ಮುಂಬೈ (ಮಹಾರಾಷ್ಟ್ರ): ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ಸಿ ತೊರೆದು ರವೀಂದ್ರ ಜಡೇಜಾ ಅವರಿಗೆ ಜವಾಬ್ದಾರಿ ನೀಡಿದ್ದರ ಬಗ್ಗೆ ಮೆಚ್ಚುಗೆ ಸೂಚಿಸಿರುವ ಚೆನ್ನೈ ತಂಡದ ಮಾಜಿ ಆಟಗಾರ, ಆರ್ಸಿಬಿ ನೂತನ ನಾಯಕ ಫಾಫ್ ಡು ಪ್ಲೆಸಿಸ್, 'ಧೋನಿ ನಾಯಕತ್ವದಲ್ಲಿ ಆಡುವುದೇ ಒಂದು ಅದೃಷ್ಟ' ಎಂದಿದ್ದಾರೆ.
ಐಪಿಎಲ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಧೋನಿ ನಾಯಕತ್ವದ ಬಗ್ಗೆ ಮಾತನಾಡಿರುವ ಫಾಫ್, ನಾನು ಎಂಎಸ್ ಧೋನಿ ನಾಯಕತ್ವದಲ್ಲಿ ದೀರ್ಘಕಾಲ ಆಡಿದ ಅದೃಷ್ಟಶಾಲಿಯಾಗಿದ್ದೇನೆ. ಮೈದಾನದಲ್ಲಿ ಅವರ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಮೈದಾನದಲ್ಲಿದ್ದಾಗ ತೆಗೆದುಕೊಳ್ಳುವ ನಿರ್ಧಾರಗಳು ಅಚಲ ಎಂದಿದ್ದಾರೆ.
-
From the excitement to captain @RCBTweets & having @imVkohli as a part of the leadership group to learning from @msdhoni! 👌 👌
— IndianPremierLeague (@IPL) March 25, 2022 " class="align-text-top noRightClick twitterSection" data="
Ahead of the #TATAIPL 2022, @faf1307 discusses it all. 👍 👍 - By @Moulinparikh
Watch the full interview 🎥 🔽https://t.co/i7eb4D4whL pic.twitter.com/rr8XJ8Fqdu
">From the excitement to captain @RCBTweets & having @imVkohli as a part of the leadership group to learning from @msdhoni! 👌 👌
— IndianPremierLeague (@IPL) March 25, 2022
Ahead of the #TATAIPL 2022, @faf1307 discusses it all. 👍 👍 - By @Moulinparikh
Watch the full interview 🎥 🔽https://t.co/i7eb4D4whL pic.twitter.com/rr8XJ8FqduFrom the excitement to captain @RCBTweets & having @imVkohli as a part of the leadership group to learning from @msdhoni! 👌 👌
— IndianPremierLeague (@IPL) March 25, 2022
Ahead of the #TATAIPL 2022, @faf1307 discusses it all. 👍 👍 - By @Moulinparikh
Watch the full interview 🎥 🔽https://t.co/i7eb4D4whL pic.twitter.com/rr8XJ8Fqdu
ಧೋನಿ ಅವರು ತಂಡದಲ್ಲಿದ್ದಾಗ ನಮಗೆಲ್ಲಾ ಹೆಚ್ಚಿನ ಬಲ ಇರುತ್ತಿತ್ತು. ಎಷ್ಟೋ ಸಲ ಅವರ ನಿರ್ಧಾರಗಳು ನಮ್ಮನ್ನು ಚಕಿತಗೊಳಿಸುತ್ತಿದ್ದವು. ಅಂತಹ ಬಲವಾದ ನಾಯಕತ್ವ ಅವರದಾಗಿತ್ತು ಎಂದು ಹೊಗಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿರುವ ಫ್ಲೆಸಿಸ್, ವಿರಾಟ್ ಅವರು ಭಾರತ ತಂಡದ ದೀರ್ಘಕಾಲದ ನಾಯಕತ್ವ ವಹಿಸಿಕೊಂಡಿದ್ದರು.
ಕೊಹ್ಲಿ ಭಾರತೀಯ ಕ್ರಿಕೆಟ್ ಮತ್ತು ಆರ್‌ಸಿಬಿಗೆ ಉತ್ತಮ ನಾಯಕರಾಗಿದ್ದರು. ಅವರ ಅನುಭವ, ಬುದ್ಧಿವಂತಿಕೆ ಮತ್ತು ಜ್ಞಾನ ಅಗಣಿತ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿರುವುದು ಸವಾಲಿನ ಸಂಗತಿ. ದೊಡ್ಡ ಫ್ರಾಂಚೈಸಿಗೆ ನಾನು ನಾಯಕನಾಗಿರುವುದರಿಂದ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಓದಿ: ಅಭಿಮಾನಿಗಳು ಎಂದೂ ಮರೆಯದ ಧೋನಿ ನಾಯಕತ್ವದ ಅಧ್ಯಾಯ ಅಂತ್ಯ: ಕೊಹ್ಲಿ ಹೃದಯಸ್ಪರ್ಶಿ ಟ್ವೀಟ್