ಮ್ಯಾಂಚೆಸ್ಟರ್(ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ಗಳ ಅಂತರದ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಇಂಗ್ಲೆಂಡ್ ನೀಡಿದ್ದ 260ರನ್ಗಳ ಗುರಿ ಬೆನ್ನತ್ತಿದ ಭಾರತ 42.1 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 261 ರನ್ಗಳಿಕೆ ಮಾಡಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗ 2 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿತು.
ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ಗೆ ಹಾರ್ದಿಕ್ ಪಾಂಡ್ಯ ಮತ್ತು ಚಹಾಲ ದಾಳಿಗೆ 259ರನ್ ಸಾಧಾರಣ ಮೊತ್ತವನ್ನು ನೀಡಿತ್ತು. ಈ ಗುರಿಯನ್ನು ಬೆನ್ನುತ್ತಿದ ಭಾರತಕ್ಕೆ ಟೋಪ್ಲೆ ಕಾಡಿದರು. ಭಾರತ ತಂಡ ಮೊದಲು ಮೂವರನ್ನು ಬೇಗ ಕಳೆದುಕೊಂಡಿತು. ಶಿಖರ್ ಧವನ್ 1ರನ್ ಹಾಗೂ ರೋಹಿತ್ ಶರ್ಮಾ 17ರನ್ಗೆ ವಿಕೆಟ್ ಚೆಲ್ಲಿದ್ದಾರೆ. ನಂತರ ಬಂದ ವಿರಾಟ್ ಕೊಹ್ಲಿ(17) ಮತ್ತೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದಾರೆ.
-
Rishabh Pant, you beauty!
— BCCI (@BCCI) July 17, 2022 " class="align-text-top noRightClick twitterSection" data="
Take a bow 💯💥👏#TeamIndia #ENGvIND pic.twitter.com/6bB6JWV8LW
">Rishabh Pant, you beauty!
— BCCI (@BCCI) July 17, 2022
Take a bow 💯💥👏#TeamIndia #ENGvIND pic.twitter.com/6bB6JWV8LWRishabh Pant, you beauty!
— BCCI (@BCCI) July 17, 2022
Take a bow 💯💥👏#TeamIndia #ENGvIND pic.twitter.com/6bB6JWV8LW
ಪಂತ್ ಮತ್ತ ಹಾರ್ದಿಕ್ ಆಸರೆ: ನಂತರ ಬಂದ ಸೂರ್ಯ ಕುಮಾರ್(16) ಯಾದವ್, ರಿಷಬ್ ಪಂತ್ ಜೊತೆಗೆ ಜಾಸ್ತಿ ಹೊತ್ತು ಆಡಲಿಲ್ಲ. ಉತ್ತಮ ಬೌಲಿಂಗ್ ಪ್ರದರ್ಶಸಿದ್ದ ಹಾರ್ದಿಕ್ ಮತ್ತೆ ಬ್ಯಾಟಿಂಗ್ನಲ್ಲಿ ಗುಡುಗಿದರು. ಇಂಗ್ಲೆಂಡ್ ಬೌಲರ್ಗಳನ್ನು ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಕಾಡಿದರು. ಹಾರ್ದಿಕ್ ಪಾಂಡ್ಯ 55 ಎಸೆತಗಳಲ್ಲಿ 10 ಬೌಡರಿಗಳೊಂದಿಗೆ 71 ರನ್ನ ಬಿರುಸಿನ ಆಟ ಪ್ರದರ್ಶಿಸಿದರು.
ರಷಬ್ ಶತಕ: ರಿಷಬ್ ಪಂತ್ ಅದ್ಭುತ ಆಟ ಪ್ರದರ್ಶಿಸಿದರು. 133 ಎಸೆತದಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್ನಿಂದ 117 ರನ್ಗಳಿಸಿದರು. ಹಾರ್ದಿಕ್ ನಂತರ ಬಂದ ಜಡೇಜ 7* ರನ್ಗಳಿಸಿ ಅಜೇಯರಾಗಿ ಉಳಿದರು.
ಇಂಗ್ಲೆಂಡ್ ಪರ ಟೋಪ್ಲೆ 3, ಓವರ್‌ಟನ್ 1 ವಿಕೆಟ್ ಪಡೆದರು.
ಇದನ್ನೂ ಓದಿ : 259ರನ್ಗೆ ಇಂಗ್ಲೆಂಡ್ ಆಲ್ಔಟ್ : ಭಾರತಕ್ಕೆ ಆರಂಭಿಕ ಆಘಾತ