಡೆಯಲಿವೆ.
ರುವಾಂಡಾದ ಕಿಗಾಲಿಯಲ್ಲಿ ನಡೆದ ಫಿಫಾ ಕೌನ್ಸಿಲ್ ಸಭೆ ಈ ಕ್ರಮವನ್ನು ಅನುಮೋದಿಸಿದೆ. ಪರಿಷ್ಕೃತ ಸ್ಪರ್ಧೆಯ ರಚನೆಯು ಭಾರತ ಸೇರಿದಂತೆ ದೇಶಗಳಿಗೆ ವಿಶ್ವಕಪ್ ಆಡುವ ಕನಸು ನನಸಾಗಿಸಲು ಸಹಾಯ ಮಾಡುತ್ತದೆ. 2026ರಲ್ಲಿ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ವಿಶ್ವಕಪ್ ಆಯೋಜಿಸುತ್ತವೆ. ಈ ದೇಶಗಳ 16 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ 11 ನಗರಗಳು ಯುಎಸ್, ಮೂರು ಮೆಕ್ಸಿಕೊ ಹಾಗು ಎರಡು ಕೆನಡಾದಲ್ಲಿವೆ. ವಿಶ್ವಕಪ್ ಇತಿಹಾಸದಲ್ಲಿ ಮೂರು ತಂಡಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. 48 ತಂಡಗಳನ್ನು ಪ್ರತಿನಿಧಿಸುವ ಮೂಲಕ ಈ ವಿಶ್ವಕಪ್ ಟೂರ್ನಿಯು ಇತಿಹಾಸದಲ್ಲಿ ಅತಿದೊಡ್ಡ ಮತ್ತು ಸುದೀರ್ಘವಾಗಿರುತ್ತದೆ.
-
FIFA Council approves international match calendars
— FIFA Media (@fifamedia) March 14, 2023 " class="align-text-top noRightClick twitterSection" data="
🗞️👉 https://t.co/KyrTVnrNxh pic.twitter.com/FIL05feiZT
">FIFA Council approves international match calendars
— FIFA Media (@fifamedia) March 14, 2023
🗞️👉 https://t.co/KyrTVnrNxh pic.twitter.com/FIL05feiZTFIFA Council approves international match calendars
— FIFA Media (@fifamedia) March 14, 2023
🗞️👉 https://t.co/KyrTVnrNxh pic.twitter.com/FIL05feiZT
ಸ್ಪರ್ಧೆಯನ್ನು ತಲಾ 4 ತಂಡಗಳ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಆಡಲಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ಮತ್ತು ಅಗ್ರ 8 ತಂಡಗಳು 32 ರ ಸುತ್ತಿಗೆ ಮುನ್ನಡೆಯುತ್ತವೆ. ಫೈನಲಿಸ್ಟ್‌ಗಳು, ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಪ್ರಸ್ತುತ ಏಳು ಪಂದ್ಯಗಳ ಬದಲಿಗೆ ಎಂಟು ಪಂದ್ಯಗಳನ್ನು ಆಡುತ್ತವೆ.
ತಂಡಗಳ ಸಂಖ್ಯೆ ಏರಿಕೆ: 24 ತಂಡಗಳು 32 ಆಗಿರುವ ಕಾರಣ ಗುಂಪು ಮಾಡುವ ಬಗ್ಗೆ ಚರ್ಚೆಗಳು ನಡೆದಿದ್ದವು. 16 ತಂಡದ ಮೂರು ಗುಂಪು ಬಗ್ಗೆ ಪ್ರಸ್ತಾಪಗಳಿದ್ದವು. ಅದನ್ನು ಬದಲಿಸಿ 12 ತಂಡದ 4 ಗುಂಪು ಮಾಡುವ ವಿಚಾರಕ್ಕೆ ಒಪ್ಪಿಗೆ ಸೂಚಿಸಲಾಯಿತು. 2022ರ ಕತಾರ್ ವಿಶ್ವಕಪ್‌ನಲ್ಲಿ 32 ತಂಡಗಳ 64 ಪಂದ್ಯವನ್ನು 29 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ.
ಈ ಹಿಂದೆ ಮೆಕ್ಸಿಕೊ (1986) ಮತ್ತು ಯುನೈಟೆಡ್ ಸ್ಟೇಟ್ಸ್ (1994) ವಿಶ್ವಕಪ್‌ಗೆ ಆತಿಥ್ಯ ವಹಿಸಿದಾಗ ಕೇವಲ 24 ತಂಡಗಳು ಇದ್ದವು. 1998 ರ ಆವೃತ್ತಿಯಿಂದ 32 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ನಾಲ್ಕು ತಂಡಗಳ ಎಂಟು ಗುಂಪುಗಳಾಗಿ ಮಾಡಲಾಗಿತ್ತು. ಫೈನಲಿಸ್ಟ್‌ಗಳು ತಲಾ ಏಳು ಪಂದ್ಯಗಳನ್ನು ಆಡುತ್ತಿದ್ದರು.
ಮಹತ್ವದ ಸಭೆಯಲ್ಲಿ, ಫಿಫಾ 2025-2030ರ ಪುರುಷರ ಅಂತಾರಾಷ್ಟ್ರೀಯ ಸ್ಪರ್ಧೆಯ ಕ್ಯಾಲೆಂಡರ್ ಅನ್ನು ಅನುಮೋದಿಸಲಾಯಿತು. ಇದರ ಪ್ರಕಾರ 2026ರ ಜುಲೈ 19ರಂದು ವಿಶ್ವಕಪ್ ಫುಟ್ ಬಾಲ್ನ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಾವಳಿಗೆ ಆಟಗಾರರನ್ನು ಬಿಡುಗಡೆ ಮಾಡಲು ಕ್ಲಬ್‌ಗಳಿಗೆ ಗಡುವು 24 ಮೇ 2026 ರಿಂದ ಆಗಿದೆ. ಫಿಫಾ ಪ್ರಕಾರ, ಕ್ಲಬ್‌ಗಳ ಅಂತಿಮ ಪಂದ್ಯಗಳನ್ನು ಅವಲಂಬಿಸಿ ವಿನಾಯಿತಿಗಳು ಮೇ 30 ರವರೆಗೆ ಅನ್ವಯಿಸಬಹುದು.
-
An important date for the diary 👀📆
— FIFA (@FIFAcom) March 14, 2023 " class="align-text-top noRightClick twitterSection" data="
The FIFA Council has confirmed when the @FIFAWorldCup 2026 final will take place – as well as the format for the first-ever 48-team edition. pic.twitter.com/fdXZkLfTvh
">An important date for the diary 👀📆
— FIFA (@FIFAcom) March 14, 2023
The FIFA Council has confirmed when the @FIFAWorldCup 2026 final will take place – as well as the format for the first-ever 48-team edition. pic.twitter.com/fdXZkLfTvhAn important date for the diary 👀📆
— FIFA (@FIFAcom) March 14, 2023
The FIFA Council has confirmed when the @FIFAWorldCup 2026 final will take place – as well as the format for the first-ever 48-team edition. pic.twitter.com/fdXZkLfTvh
ಕ್ಲಬ್ ವಿಶ್ವಕಪ್‌ಗೆ ಹೊಸ ಮುಖ: ಜೂನ್ 2025 ರಿಂದ 32 ತಂಡಗಳೊಂದಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕ್ಲಬ್ ವಿಶ್ವಕಪ್ ನಡೆಯಲಿದೆ ಎಂದು ಫಿಫಾ ಘೋಷಿಸಿತು. ಕಳೆದ ವರ್ಷ ಕತಾರ್‌ನಲ್ಲಿ ಮಾಡಿದ ಘೋಷಣೆಯನ್ನು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಖಚಿತಪಡಿಸಿದ್ದಾರೆ. ಪ್ರಸ್ತುತ ಫಿಫಾ ಕ್ಲಬ್ ವಿಶ್ವಕಪ್ 2023ರ ನಂತರ ಸ್ಥಗಿತಗೊಳ್ಳಲಿದೆ. 2024 ರಿಂದ ಪರಿಷ್ಕೃತ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ಪ್ರಸ್ತುತ, ಕ್ಲಬ್ ವರ್ಲ್ಡ್ ಕಪ್ ವರ್ಷಕ್ಕೊಮ್ಮೆ ಏಳು ತಂಡಗಳೊಂದಿಗೆ ನಡೆಯುತ್ತದೆ. ರಿಯಲ್ ಮ್ಯಾಡ್ರಿಡ್ ಪ್ರಸ್ತುತ ಚಾಂಪಿಯನ್ ಆಗಿದೆ.
ಹೊಸ ಟೂರ್ನಿಯಲ್ಲಿ ಯುರೋಪ್ನ 12 ತಂಡಗಳು ಭಾಗವಹಿಸಲಿವೆ. 2021-2024 ರವರೆಗಿನ ಚಾಂಪಿಯನ್‌ಗಳು ಹೊಸ ಕ್ಲಬ್ ವಿಶ್ವಕಪ್‌ನಲ್ಲಿ ಆಡಲು ಅರ್ಹರಾಗಿರುತ್ತಾರೆ. ಚಾಂಪಿಯನ್ಸ್ ಲೀಗ್ ವಿಜೇತರಾದ ಚೆಲ್ಸಿಯಾ ಮತ್ತು ರಿಯಲ್ ಮ್ಯಾಡ್ರಿಡ್ ಈಗಾಗಲೇ ಕ್ರಮವಾಗಿ 2021 ಮತ್ತು 2022 ರಲ್ಲಿ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ. ಈ ತಂಡಗಳ ಜೊತೆಗೆ, ಎಲ್ಲಾ ಒಕ್ಕೂಟಗಳ ಲೀಗ್ ವಿಜೇತರು, ಯುಈಎಫ್ಎ ಚಾಂಪಿಯನ್ಸ್ ಲೀಗ್ (UEFA) ವಿಜೇತರು ಮತ್ತು ಇಂಟರ್ಕಾಂಟಿನೆಂಟಲ್ ಪ್ಲೇ-ಆಫ್‌ಗಳ ವಿಜೇತರನ್ನು ಸೇರಿಸಲಾಗುತ್ತದೆ.
ಇದನ್ನೂ ಓದಿ: WTC 2023: ಭಾರತೀಯ ಆಟಗಾರರ ಪ್ರದರ್ಶನ ಹೀಗಿದೆ..