ಅಹಮದಾಬಾದ್: ಭಾರತ- ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಗಳಿಸಿದೆ. ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ದಾಳಿಗೆ 5 ದಿನಗಳ ಟೆಸ್ಟ್ ಪಂದ್ಯ ಕೇವಲ ಮೂರ ದಿನಕ್ಕೆ ಅಂತ್ಯವಾಗಿತ್ತು. ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
3ನೇ ಟೆಸ್ಟ್ ಪಂದ್ಯ ಕೇವಲ ಮೂರು ದಿನಕ್ಕೆ ಅಂತ್ಯವಾಗಿದ್ದಕ್ಕೆ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಬಗ್ಗೆ ಹಲವು ಟೀಕೆಗಳು ಕೇಳಿ ಬಂದಿದ್ದವು. ಅನೇಕ ಕ್ರಿಕೆಟ್ ತಜ್ಞರು ಪಿಚ್ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಇಂಗ್ಲೆಂಡ್ ಸ್ಪಿನ್ನರ್ ಜ್ಯಾಕ್ ಲೀಚ್ ಈ ಟೀಕೆಗಳನ್ನು ನಿರಾಕರಿಸಿದ್ದಾರೆ.
ನಾನು ಕ್ರಿಕೆಟ್ ಅಭಿಮಾನಿಯಾಗಿ ಟೆಸ್ಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರೆ ಪಂದ್ಯವೂ ಐದು ದಿನಗಳು ನಡೆಯಬೇಕು ಎಂದು ಬಯಸುತ್ತೇನೆ. ಅದು ಕ್ರಿಕೆಟ್ ಅಭಿಮಾನಿಯಾಗಿ ಎಲ್ಲರೂ ಬಯಸುತ್ತಾರೆ. ಇದರಲ್ಲಿ ಪಿಚ್ ದೋಷ ಇಲ್ಲ. ಬದಲಾಗಿ ಆ ಇಬ್ಬರು ಸ್ಪಿನ್ನರ್ಗಳ ಕರಾರುವಕ್ಕು ಬೌಲಿಂಗ್ ದಾಳಿ ಇದೆ. ಅನೇಕ ಕ್ರಿಕೆಟ್ ತಜ್ಞರು ಪಿಚ್ನ್ನು ಟೀಕಿಸಿದರು, ಆದರೆ ಕೆಲವರು ಸ್ಪಿನ್ ಬೌಲಿಂಗ್ ಅನ್ನು ನಿಭಾಯಿಸಲು ಸಾಧ್ಯವಾಗದ ಬ್ಯಾಟ್ಸ್‌ಮನ್‌ಗಳ ಕೌಶಲ್ಯ ಸಮೂಹವನ್ನು ದೂಷಿಸಿದ್ದಾರೆ. ಎರಡು ದಿನಗಳಿಗಿಂತ ಹೆಚ್ಚು ಕಾಲ ಮೂರನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು ಎಂದು ಜ್ಯಾಕ್ ಲೀಚ್ ಹೇಳಿದ್ದಾರೆ.
ಓದಿ :ನಾಲ್ಕನೇ ಟೆಸ್ಟ್ಗೂ ಮುನ್ನ ನೆಟ್ಸ್ನಲ್ಲಿ ಬೆವರಿಳಿಸಿದ ಕೊಹ್ಲಿ ಮತ್ತು ರೋಹಿತ್
"ಪಿಚ್ ಬಗ್ಗೆ ನನಗೆ ಹೆಚ್ಚು ಹೇಳಲು ಇಷ್ಟ ಇಲ್ಲ. ನಾನು ಯಾವಾಗಲೂ ಹೊಸದನ್ನು ಕಲಿಯಲು ನೋಡುತ್ತಿದ್ದೇನೆ. ಅವರ ಸ್ಪಿನ್ರಗಳು ನಿಜವಾಗಿಯೂ ಉತ್ತಮವಾಗಿ ಬೌಲ್ ಮಾಡಿದರು. ಹಾಗೆಯೆ ಬ್ಯಾಟಿಂಗ್ ನಲ್ಲೂ ಉತ್ತಮ ಆಟವಾಡಿದರು. ಅವರು ಉತ್ತಮವಾದ ಆಟದಿಂದ ನಾವು ಕಲಿಯಬೇಕಾಗಿದೆ" ಎಂದು ಅವರು ಹೇಳಿದರು.
"ಆಟದ ದೃಷ್ಟಿಕೋನದಿಂದ ಪಿಚ್‌ನೊಂದಿಗೆ ನನಗೆ ಯಾವುದೇ ಸಮಸ್ಯೆಗಳಿಲ್ಲ, ಸಾಧ್ಯವಾದಷ್ಟು ಆಟದಲ್ಲಿ ಪ್ರಭಾವ ಬೀರಲು ನಾನು ಬಯಸುತ್ತೇನೆ" ಎಂದು ಲೀಚ್ ಹೇಳಿದರು.