ಬರ್ಮಿಂಗ್ಹ್ಯಾಮ್: ಕಳೆದ ಎರಡೂವರೆ ವರ್ಷಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಬರೋಬ್ಬರಿ 5 ತಿಂಗಳ ಬಳಿಕ ಟಿ-20 ಕ್ರಿಕೆಟ್ ತಂಡಕ್ಕೆ ಮರಳಿದ್ದು, ಅವರ ಬ್ಯಾಟಿಂಗ್ ಪ್ರದರ್ಶನದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಕೇವಲ 1ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ರೋಹಿತ್ ಶರ್ಮಾ 31 ರನ್ಗಳಿಕೆ ಮಾಡಿ ಔಟಾಗುತ್ತಿದ್ದಂತೆ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ ತಾವು ಎದುರಿಸಿದ 3ನೇ ಎಸೆತದಲ್ಲಿ 34 ವರ್ಷದ ರಿಚರ್ಡ್ಗೆ ವಿಕೆಟ್ ಒಪ್ಪಿಸಿದ್ದಾರೆ.
-
That's outrageous, @dmalan29! 👏
— England Cricket (@englandcricket) July 9, 2022 " class="align-text-top noRightClick twitterSection" data="
Kohli departs...
Scorecard/clips: https://t.co/aZbATuE7p7
🏴 #ENGvIND 🇮🇳 pic.twitter.com/XPVQfyKLhH
">That's outrageous, @dmalan29! 👏
— England Cricket (@englandcricket) July 9, 2022
Kohli departs...
Scorecard/clips: https://t.co/aZbATuE7p7
🏴 #ENGvIND 🇮🇳 pic.twitter.com/XPVQfyKLhHThat's outrageous, @dmalan29! 👏
— England Cricket (@englandcricket) July 9, 2022
Kohli departs...
Scorecard/clips: https://t.co/aZbATuE7p7
🏴 #ENGvIND 🇮🇳 pic.twitter.com/XPVQfyKLhH
ಮೊದಲ ಟಿ-20 ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ, ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ದೀಪಕ್ ಹೂಡಾ ಅವರನ್ನ ಹೊರಗಿಟ್ಟು ಅನುಭವಿ ವಿರಾಟ್ಗೆ ಕಣಕ್ಕಿಳಿಸಲಾಗಿತ್ತು. ಈ ಪಂದ್ಯದಲ್ಲಿ ಅವರ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಮೂಡಿ ಬಂದಿಲ್ಲ. ಹೀಗಾಗಿ, ಮತ್ತೊಮ್ಮೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಮುಂಬರುವ ಟಿ-20 ವಿಶ್ವಕಪ್ಗೆ ಬಲಿಷ್ಠ ಪ್ಲೇಯಿಂಗ್ XI ತಂಡ ಕಟ್ಟುವ ಇರಾದೆ ಹೊಂದಿರುವ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಫಾರ್ಮ್ ಹೆಚ್ಚಿನ ತಲೆನೋವಾಗಿದೆ. ಇವರನ್ನ ತಂಡದಿಂದ ಹೊರಗಿಟ್ಟು, ಯುವ ಪ್ಲೇಯರ್ಸ್ಗೆ ಚಾನ್ಸ್ ನೀಡಬೇಕಾ ಅಥವಾ ಇವರನ್ನೇ ತಂಡದಲ್ಲಿ ಮುಂದುವರೆಸಬೇಕಾ ಎಂಬ ಗೊಂದಲದಲ್ಲಿ ಆಯ್ಕೆ ಸಮಿತಿ ಇದೆ.
ವಿರಾಟ್ ಕೈಯಲ್ಲಿ ಕೇವಲ 4 ಪಂದ್ಯ: ಎರಡನೇ ಟಿ-20 ಪಂದ್ಯದಲ್ಲಿ ಫೇಲ್ ಆಗಿರುವ ವಿರಾಟ್ ಕೈಯಲ್ಲಿ ಇದೀಗ ಒಂದು ಏಕದಿನ ಹಾಗೂ ಮೂರು ಏಕದಿನ ಪಂದ್ಯಗಳು ಮಾತ್ರ ಉಳಿದಿವೆ. ಇಲ್ಲಿ ಉತ್ತಮವಾದ ಪ್ರದರ್ಶನ ನೀಡದೇ ಹೋದರೆ ಅವರು ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಬಹಳ ವಿರಳ ಎನ್ನಲಾಗ್ತಿದೆ.
ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ರಂತಹ ಪ್ಲೇಯರ್ ಇರುವ ಕಾರಣ, ಕೊಹ್ಲಿ ಸ್ಥಾನ ಉಳಿಸಿಕೊಳ್ಳುವುದು ತುಂಬಾ ಮಹತ್ವ ಪಡೆದುಕೊಂಡಿದೆ.
ಟ್ರೋಲ್ಗೆ ಗುರಿಯಾದ ವಿರಾಟ್: ಅತ್ಯುತ್ತಮ ಫಾರ್ಮ್ನಲ್ಲಿದ್ದ ದೀಪಕ್ ಹೂಡಾಗೆ ಹೊರಗಿಟ್ಟು, ವಿರಾಟ್ ಕೊಹ್ಲಿಗೆ ಚಾನ್ಸ್ ನೀಡುವ ಮೂಲಕ ತಂಡ ಕೈಸುಟ್ಟುಕೊಂಡಿದ್ದು, ಈ ವಿಷಯವನ್ನಿಟ್ಟುಕೊಂಡು ಅನೇಕರು ಕೊಹ್ಲಿಯನ್ನ ಟ್ರೋಲ್ ಮಾಡಿದ್ದಾರೆ.