ಹೈದರಾಬಾದ್: ದುಬೈನ ಕೊಕೊ ಕೋಲಾ ಅರೆನಾದಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡಕ್ಕೆ 1.60 ಕೋಟಿ ರೂ.ಗೆ ಭಾರತ ಮತ್ತು ಸೌರಾಷ್ಟ್ರ ವೇಗಿ ಜಯದೇವ್ ಉನದ್ಕತ್ ಬಿಡ್ ಆದರು. ಕೋಟಿ ಮೊತ್ತಕ್ಕೆ ಬಿಡ್ ಆದ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ಉನಾದ್ಕತ್ ಇದು ತಮ್ಮ ವೃತ್ತಿಜೀವನದಲ್ಲಿ ನೂತನ ಹಂತ ಎಂದು ಹೇಳಿಕೊಂಡಿದ್ದಾರೆ.
-
From Umran's territory to Umran's home 🧡
— SunRisers Hyderabad (@SunRisers) December 19, 2023 " class="align-text-top noRightClick twitterSection" data="
Our #Riser Jaydev has a special message for Hyderabad 🙌#HereWeGOrange pic.twitter.com/fKzvbQZDXH
">From Umran's territory to Umran's home 🧡
— SunRisers Hyderabad (@SunRisers) December 19, 2023
Our #Riser Jaydev has a special message for Hyderabad 🙌#HereWeGOrange pic.twitter.com/fKzvbQZDXHFrom Umran's territory to Umran's home 🧡
— SunRisers Hyderabad (@SunRisers) December 19, 2023
Our #Riser Jaydev has a special message for Hyderabad 🙌#HereWeGOrange pic.twitter.com/fKzvbQZDXH
ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಐಪಿಎಲ್ ಆಟಗಾರ ಜಯದೇವ್ ಹೇಳಿದ್ದಾರೆ. "ನನಗೆ ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಇರುವುದಕ್ಕೆ ತುಂಬಾ ಸಂತೋಷವಾಗಿದೆ. ಹರಾಜು ನಮಗೆ ಉತ್ತಮವಾಗಿತ್ತು. ಹರಾಜು ನನಗೆ ವಿಭಿನ್ನ ಅಂಶವಾಗಿದೆ. ಇದು ನನ್ನ ವೃತ್ತಿಜೀವನದಲ್ಲಿ ಹೊಸ ಹಂತವಾಗಿದೆ"ಎಂದು ಹರ್ಷಚಿತ್ತರಾಗಿ ಹೇಳಿದರು.
ಉನದ್ಕತ್ ಅವರಿಗೆ ಇಲ್ಲಿನ ಉಪ್ಪಲ್‌ನಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣ ಹೊಸ ‘ಹೋಮ್‌ಗ್ರೌಂಡ್’ ಆಗಲಿದೆ. ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ರೂ.ಗೆ ಸನ್‌ರೈಸಸ್ ಹೈದರಾಬಾದ್ ತಂಡಕ್ಕೆ ಸೇರಿಕೊಂಡಿದ್ದಾರೆ. ಅವರೊಂದಿಗೆ ಭಾರತಕ್ಕಾಗಿ ನಾಲ್ಕು ಟೆಸ್ಟ್ ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿರುವ ಉನಾದ್ಕತ್, ವಿಶ್ವಕಪ್ ವಿಜೇತ ನಾಯಕನೊಂದಿಗೆ ಆಡಲು ಮತ್ತು ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಎಡಗೈ ವೇಗಿ ಮತ್ತು ಬಲಗೈ ಬ್ಯಾಟರ್ ಆಗಿರುವ ಜಯದೇವ್ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಬ್ಯಾಟಿಂಗ್ ಸಾಥ್ ನೀಡಲಿದ್ದಾರೆ. "ನಾವು ಟ್ರೋಫಿ ಗೆಲ್ಲುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು 32 ವರ್ಷದ ಉನಾದ್ಕತ್ ಹೇಳಿದರು.
-
Hyderabad ki JAY 🙏#HereWeGOrange pic.twitter.com/gctg82CpuS
— SunRisers Hyderabad (@SunRisers) December 19, 2023 " class="align-text-top noRightClick twitterSection" data="
">Hyderabad ki JAY 🙏#HereWeGOrange pic.twitter.com/gctg82CpuS
— SunRisers Hyderabad (@SunRisers) December 19, 2023Hyderabad ki JAY 🙏#HereWeGOrange pic.twitter.com/gctg82CpuS
— SunRisers Hyderabad (@SunRisers) December 19, 2023
ಈ ಹಿಂದೆ ಮುಂಬೈ ಇಂಡಿಯನ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಐಪಿಎಲ್ ತಂಡಗಳಲ್ಲಿ ಉನದ್ಕತ್ ಆಡಿದ್ದಾರೆ. ಐಪಿಎಲ್ನಲ್ಲಿ 94 ಪಂದ್ಯಗಳನ್ನು ಆಡಿರುವ ಉನಾದ್ಕತ್ 91 ವಿಕೆಟ್ ಪಡೆದಿದ್ದಾರೆ. 8.85ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು, 5/25ರ ಅವರ ಅತ್ಯುತ್ತಮ ಬೌಲಿಂಗ್ ಅಂಕಿ - ಅಂಶ ಆಗಿದೆ.
-
And that’s a wrap! 🧡#HereWeGOrange pic.twitter.com/fctVnh51NI
— SunRisers Hyderabad (@SunRisers) December 19, 2023 " class="align-text-top noRightClick twitterSection" data="
">And that’s a wrap! 🧡#HereWeGOrange pic.twitter.com/fctVnh51NI
— SunRisers Hyderabad (@SunRisers) December 19, 2023And that’s a wrap! 🧡#HereWeGOrange pic.twitter.com/fctVnh51NI
— SunRisers Hyderabad (@SunRisers) December 19, 2023
ಉನದ್ಕತ್ ಭಾರತ ಪರ 10 ಟಿ20 ಪಂದ್ಯಗಳನ್ನಾಡಿದ್ದು, 14 ವಿಕೆಟ್ ಪಡೆದಿದ್ದಾರೆ. ಅವರು 2016 ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಟಿ20 ಚೊಚ್ಚಲ ಪಂದ್ಯವನ್ನು ಆಡಿದರು. ಮತ್ತು ಜುಲೈ 2023ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು.
ಇದನ್ನೂ ಓದಿ: ಐಪಿಎಲ್ ಹರಾಜು 2024: ಹರ್ಷಲ್ ಪಟೇಲ್ಗೆ 11.75 ಕೋಟಿ ಕೊಟ್ಟ ಪಂಜಾಬ್ ಕಿಂಗ್ಸ್