ETV Bharat / sports

'ಪಾಂಡ್ಯರನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ಕಾಣಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ'

ಪಾಂಡ್ಯ ಬೌಲಿಂಗ್ ಮಾಡುವುದಕ್ಕೆ ಸಾಧ್ಯವಾಗದೇ ಇರುವುದೇ ಅವರನ್ನು ಟೆಸ್ಟ್​ ತಂಡದಲ್ಲಿ ಅವಕಾಶವಂಚಿತರನ್ನಾಗುವಂತೆ ಮಾಡಿದೆ. ಇದೇ ವಿಚಾರವನ್ನು ನಾಯಕ ಮತ್ತು ಸ್ವತಃ ಹಾರ್ದಿಕ್ ಪಾಂಡ್ಯ ಕೂಡ ಹೇಳಿದ್ದಾರೆ. ಹಾಗಾಗಿ, ಟೆಸ್ಟ್ ತಂಡದಲ್ಲಿ ಅವರನ್ನು ಕಾಣುವುದಕ್ಕೆ ಕೆಲವು ಸಮಯ ಬೇಕಾಗಬಹುದು..

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
author img

By

Published : May 9, 2021, 7:53 PM IST

ಮುಂಬೈ : ಮುಂದಿನ ತಿಂಗಳು ಆಂಗ್ಲರ ನಾಡಿನಲ್ಲಿ ನಡೆಯುವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಿಲ್ಲ.

ಇದು ಅವರನ್ನು ಕೆಲವು ಸಮಯವರೆಗೆ ವೈಟ್​ ಜರ್ಸಿಯಲ್ಲಿ ಕಾಣಲು ಸಿಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಸ್ಥಳಗಳಲ್ಲಿ ಹಾರ್ದಿಕ್ ಪಾಂಡ್ಯರಂತಹ ಬೌಲರ್​ಗಳ ಅವಶ್ಯಕತೆಯಿರುತ್ತದೆ. ಆದರೆ, ಮುಂಬೈ ಇಂಡಿಯನ್ಸ್ ತಂಡದ ಆಲ್​ರೌಂಡರ್​ ಫಿಟ್​ನೆಸ್​​ ಸಮಸ್ಯೆ ಅವರನ್ನು ಅನಿವಾರ್ಯವಾಗಿ ತಂಡದಿಂದ ಕೈಬಿಡುವಂತೆ ಮಾಡಿದೆ ಎಂದು ಆಕಾಶ್ ತಿಳಿಸಿದ್ದಾರೆ.

ಬಿಸಿಸಿಐ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ ಮತ್ತು 5 ಪಂದ್ಯಗಳ ಟೆಸ್ಟ್ ಸರಣಿಗಾಗಿ 20 ಸದಸ್ಯರ ತಂಡವನ್ನು ಶುಕ್ರವಾರ ಘೋಷಣೆ ಮಾಡಿದೆ. ಇದರಲ್ಲಿ ಫಾಸ್ಟ್ ಬೌಲಿಂಗ್ ಆಲ್​ರೌಂಡರ್ ವಿಭಾಗದಿಂದ ಶಾರ್ದುಲ್ ಠಾಕೂರ್​ರನ್ನು ಹಾಗೂ 4 ಸ್ಪಿನ್ ಬೌಲಿಂಗ್ ಆಲ್​ರೌಂಡರ್​ಗಳು ಮತ್ತು 4 ವೇಗದ ಬೌಲರ್​ಗಳನ್ನು ಆಯ್ಕೆ ಮಾಡಿದೆ.

"ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್ ಆಡಬೇಕಾದ ಸ್ಥಳವಿದ್ದರೆ ಅದು ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ. ಇಂತಹ ಸ್ಥಳಗಳಲ್ಲಿ ಮಧ್ಯಮ ವೇಗಿಗಳ ಅಗತ್ಯವಿರುತ್ತದೆ " ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

"ಅವರು ಡಬ್ಲ್ಯೂಟಿಸಿ ಫೈನಲ್​ ತಂಡದಲ್ಲಿ ಇಲ್ಲದಿದ್ದರೆ ಒಳ್ಳೆಯದು. ಆದರೆ, ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಿಗೆ ಹೆಸರಿಸಿರುವ ತಂಡದಲ್ಲೂ ಕೂಡ ಅವರ ಹೆಸರಿಲ್ಲ. ಇದು ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್​ನಲ್ಲಿ ದೀರ್ಘಕಾಲ ಕಾಣಿಸದಿರಬಹುದು ಎಂಬುದನ್ನು ಸ್ಪಷ್ಟಪಡಿಸುತ್ತದೆ" ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಪಾಂಡ್ಯ ಬೌಲಿಂಗ್ ಮಾಡುವುದಕ್ಕೆ ಸಾಧ್ಯವಾಗದೇ ಇರುವುದೇ ಅವರನ್ನು ಟೆಸ್ಟ್​ ತಂಡದಲ್ಲಿ ಅವಕಾಶವಂಚಿತರನ್ನಾಗುವಂತೆ ಮಾಡಿದೆ. ಇದೇ ವಿಚಾರವನ್ನು ನಾಯಕ ಮತ್ತು ಸ್ವತಃ ಹಾರ್ದಿಕ್ ಪಾಂಡ್ಯ ಕೂಡ ಹೇಳಿದ್ದಾರೆ. ಹಾಗಾಗಿ, ಟೆಸ್ಟ್ ತಂಡದಲ್ಲಿ ಅವರನ್ನು ಕಾಣುವುದಕ್ಕೆ ಕೆಲವು ಸಮಯ ಬೇಕಾಗಬಹುದು ಎಂದು ಚೋಪ್ರಾ ತಿಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಅಲ್ಲದೆ, ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಮತ್ತು ಕುಲ್ದೀಪ್ ಯಾದವ್​ ಇಂಗ್ಲೆಂಡ್ ಪ್ರವಾಸದಿಂದ ವಂಚಿತರಾಗಿರುವ ಸ್ಟಾರ್ ಬೌಲರ್ ಆಗಿದ್ದಾರೆ.

ಇದನ್ನು ಓದಿ:ಶುಬ್ಮನ್ ಮೇಲಿನ ನಿರೀಕ್ಷೆಯ ಒತ್ತಡವೇ ಆತನ ವೈಫಲ್ಯಕ್ಕೆ ಕಾರಣ: ಗವಾಸ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.