ETV Bharat / sports

ನಮ್ಮ ತಂಡಕ್ಕೆ ನನ್ನ ಶಕ್ತಿ ಮಿರಿ ಕೊಡುಗೆ ನೀಡುತ್ತೇನೆ: ಆರ್ಚರ್

ಮೊದಲ ಟಿ -20 ಪಂದ್ಯದಲ್ಲಿ ಇಂಗ್ಲೆಂಡ್ ಭಾರತ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಇಯೊನ್ ಮೋರ್ಗಾನ್ ನೇತೃತ್ವದ ಇಂಗ್ಲೆಂಡ್​ ತಂಡ 1- 0 ಮುನ್ನಡೆ ಸಾಧಿಸಿದೆ.

author img

By

Published : Mar 13, 2021, 12:47 PM IST

Archer
ಜೋಫ್ರಾ ಆರ್ಚರ್

ಅಹಮದಾಬಾದ್: ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ನಮ್ಮ ತಂಡಕ್ಕೆ ನನ್ನ ಶಕ್ತಿ ಮಿರಿ ಕೋಡುಗೆ ನೀಡುತ್ತೇನೆ ಎಂದು ಇಂಗ್ಲೆಂಡ್​ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.

ಐದು ಪಂದ್ಯಗಳ ಟಿ - 20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಭಾರತ ವಿರುದ್ಧ ಎಂಟು ವಿಕೆಟ್ ಜಯಗಳಿಸಿದ ನಂತರ ಆರ್ಚರ್ ಈ ಹೇಳಿಕೆ ನೀಡಿದ್ದಾರೆ. ಮೊಣಕೈ ಗಾಯದ ಸಮಸ್ಯೆಯಿಂದ ಚೇತರಿಕೆ ಕಂಡು ತಂಡಕ್ಕೆ ವಾಪಸ್​​ ಆಗಿರುವ ಆರ್ಚರ್, ಮೊದಲ ಪಂದ್ಯದಲ್ಲೇ ಕೇವಲ 23 ರನ್ ನೀಡಿ ಮೂರು ವಿಕೆಟ್ ಕಿತ್ತು ಮಿಂಚಿದರು.

" ಈ ಸರಣಿ ಮುಗಿದ ಮೇಲೆ ನಾನು ವಿಶ್ವಕಪ್ ಮತ್ತು ಆಶಸ್ ಸರಣಿ ಆಡಬೇಕಾಗಿದೆ. ನಾನು ಈಗ ಮೊಣಕೈ ಗಾಯದ ಸಮಸ್ಯೆಯಿಂದ ಚೇತರಿಕೆ ಕಂಡುಕೊಂಡಿದ್ದು, ಅದರತ್ತ ಹೆಚ್ಚು ಗಮನ ಹರಿಸುತ್ತೇನೆ, ಎಂದು ಆರ್ಚರ್​ ಹೇಳಿದ್ದಾರೆ.

ಓದಿ : ಕೊಹ್ಲಿ ಡಕ್​ ಔಟ್​ ಆಗಿದ್ದು ಹೆಲ್ಮೆಟ್​ ಜಾಗೃತಿಯ ಸಂದೇಶವಾಯಿತು!

"ನಾನು ಭಾರತಕ್ಕೆ ಬಂದಾಗಿನಿಂದ ಮೊಣಕೈ ಗಾಯದ ಸಮಸ್ಯೆ ಕಾಡುತ್ತಿದೆ. ನನಗೆ ನನ್ನ ಮ್ಯಾನೇಜ್‌ಮೆಂಟ್‌ ಸರಿಯಾಗಿ ಸ್ಪಂದಿಸುತ್ತಿದ್ದು, ಮೊಣಕೈ ಗಾಯ ಉಲ್ಬಣಗೊಳ್ಳದಂತೆ ಸರಿಯಾದ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದರು.

"ಇದು ತಂಡದ ಉತ್ತಮ ಪ್ರದರ್ಶನವಾಗಿದೆ, ಈ ಸರಣಿಯಲ್ಲಿ ಇನ್ನೂ ನಾಲ್ಕು ಪಂದ್ಯಗಳು ಉಳಿದಿದ್ದು, ಭಾರತ ತಂಡ ತಿರುಗೇಟು ನೀಡಬಲ್ಲದು " ಎಂದು ಆರ್ಚರ್​​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.