ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದ ವೇಳೆ ಭಾರತದ ಎಡಗೈ ಯಾರ್ಕರ್ ಸ್ಪೆಷಲಿಸ್ಟ್ ಟಿ.ನಟರಾಜನ್ ಫಿಟ್‌ನೆಸ್ ಟೆಸ್ಟ್ ಪಾಸಾಗಿ ತಂಡವನ್ನು ಸೇರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಎಲ್ಲ ಮಾದರಿ ಕ್ರಿಕೆಟ್ಗೆ ಡೇಬ್ಯೂಟ್ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದ ನಟರಾಜನ್, ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಸರಣಿಯ ಮೊದಲ ಎರಡು ಪಂದ್ಯಗಳಿಂದ ಅವರನ್ನ ಕೈ ಬಿಡಲಾಗಿತ್ತು.
"ನಟರಾಜನ್ ಅವರು ಯೋಯೋ ಮತ್ತು 2 ಕಿ.ಮೀ ಓಟ ಸೇರಿದಂತೆ ಎಲ್ಲ ಕಡ್ಡಾಯ ಫಿಟ್‌ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಕೆಲವು ದಿನಗಳ ಹಿಂದೆ ಅಹಮದಾಬಾದ್‌ಗೆ ಬಂದಿಳಿದ್ದಾರೆ. ಕೋವಿಡ್ ಕಾರಣದಿಂದ ಅವರನ್ನ ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕಾಯಿತು" ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ : " ಔಟಾಗಿದ್ದರಿಂದ ನಿರಾಸೆಗೊಂಡಿಲ್ಲ": ಸೂರ್ಯಕುಮಾರ್ ಯಾದವ್
"ಇಂದು, ಅವರ ಕ್ಯಾರೆಂಟೈನ್ ಮುಗಿದಿದ್ದು, ಅವರು ಡಗ್ ಔಟ್‌ನಲ್ಲಿ ಕುಳಿತುಕೊಳ್ಳಬಹುದು. ಮುಂದಿನ ಪಂದ್ಯದಲ್ಲೂ ಮತ್ತು ಏಕದಿನ ಸರಣಿಗೆ ಅವರು ಖಂಡಿತವಾಗಿಯೂ ಲಭ್ಯವಿರುತ್ತಾರೆ" ಎಂದು ಅವರು ಹೇಳಿದರು.