ನವದೆಹಲಿ : ಭಾರತದ ರಾಷ್ಟ್ರೀಯ ಆಟ ಹಾಕಿ ಆದರೂ, ಸಹ ಕ್ರಿಕೆಟ್ ಅನ್ನು ಅತಿ ಹೆಚ್ಚು ಜನ ಆಡುವುದರ ಜೊತೆಗೆ ಪ್ರೋತ್ಸಾಹಿಸುತ್ತಾರೆ. ಅಲ್ಲದೇ, ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನನ್ನು ನೋಡಬೇಕು ಎಂದು ಎಷ್ಟೋ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅವಕಾಶ ಸಿಕ್ಕಗೆಲ್ಲ ಆಟಗಾರರನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ಕೆಲವೊಮ್ಮೆ ಅವಕಾಶಗಳನ್ನು ಸೃಷ್ಟಿ ಮಾಡಿಕೊಂಡು ತಮ್ಮ ಪ್ರೀತಿಯ ಆಟಗಾರರಿಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವ ಸಾಕಷ್ಟು ಉದಾಹರಣೆಗಳಿವೆ.
-
The moment when a fan touched Virat Kohli's feet and hugged him.
— Mufaddal Vohra (@mufaddal_vohra) January 15, 2024 " class="align-text-top noRightClick twitterSection" data="
- King Kohli, the crowd favourite. 😍pic.twitter.com/NfShGwtF8I
">The moment when a fan touched Virat Kohli's feet and hugged him.
— Mufaddal Vohra (@mufaddal_vohra) January 15, 2024
- King Kohli, the crowd favourite. 😍pic.twitter.com/NfShGwtF8IThe moment when a fan touched Virat Kohli's feet and hugged him.
— Mufaddal Vohra (@mufaddal_vohra) January 15, 2024
- King Kohli, the crowd favourite. 😍pic.twitter.com/NfShGwtF8I
ಅಂತಹುದೇ ಒಂದು ಘಟನೆ ನಿನ್ನೆ (ಭಾನುವಾರ) ಮಧ್ಯಪ್ರದೇಶದ ಇಂದೋರ್ನ ಹೋಳ್ಕರ್ ಮೈದಾನದಲ್ಲಿ ಭಾರತ ಮತ್ತು ಅಪ್ಘಾನಿಸ್ತಾನ ನಡುವೆ ನಡೆದ ಎರಡನೇ ಟಿ- 20 ಪಂದ್ಯದಲ್ಲಿ ನಡೆದಿದೆ. ಅಪ್ಘಾನ್ ಬ್ಯಾಟಿಂಗ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಭೇಟಿಯಾಗಬೇಕು ಎಂದು ಹುಚ್ಚು ಅಭಿಮಾನಿಯೊಬ್ಬ ಭದ್ರತೆಯನ್ನು ಮೀರಿ ಮೈದಾದೊಳಗೆ ಹಾರಿ ಬಂದಿದ್ದನು. ಈ ಸಂದರ್ಭದಲ್ಲಿ ಬೌಂಡರಿ ಗೆರೆಯಲ್ಲಿ ನಿಂತಿದ್ದ ಕೊಹ್ಲಿ ಒಂದು ಚೂರೂ ಅಲುಗಾಡದೇ ಮೈದಾನದೊಳಗೆ ಓಡಿ ಬರುತ್ತಿದ್ದ ಅಭಿಮಾನಿಯ ಕನಸನ್ನು ನನಸು ಮಾಡಿದ್ದಾರೆ.
-
My wish of hugging Virat Kohli got fulfilled today ❤️pic.twitter.com/r0B8ZjE0Ui https://t.co/vjCWSPyY9e
— Aarav (@sigma__male_) January 14, 2024 " class="align-text-top noRightClick twitterSection" data="
">My wish of hugging Virat Kohli got fulfilled today ❤️pic.twitter.com/r0B8ZjE0Ui https://t.co/vjCWSPyY9e
— Aarav (@sigma__male_) January 14, 2024My wish of hugging Virat Kohli got fulfilled today ❤️pic.twitter.com/r0B8ZjE0Ui https://t.co/vjCWSPyY9e
— Aarav (@sigma__male_) January 14, 2024
ನೇರವಾಗಿ ಕೊಹ್ಲಿ ಇದ್ದ ಕಡೆಗೆ ಬಂದ ಅಭಿಮಾನಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿದನು. ಬಳಿಕ ಕೊಹ್ಲಿಗೆ ಪ್ರೀತಿ ಅಪ್ಪುಗೆ ನೀಡಿದನು. ಅಷ್ಟರಲ್ಲೇ ಭದ್ರತಾ ಸಿಬ್ಬಂದಿ ತಕ್ಷಣ ಬಂದು ಅಭಿಮಾನಿಯನ್ನು ಮೈದಾನದಿಂದ ಹೊರ ಕರೆದೊಯ್ದರು. ಇದೀಗ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
-
Virat Kohli as an idol is a happy pill for so many fans#INDvsAFG #INDvAFG #AFGvIND #ViratKohli pic.twitter.com/Kc3LmLX3IZ
— AP (@AksP009) January 14, 2024 " class="align-text-top noRightClick twitterSection" data="
">Virat Kohli as an idol is a happy pill for so many fans#INDvsAFG #INDvAFG #AFGvIND #ViratKohli pic.twitter.com/Kc3LmLX3IZ
— AP (@AksP009) January 14, 2024Virat Kohli as an idol is a happy pill for so many fans#INDvsAFG #INDvAFG #AFGvIND #ViratKohli pic.twitter.com/Kc3LmLX3IZ
— AP (@AksP009) January 14, 2024
ಈ ಹಿಂದೆ ಕೂಡ ಹಲವು ಭಾರಿ ಕೊಹ್ಲಿ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಇದೇ ಮಾರ್ಗದ ಮೂಲಕ ಮೈದಾನದೊಳಗೆ ಬಂದಿದ್ದ. ಇತ್ತೀಚೆಗೆ ಭಾರತದಲ್ಲೇ ನಡೆದ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಪ್ಯಾಲೆಸ್ಟೀನ್ ಟಿ ಶರ್ಟ್ ಧರಿಸಿದ್ದ ಓರ್ವ ಅಭಿಮಾನಿ ಏಕಾಏಕಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದನು. ಬಳಿಕ ಆತನನ್ನು ಬಂಧಿಸಲಾಗಿತ್ತು.
-
Virat Kohli saying security officers to be kind with the fan.
— Johns. (@CricCrazyJohns) January 15, 2024 " class="align-text-top noRightClick twitterSection" data="
- A nice gesture by King. 👏pic.twitter.com/67GUmnHBHZ
">Virat Kohli saying security officers to be kind with the fan.
— Johns. (@CricCrazyJohns) January 15, 2024
- A nice gesture by King. 👏pic.twitter.com/67GUmnHBHZVirat Kohli saying security officers to be kind with the fan.
— Johns. (@CricCrazyJohns) January 15, 2024
- A nice gesture by King. 👏pic.twitter.com/67GUmnHBHZ
ಅಫ್ಘಾನಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಸುಮಾರು 14 ತಿಂಗಳ ನಂತರ ಟಿ20 ಮಾದರಿಗೆ ಮರಳಿದ್ದರು. ಈ ಪಂದ್ಯದಲ್ಲಿ ಆಡಲು ಬಂದ ಕೂಡಲೇ ತಮ್ಮ ಆಕ್ರಮಣಕಾರಿ ಆಟ ತೋರಿ ಬಿರುಸಿನ ಹೊಡೆತಗಳನ್ನು ಬಾರಿಸಿದರು. 16 ಎಸೆತಗಳನ್ನು ಎದುರಿಸಿದ ವಿರಾಟ್ 5 ಬೌಂಡರಿಗಳ ಸಹಿತ 29 ರನ್‌ಗಳನ್ನು ಕೆಲೆಹಾಕಿ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ 172 ರನ್ಗಳ ಗುರಿಯನ್ನು ಭಾರತ ಕೇವಲ 15.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಇದನ್ನೂ ಓದಿ : ಜೈಸ್ವಾಲ್, ದುಬೆ ಅಬ್ಬರ; ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ, 2-0 ಸರಣಿ ಗೆಲುವು