ಕೋಲ್ಕತ್ತಾ( ಪಶ್ಚಿಮ ಬಂಗಾಳ): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯನಿರ್ವಹಣೆಯನ್ನು ತಿಳಿದಿರುವವರಿಗೆ ನಿರಂಜನ್ ಶಾ ಬಗ್ಗೆ ಗೊತ್ತಿರುತ್ತೆ. 1965–66ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1972ರಲ್ಲಿ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (SCA) ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಸೌರಾಷ್ಟ್ರ ಕ್ರಿಕೆಟ್‌ನ ಭಾಗವಾಗಿರುವುದರ ಜೊತೆಗೆ, ನಿರಂಜನ್ ಶಾ ಅವರು ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿ BCCI ಯೊಂದಿಗೆ ನಂಟು ಹೊಂದಿದ್ದರು. ನಿರಂಜನ್ ಶಾ ಐಪಿಎಲ್ ಉಪಾಧ್ಯಕ್ಷರೂ ಸಹ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಶಾ ಅವರು ತಮಗೆ ವಹಿಸಿದ ಜವಾಬ್ದಾರಿಯನ್ನು ದಶಕಗಳಿಂದ ಬಹಳ ದಕ್ಷತೆಯಿಂದ ನಿರ್ವಹಿಸಿದ್ದಾರೆ. ಈಗ ಲೋಧಾ ಸಮಿತಿಯು ವಿಧಿಸಿರುವ ಹಲವು ವಿವಾದಾತ್ಮಕ ಷರತ್ತುಗಳನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ BCCI ತನ್ನ 91ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಅಕ್ಟೋಬರ್ 18 ರಂದು ನಡೆಸಲು ತುದಿಗಾಲಲ್ಲಿ ನಿಂತಿದೆ. ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಅವರೊಂದಿಗೆ ETV ಭಾರತ್ ನಡೆಸಿದ ವಿಶೇಷವಾದ ಸದರ್ಶನ ಇಲ್ಲಿದೆ..
ಪ್ರಶ್ನೆ: ನೀವು ಬಯಸಿದಂತೆ ಕೆಲವು ಷರತ್ತುಗಳನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ನೀವು ಹೇಗೆ ತೆಗೆದುಕೊಳ್ಳುತ್ತೀರಿ?
ಉತ್ತರ: ನ್ಯಾಯಾಲಯದ ತೀರ್ಪು ಪ್ರಸ್ತುತ ಪದಾಧಿಕಾರಿಗಳಿಗೆ ಮತ್ತೊಂದು ಅವಧಿಯನ್ನು ತೆರೆದಿದೆ. ಇಲ್ಲದಿದ್ದರೆ, ಅವರು ಕೂಲಿಂಗ್-ಆಫ್ ಅವಧಿಗೆ ಹೋಗುತ್ತಿದ್ದರು. ಹಾಗಾಗಿ ವ್ಯವಹಾರಗಳನ್ನು ನಡೆಸುವುದರಲ್ಲಿ ನಿರಂತರತೆ ಇರುವುದು ಒಳ್ಳೆಯದು.
ಪ್ರಶ್ನೆ: ನ್ಯಾಯಾಲಯದ ತೀರ್ಪು ನಿಮ್ಮ ತಲೆಮಾರಿನ ಕ್ರಿಕೆಟ್ ಆಡಳಿತಗಾರರಿಗೆ ಸಹಾಯ ಮಾಡುತ್ತದೆಯೇ?
ಉತ್ತರ: 11 ವರ್ಷಗಳ ಮಿತಿ ಇರುವುದರಿಂದ ಈ ತೀರ್ಪು ನಮಗೆ ಉಪಯುಕ್ತವಾಗಿದೆ. ನಮ್ಮಲ್ಲಿ ಹಲವರು ಷರತ್ತುಗಳನ್ನು ಪೂರ್ಣಗೊಳಿಸಿದ್ದಾರೆ ಅಥವಾ ಪೂರ್ಣಗೊಳಿಸಲಿದ್ದಾರೆ. ನಮಗೆ ಆ ರೀತಿಯಲ್ಲಿ ಸಹಾಯ ಮಾಡಲಾಗಿಲ್ಲ, ಆದರೆ ನಾವು ಅದರಲ್ಲಿ ಪರವಾಗಿಲ್ಲ.
ಪ್ರಶ್ನೆ: ಮಂಡಳಿಯ ಕಾರ್ಯನಿರ್ವಹಣೆಯೊಂದಿಗೆ ನೀವು ಸಂಬಂಧ ಹೊಂದಿದ್ದೀರಾ?
ಉತ್ತರ: ಮಂಡಳಿಯ ವ್ಯವಹಾರಗಳನ್ನು ನಡೆಸುವಲ್ಲಿ ನಮ್ಮ ಸೇವೆ ಬೇಕೋ ಬೇಡವೋ ಎಂಬುದು ಹೊಸ ಪದಾಧಿಕಾರಿಗಳಿಗೆ ಬಿಟ್ಟದ್ದು. ಅವರು ನಮ್ಮ ಸೇವೆಯನ್ನು ಬಯಸಿದರೆ, ನಾವು ಖಂಡಿತವಾಗಿಯೂ ನಮ್ಮ ಸೇವೆಯನ್ನು ಸಲ್ಲಿಸುವುದರಲ್ಲಿ ಎರಡು ಮಾತಿಲ್ಲ.
ಪ್ರಶ್ನೆ: ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಆಡಳಿತ ಮಂಡಳಿ ಮೇಲೆ ರಾಜಕೀಯ ಒತ್ತಡವಿದೆಯೇ?
ಉತ್ತರ: ನಮಗೆ ಯಾವುದೇ ರಾಜಕೀಯ ಒತ್ತಡವಿಲ್ಲ. ಮಂಡಳಿಯು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಅಡಿಯಲ್ಲಿ ನಡೆಯುತ್ತದೆ ಮತ್ತು ಎಲ್ಲಾ ಒಕ್ಕೂಟಗಳು ಸಹ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತವೆ.
ಪ್ರಶ್ನೆ: ನಿಮ್ಮ ರೀತಿಯಲ್ಲೇ ಎನ್ ಶ್ರೀನಿವಾಸನ್, ಅಜಯ್ ಶಿರ್ಕೆ ಮತ್ತು ಇನ್ನೂ ಅನೇಕರು ಮಂಡಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ನೀವು ಅದನ್ನು ಹೇಗೆ ನೋಡುತ್ತೀರಿ?
ಉತ್ತರ: ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ನಾವು ತೃಪ್ತರಾಗಿದ್ದೇವೆ. ಇದು ಸಾಧ್ಯವಾಗಿರುವುದು ನಮಗೆ ಖುಷಿ ತಂದಿದೆ. ನಮ್ಮ ಪಾಳಿ ಮುಗಿದಿದೆ. ನಾನು ನನ್ನ ಬಗ್ಗೆ ಮಾತನಾಡುತ್ತೇನೆ ಮತ್ತು ಯುವ ಪೀಳಿಗೆ ಮಂಡಳಿ ಆಡಳಿತಕ್ಕೆ ಬರುವುದರಿಂದ ನಾನು ಚೆನ್ನಾಗಿದ್ದೇನೆ ಎಂದು ಹೇಳಬಹುದು.
ಪ್ರಶ್ನೆ: ನಿಮ್ಮ ಪದಾಧಿಕಾರಿಗಳ ಆಯ್ಕೆ...
ಉತ್ತರ: ಇದು ಯಾರ ಆಯ್ಕೆಯನ್ನೂ ಅವಲಂಬಿಸಿಲ್ಲ. ಬಿಸಿಸಿಐ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಯಾರು ಎಂಬುದನ್ನು ರಾಜ್ಯದ ಪ್ರತಿನಿಧಿಗಳು ನಿರ್ಧರಿಸುತ್ತಾರೆ. ಆದರೆ ನಿರಂತರತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಈಗಿರುವ ನಿರ್ಧಾರಗಳ ಪ್ರಕಾರ, ಪದಾಧಿಕಾರಿಗಳಿಗೆ ಇನ್ನೂ ಮೂರು ವರ್ಷಗಳ ಅಧಿಕಾರಾವಧಿ ಇದೆ ಎಂದು ನಾನು ಭಾವಿಸುತ್ತೇನೆ.
ಪ್ರಶ್ನೆ: ಮಂಡಳಿ ಅಗ್ರಸ್ಥಾನದಲ್ಲಿರಬೇಕೆಂದು ನೀವು ಭಾವಿಸುವ ಐದು ಜನರನ್ನು ಹೆಸರಿಸಬಹುದೇ?
ಉತ್ತರ: ನಾನು ನಿರ್ದಿಷ್ಟವಾಗಿ ಯಾರನ್ನೂ ಹೆಸರಿಸಲು ಇಷ್ಟಪಡುವುದಿಲ್ಲ. ಯಾರು ಬರುತ್ತಾರೆ ಅಥವಾ ಯಾರು ಮುಂದುವರಿಯಲು ಬಯಸುತ್ತಾರೆ ಎಂಬುದೆಲ್ಲವೂ ಪ್ರತಿನಿಧಿಗಳ ಮೇಲೆ ಅವಲಂಬಿತವಾಗಿರುತ್ತದೆ.
ಪ್ರಶ್ನೆ: ಯುವಕರಿಗೆ ನಿಮ್ಮ ಸಹಾಯವನ್ನು ನೀಡುತ್ತೀರಾ?
ಉತ್ತರ: ನಾವು ನಮ್ಮ ಮಾರ್ಗದರ್ಶನವನ್ನು ನಿಖರವಾಗಿ ಮತ್ತು ಅಗತ್ಯವಿರುವಾಗ ಒದಗಿಸುತ್ತೇವೆ, ಆದರೆ ಪ್ರತಿದಿನವೂ ಅಲ್ಲ.
ಪ್ರಶ್ನೆ: ಈಗಲೂ ಬಿಸಿಸಿಐ ಆಡಳಿತದಲ್ಲಿ ಎನ್ ಶ್ರೀನಿವಾಸನ್ ಹೇಗೆ ಉಪಯುಕ್ತ ಎಂದು ನೀವು ಭಾವಿಸುತ್ತೀರಿ?
ಉತ್ತರ: ಹೌದು, ಅವರ ಅವಶ್ಯಕ್ತೆ ಮಂಡಳಿಗೆ ಇದೆ. ಮಂಡಳಿಗೆ ಶ್ರೀನಿವಾಸನ್ ಅವರಿಂದ ಯಾವುದೇ ಮಾರ್ಗದರ್ಶನದ ಅಗತ್ಯವಿದ್ದಾಗ ಅವರು ತಮ್ಮ ಅಭಿಪ್ರಾಯಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸಂತೋಷಪಡುತ್ತಾರೆ ಎಂದು ನನಗೆ ಶೇ.100ರಷ್ಟು ಖಚಿತವಾಗಿದೆ.
ಪ್ರಶ್ನೆ: ಪದಾಧಿಕಾರಿಗಳ ಹೆಸರನ್ನು ನೀವು ಯಾವಾಗ ನಿರ್ಧರಿಸುತ್ತೀರಿ?
ಉತ್ತರ: ಈ ವಾರ ಬಿಸಿಸಿಐನ ಹಿರಿಯ ಸದಸ್ಯರು ಸಭೆ ನಡೆಸಿ ಮುಂದಿನ ಕ್ರಮವನ್ನು ನಿರ್ಧರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.
ಪ್ರಶ್ನೆ: ಎಜಿಎಂ ಸಮಯದಲ್ಲಿ ನೀವು ಚುನಾವಣೆಯನ್ನು ನಿರೀಕ್ಷಿಸುತ್ತಿದ್ದೀರಾ?
ಉತ್ತರ: ಇಲ್ಲ.. ಪದಾಧಿಕಾರಿಗಳ ಹುದ್ದೆಗಳಿಗೆ ಚುನಾವಣೆ ನಡೆಯುವ ನಿರೀಕ್ಷೆ ನನಗಿಲ್ಲ. ಎಲ್ಲರೂ ಸರ್ವಾನುಮತದಿಂದ ಕೂಡುವ ಸಾಧ್ಯತೆ ಇದೆ ಎಂದು ಈಟಿವಿ ಭಾರತ್ ನಡೆಸಿರುವ ಸಂದರ್ಶನದಲ್ಲಿ ನಿರಂಜನ್ ಶಾ ಮಾಹಿತಿಯನ್ನು ಹಂಚಿಕೊಂಡರು.